Untitled Document
Sign Up | Login    
Dynamic website and Portals
  
Home >> Movie Home >> Reviews >> ಅದ್ದೂರಿ
Movie Review
ಅದ್ದೂರಿ
Rating :
Hero :
ಧ್ರುವಸರ್ಜಾ
Heroine :
ರಾಧಿಕಾ ಪಂಡಿತ್
Other Cast :
ತರುಣ್, ರಾಜುತಾಳಿಕೋಟೆ, ಸತೀಶ್ ಮತ್ತು ತಬಲನಾಣಿ
Director :
ಎ.ಪಿ. ಅರ್ಜುನ್
Music Director :
ವಿ. ಹರಿಕೃಷ್ಣ
Producer :
ಕೀರ್ತಿ ಸ್ವಾಮಿ, ಶಂಕರ್ ರೆಡ್ಡಿ
Release Date :
15-06-2012
ಅಂಬಾರಿ ನಿರ್ದೇಶಿಸಿ ಅಂಬರಕ್ಕೆ ಏರಿದ ಅರ್ಜುನ್ ’ಅದ್ದೂರಿ’ ಮಾಡಿ ತಮ್ಮ ನಿರ್ದೇಶನದಲ್ಲಿ ಅದ್ದೂರಿತನ ತೋರಿಸಿ ಯಶಸ್ವಿಯಾಗಿದ್ದಾರೆ. ಅಂಬಾರಿಯಲ್ಲಿ ನಾಯಕನಿಗೆ ಸೈಕಲ್ ಕೊಡಿಸಿದರೆ ಅದ್ದೂರಿಯಲ್ಲಿ ಹೆಸರಿಗೆ ತಕ್ಕಂತೆ ಜಬರ್‌ದಸ್ತ್ ಬೈಕ್‌ನಲ್ಲಿ ಓಡಾಡುವುದಕ್ಕೆ ಅಷ್ಟೇ ಅದ್ದೂರಿ ಲಕೋಶನ್‌ನಲ್ಲಿ ಚಿತ್ರೀಕರಿಸಿದ್ದಾರೆ ಉಡಾಫೆ ನಾಯಕನಿಗೆ ಅದ್ದೂರಿ ಕ್ಯಾಸ್ಟೂಮ್ ಓಡಾಡುವುದಕ್ಕೆ ಬೈಕ್ ಜೊತೆಗೆ ನಾಯಕಿ ಇರುತ್ತಾಳೆ.

ನಾಯಕ ನಾಯಕಿ ಇದ್ದರೆ ಪ್ರೀತಿ ಇರಬೇಕು ಅನ್ನುವುದು ಸಿನಿಮಾದ ನಿಯಮ. ಇದರಲ್ಲಿ ಅದೇ ತರಹ ಸನ್ನಿವೇಶಗಳು ಬಂದು ಪ್ರೀತಿ ಇದ್ದಾಗ ಮದುವೆ ಆಗಬೇಕು ಅನ್ನೋದು ಪಾಲಿಸಿ. ಅದು ಆಗುತ್ತದಾ ಇಲ್ಲವಾ ಎನ್ನುವುದೆ ಅದ್ದೂರಿಯ ಕಥೆಯಿದೆ. ಒನ್ ಲೈನ್ ಕಥೆಯಿದ್ದರೂ ಅದ್ಬುತವಾತ ಲೋಕೆಶನ್ ತೋರಿಸಿ ಇಂಪಾದ ಹಾಡುಗಳನ್ನು ಕೇಳಿಸಿ ೨.೧೫ ಘಂಟೆ ಸೀಟಿನಲ್ಲಿ ಕೂರಿಸಿರುವುದು ನಿರ್ದೇಶಕ ಜಾಣ್ಮೆ ತೋರಿಸುತ್ತದೆ. ಪ್ರೀತಿಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಮದುವೆ ದಿನದಂದು ನಾಯಕ ಬರಲಿಲ್ಲವೆಂದು ಅವನಿಂದ ದೂರವಾಗಲು ದೆಹಲಿಗೆ ಹೊರಟು ನಿಂತಾಗ ಒಂದು ವಾರದ ರೈಲ್ವೆ ಟಿಕೇಟ್ ಸಿಗುತ್ತದೆ. ಆ ಏಳು ದಿನದಲ್ಲಿ ಅವಳಿಗೆ ಮತ್ತೆ ನಾಯಕನ ಮೇಲೆ ಪ್ರೀತಿ ಹೇಗೆ ಬರುತ್ತದೆ ಎಂಬುದನ್ನು ನವಿರಾಗಿ ತೋರಿಸಲಾಗಿದೆ.

ಕಥೆಯು ಫ್ಲಾಷ್‌ಬ್ಯಾಕ್ ಮತ್ತು ಫ್ಲಾಷ್‌ಕಟ್‌ನಲ್ಲಿ ಪಯಣಿಸುತ್ತಾ ಅವಳು ಹೇಗಿದ್ದಳು ಹೇಗಾಗಿದ್ದಾಳೆ, ಎಂಬುದನ್ನು ಅದ್ದೂರಿಯಾಗಿ ಹಾಡುಗಳಿಗೆ ಫಾರೀನ್ ಲೋಕೆಶನ್ ತೋರಿಸಿ ಕಣ್ಣಿಗೆ ತಂಪು ನೀಡಿದೆ. ಯೋಗರಾಜ್‌ಭಟ್ ಶೈಲಿಯ ಸಂಭಾಷಣೆ ಅಲ್ಲಲ್ಲಿ ಕಾಣಸಿಗುತ್ತದೆ. ಪ್ರತಿ ಸಿನಿಮಾದಿಂದ ಪಾತ್ರದಲ್ಲಿ ಸುಧಾರಣೆಯಾಗುತ್ತಿರುವ ರಾಧಿಕಾ ಪಂಡಿತ್ ಪ್ರತಿಸೀನ್‌ನಲ್ಲಿ ಚೆಂದಕಾಣುತ್ತಾರೆ ಅದರಲ್ಲೂ ಮುದ್ದಾಗಿ ಕೋಪಮಾಡಿಕೊಂಡು, ಬೈಯುವಾಗ ಅವರ ಕಣ್ಣುಗಳ ಹಾವಭಾವ ಪಾತ್ರಕ್ಕೆ ಮತ್ತೊಂದು ಗರಿ ಸಿಕ್ಕಂತೆ ಆಗಿದೆ.

ಮೂದಲ ಚಿತ್ರದಲ್ಲಿ ಬ್ರಾಂಡ್ ಸಿಕ್ಸರ್ ಬಾರಿಸಿರುವ ಧ್ರುವಸರ್ಜಾ ಅದ್ಬುತ ಎನರ್ಜಿ, ಅದಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುತ್ತಿದ್ದರೆ ನೋಡುವುದಕ್ಕೆ ಚಂದವೆನಿಸುತ್ತದೆ. ಅವರು ಇಡೀ ಚಿತ್ರವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಪಟ್ಟಿರುವುದು ಎದ್ದು ಕಾಣೂತ್ತದೆ. ತರುಣ್, ರಾಜುತಾಳಿಕೋಟೆ, ಸತೀಶ್ ಮತ್ತು ತಬಲನಾಣಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದರೂ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾರೆ. ಪ್ರಾರಂಭದ ಸೀನ್ ರೈಲ್ವೆ ಸ್ಟೇಷನ್‌ನಲ್ಲಿ ಶುರುವಾದರೂ ಕ್ಲೈಮಾಕ್ಸ್ ಸೀನ್ ರೇಲ್ವೆ ಸ್ಟೇಷನ್‌ನಲ್ಲಿ ಕೊನೆಯಾಗುತ್ತದೆ. ಪ್ರೇಕ್ಷಕ ದುಡ್ಡು ಕೊಟ್ಟು ಸಿನಿಮಾಗೆ ನೋಡಲು ಹೋದರೆ ’ಅದ್ದೂರಿ’ ಮೋಸಮಾಡದೆ ಮನರಂಜನೆ ನೀಡುತ್ತದೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited