Untitled Document
Sign Up | Login    
Dynamic website and Portals
  
Home >> Movie Home >> Reviews >> ರಾಧನ ಗಂಡ
Movie Review
ರಾಧನ ಗಂಡ
ರಾಧನ ಗಂಡ ಮುರುಗನ್ ಮೊಂಡ..
Rating :
Hero :
ಕೋಮಲ್
Heroine :
ಪೂರ್ಣ ಕುಮಾರಿ
Other Cast :
ಕುರಿ ಪ್ರತಾಪ್, ಆರ್ಯ, ಸುದರ್ಶನ್,ಮುಂತಾದವರು.
Director :
ಮುಗುಗನ್
Music Director :
ಮಣಿಕಾಂತ್ ಕದ್ರಿ
Producer :
ರವಿಕುಮಾರ್
Release Date :
14-06-2013
ರಾಧನ ಗಂಡ ಮುರುಗನ್ ಮೊಂಡ..

ಮೊಂಡ ಎಂದರೆ ಏನು ಎಂದು ತಿಳಿದಿರಿ, ಶಾರ್ಪ್ ಇಲ್ಲದ್ದು ಎಂದು ಅರ್ಥ. ಈ ಚಿತ್ರಕ್ಕೂ ಚುರುಕಿಲ್ಲದಕ್ಕೂ ಏನು ಸಂಬಂಧ ಎಂದು ಕೇಳುತ್ತಿದ್ದೀರ..? ಅದು ಈ ಚಿತ್ರ ತಂಡದ ಎಲ್ಲಾ ವರ್ಗಕ್ಕೂ ಸಲ್ಲುತ್ತದೆ. ಹಲವಾರು ಕಾಂಟ್ರವರ್ಸಿಗಳನ್ನು ತಿದ್ದಿ ತೀಡುತ್ತಲೇ ಬಂದ ಮೊಂಡ ಮುಗುಗನ್ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.

ಈ ಕತೆಯನ್ನು ಇಟ್ಟುಕೊಂಡು ಅದು ಹೇಗೆ ಚಿತ್ರತಂಡದ ಮೇಲೆ ನಿರ್ಮಾಪಕರು ಅಷ್ಟು ಮೊತ್ತದ ಹಣವನ್ನು ಹಾಕಿದರೋ ಅವರಿಗೇ ಗೊತ್ತು. ದುಡ್ಡು ಹಾಕುವ ನಿರ್ಮಾಪಕರು ಎಜುಕೇಟ್ ಆಗಬೇಕು ಎನ್ನುವುದು ಇದಕ್ಕೆ. ಒಂದು ಹೊಸಾ
ಚಿತ್ರ ತಂಡಕ್ಕಾದರೂ, ಒಬ್ಬ ಹೊಸಾ ನಾಯಕನಿಗಾದರೂ, ಕನ್ನಡದ ಕೆಲಸಗಾರರಿಗಾದರೂ ಕೆಲಸ ಕೊಟ್ಟರೆ ಅಲ್ಲಿಯಾದರೂ ತೃಪ್ತಿ ಇರುತ್ತದೆ. ಸಿನಿಮಾ ಮಾಡುವ ಹುರುಪಿನಲ್ಲಿ ಕೋಮಲ್ ಅಂತಹ ಉತ್ತಮ ಕಾಮಿಡಿ ಆಕ್ಟರ್ ಅನ್ನು ಹೀರೋ

ಮಾಡಿ ಯಶಸ್ಸನ್ನು ಕಳೆದುಕೊಳ್ಳುವಂತೆ ಮಾಡಬಾರದು. ನಂದೀಶ ಆದ ನಂತರ ಕೋಮಲ್ ಎಚ್ಚೆತ್ತುಕೊಳ್ಳಬೇಕಾಗಿತ್ತು, ಈಗಲೂ ಅವರು ಸರಿಯಾದ ಕತೆಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಜನರಿಗೆ ಅವರ ಮೇಲೆ ನಂಬಿಕೆ ಹೋಗುವುದರಲ್ಲಿ ಅನುಮಾನವಿಲ್ಲ. ಇನ್ನು ಕತೆಯ ವಿಷಯಕ್ಕೆ ಬರೋಣ.. ಒಬ್ಬ ಸೋಬೇರಿ, sಸಾಲಗಾರ, ಮುಗ್ಧ ಕೃಷ್ಣ (ಕೋಮಲ್). ಅವನು ಎಲ್ಲರಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಅವನಿಗೆ ಲಗಾಮು ಹಾಕುವ ಪ್ರಿತಿಯ ಹುಡುಗಿ ರಾಧಿಕ(ಪೂರ್ಣ). ಹಳ್ಳಿಯಿಂದ ಓಡಿ ಬರುತ್ತಾಳೆ. ಇಬ್ಬರನ್ನು ಮದುವೆ ಮಾಡಿಸುವ ಶಿವ(ಪ್ರತಾಪ್). ಹೀಗೆ ಅವನ ಆಶ್ರಯದಲ್ಲಿ ಇಬ್ಬರು ಇರುವಾಗ, ರಾಧಿಕಾಳಿಗೆ ನಾಯಕಿಯಾಗುವ ಛಾನ್ಸ್ ಸಿಗುತ್ತದೆ. ಅವಳು ನಾಯಕಿಯು ಆಗುತ್ತಾಳೆ. ಡೈರೆಕ್ಟರ್ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುತ್ತಾಳೆ. ಅವಳ ಟಚಪ್ಪ್ ಬಾಯ್ ಆಗಿ ಕೆಲಸ ಮಾಡುತ್ತಿದ ಕೃಷ್ಣನಿಗೆ ಅದು ಆಗುವುದಿಲ್ಲ. ಅಲ್ಲಿಂದ ಹೊರ ಹೋಗುತ್ತಾನೆ. ಡೈರೆಕ್ಟರ್ ಮತ್ತು ಕೃಷ್ಣನ ನಡುವೆ ನಡೆಯುವ ಆಟ ಮೊದಲಾರ್ಧ.

ಮುಂದಿನ ಹಂತದಲ್ಲಿ ಸಾವಿನ ಬಾಗಿಲಲ್ಲಿರುವ ಬಾಬಾನನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಕ್ರಿಮಿನಲ್ ಮಗ. ಅವನಿಗೂ ಕೃಷ್ಣನಿಗು ಹೇಗೆ ಸಂಬಂಧ..?ಏನು ನಡೆಯುತ್ತದೆ..? ಎನ್ನುವುದನ್ನು ತುಂಬಾ ತಾಳ್ಮೆ ಇಟ್ಟು ನೋಡುವ ಗುಣ ನಿಮ್ಮಲಿದ್ದರೆ, ಚಿತ್ರ ಮಂದಿರದಲ್ಲಿ ನೋಡಿ.

ಚಿತ್ರದ ಮೊದಲಿನಿಂದಲೂ ಸುಮ್ಮನೆ ಸಾಗುವ ಕತೆ, ಕೆಲವು ಕಡೆ ಕೋಮಲ್ ಪಂಚಿಗ್ ಡೈಲಾಗ್ ನಗಿಸುತ್ತದೆ. ಮೊದಲಾರ್ದ ಹೇಗೋ ಸಹಿಸಿ ಕೊಂಡು ಕೂರಬಹುದು. ಸೆಕೆಂಡ್ ಆಫ್ ಶೆಕೆ ಎನಿಸುತ್ತದೆ. ತುಂಬಾ ಲ್ಯಾಗಿಂಗ್ ದೃಶ್ಯಗಳು, ಬೋರಿಂಗ್ ಡೈಲಾಗ್‌ಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಬಾಂಬೆಯ ಎಪಿಸೋಡ್ ಫುಲ್ ವೇಸ್ಟ್ ಆಫ್ ಮನಿ ಮತ್ತು ಟೈಂ. ಅದರೊಂದಿಗೆ ನೋಡುಗರ ಸಮಯವನ್ನು ಹಾಳುಮಾಡುತ್ತ ನಿರ್ದೇಶಕ ಮುಗುಗನ್ ಕತೆ ಹೇಳುತ್ತಲ್ಲೇ ಹೋಗುತ್ತಾರೆ. ಆಗಾಗ ಅಬ್ಬರಿಸುವ ವಿಲನ್ ಇನ್ನೂ ಬೊರ್ ಮಾಡುತ್ತಾನೆ.

ಕೋಮಲ್ ತಮ್ಮ ನಟನೆಯನ್ನು ಚೆನ್ನಾಗಿ ಮಾಡಿದ್ದಾರೆ. ನಾಯಕಿ ಪೂರ್ಣ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಹಾಗೆ ಕುರಿ ಪ್ರತಾಪ್ ಉತ್ತಮವಾಗಿ ಅಭಿನಯಿಸಿದ್ದಾರೆ. ಡೈರೆಕ್ಟರ್ ಪಾತ್ರದಾರಿ ಹಾಗು ವಿಲನ್ ಪಾತ್ರದಾರಿ ಇಬ್ಬರೂ ಓವರ್ ಆಕ್ಟಿಂಗ್ ಮಾಡಿದ್ದಾರೆ. ಮಿಕ್ಕಂತೆ ಸುದರ್ಶನ್, ಆರ್ಯ ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಮಣಿಕಾಂತ್ ಕದ್ರಿಯವರ ಒಂದು ಟಪಾನ್ ಸಾಂಗ್ ಗಂಟಾಕಿದ್ ಯಾರು.. ಸಾಂಗ್ ಚೆನ್ನಾಗಿದೆ. ಇರುವೆ ಕಚ್ಚಿದೆ.. ಗ್ರಾಫಿಕ್ ವೇಸ್ಟ್. ಛಾಯಾಗ್ರಹಣ, ಸಂಕಲನ ಪರವಾಗಿಲ್ಲ.
ಒಟ್ಟಾರೆ ಸಿನಿಮಾದಲ್ಲಿ ಇರುವ ಅಂಶಗಳಿಗಿಂತ ಇಲ್ಲದ್ದೆ ಹೆಚ್ಚು.ವರದಿ: ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited