Untitled Document
Sign Up | Login    
Dynamic website and Portals
  
Home >> Movie Home >> Reviews >> ಕೇಸ್ ನಂ 18/9
Movie Review
ಕೇಸ್ ನಂ 18/9
ಮುಗ್ಧ ಪ್ರೇಮದ ನವಿರಾದ ಎಳೆ.
Rating :
Hero :
ನಿರಂಜನ್
Heroine :
ಸಿಂಧೂ ಲೋಕನಾಥ್
Other Cast :
ರಂಗಾಯಣ ರಘು, ಪ್ರತಾಪ್, ಗಿರಿಜಾಲೋಕೇಶ್, ಶ್ವೇತ, ಅಭಿ.ಕರಿಸುಬ್ಬು, ಗಿರೀಶ್ ಜತ್ತಿ.ಮುಂತಾದವರು.
Director :
ಮಹೇಶ್ ರಾವ್
Music Director :
ಅರ್ಜುನ್ ಜನ್ಯ
Producer :
ಕ್ರಾಂತಿ ಕ್ರಿಯೇಷನ್
Release Date :
02-08-2013
ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲಿ ಮಾಡುತ್ತಿರುವುದು ಪರಂಪರೆಯಿಂದ ನಡೆದುಬರುತ್ತಿರುವ ಪದ್ಧತಿ. ಅವುಗಳನ್ನು ಎಷ್ಟರ ಮಟ್ಟಿಗೆ ಕನ್ನಡೀಕರಿಸುತ್ತಾರೆ ಎನ್ನುವುದು ನಿರ್ದೇಶಕರಿಗಿರುವ ಸವಾಲು. ಅದನ್ನು ಮಹೇಶ್ ರಾವ್ ಚೆನ್ನಾಗಿ ನಿಭಾಯಿಸಿದ್ದಾರೆ. ನಮ್ಮದೇ ಕಥೆ ಎನ್ನುಂತೆ ಟ್ರೀಟ್ ಮಾಡಿದ್ದಾರೆ.

ಕನ್ನಡದಲ್ಲಿ ಇಂತಾ ಕಥೆಗಳಿಗೇನು ಕಮ್ಮಿ ಇಲ್ಲ. ಆದರೆ ಹುಡುಕುವ ಪ್ರಯತ್ನ ಮಾಡುತ್ತಿಲ್ಲ, ಹೆಕ್ಕಿ ತೆಗೆದರೂ ಅದನ್ನು ಮಾಡುವ ಸಾಹಸಕ್ಕೆ ಕೈಹಾಕುವುದಿಲ್ಲ. ಸ್ಟಾರ್ ವ್ಯಾಲ್ಯೂ ಮತ್ತು ಬಿಸಿನೆಸ್ ಆಗುವುದನ್ನು ನೋಡುತ್ತಾರೆ.

ಕಥೆ ಏನೆಂದರೆ.. ಏನೂ ಅರಿಯದ ಮುಗ್ಧ ಹುಡುಗ(ನಿರಂಜನ್), ತಂದೆ ತಾಯಿಯ ಕಷ್ಟವನ್ನು ದೂರಮಾಡಲು ದೂರದ ಪೂನಾಗೆ ಹೋಗುತ್ತಾನೆ. ಅಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ಇಲ್ಲಿ ತಂದೆ ತಾಯಿ ತೀರಿಕೊಳ್ಳುತ್ತಾರೆ. ದಿನಾ ಶೋಷಿಸುತ್ತಿದ್ದ ಮಾಲೀಕನೊಂದಿಗೆ ಜಗಳ ಮಾಡಿಕೊಂಡು ಅಲ್ಲಿಂದ ಬೆಂಗಳೂರಿಗೆ ಬರುತ್ತಾನೆ. ಇಲ್ಲಿ ಒಂದು ಬೀದಿಬದಿಯ ಊಟದ ಅಂಗಡಿಯಲ್ಲಿ ಕೆಲಸಮಾಡಲು ಪ್ರಾರಂಭಿಸುತ್ತಾನೆ. ಅಲ್ಲೇ ಹತ್ತಿರವಿದ್ದ ಅಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುವ ಹುಡುಗಿಯ ಜೊತೆ ಪ್ರೇಮಾಂಕುರವಾಗುತ್ತದೆ. ಅಷ್ಟರಲ್ಲಿ ಒಂದು ಅವಗಡ ಸಂಭವಿಸುತ್ತದೆ. ಇದರ ಮಧ್ಯೆ, ಸಾಹುಕಾರ ಹುಡುಗನ ಶೋಕಿಯ ಜೀವನದ ಲವ್ ಸ್ಟೋರಿ. ಎರಡು ಕಥೆಗಳು ಒಂದಕ್ಕೊಂದು ತಳಕು ಹಾಕಿಕೊಂಡೇ ಸಾಗುತ್ತದೆ.

ಅವಗಡದ ವಿಷಯವಾಗಿ, ಪೋಲಿಸ್ ಇನ್ವೆಸ್ಟಿಗೇಷನ್ ಪ್ರಾಂಭಿಸುತ್ತಾರೆ. ಮುಗ್ಧ ಪ್ರೇಮವನ್ನು ವ್ಯವಸ್ಥೆ ಹೇಗೆ ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಾರೆ, ಪ್ರೇಮ ಒಂದಾಗುತ್ತದ್ದ..? ಶ್ರೀಮಂತ ಹುಡುಗನ ಶೋಕಿ ಏನಾಗುತ್ತದೆ..? ಎಂಬುದನ್ನು ಸಿನಿಮಾದಲ್ಲಿ ನೋಡಿ.

ಇದೊಂದು ರಿಮೇಕ್ ಸಿನಿಮಾವಾದರೂ ಕನ್ನಡಕ್ಕೆ ತುಂಬಾ ಚೆನ್ನಾಗಿ ಹೊಂದಿಸಿಕೊಂಡಿದ್ದಾರೆ. ನಿರಂಜನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿಂಧೂ ಪಾತ್ರಕ್ಕೆ ಮೋಸಮಾಡಿಲ್ಲ. ನಾಯಕನ ಜೊತೆ ನಟಿಸಿರುವ ಹುಡುಗ ಚೆನ್ನಾಗಿ ಪರ್ಫಾರ್ಮ್ ಮಾಡಿದ್ದಾನೆ. ರಂಗಾಯಣ ರಘು ಅವರನ್ನು ವಿಭಿನ್ನವಾಗಿ ನೋಡಬಹುದು. ಗಿರಿಜಾ ಲೋಕೇಶ್, ಪ್ರತಾಪ್, ಕರಿಸುಬ್ಬು, ಅಭಿ, ಶ್ವೇತಾ ಪಂಡಿತ್, ಗಿರೀಶ್ ಜತ್ತಿ, ಮುಂತಾದವರು ತಮ್ಮ ಪಾತ್ರಗಳನ್ನು ನೈಜವಾಗಿ ನಿರ್ವಹಿಸಿದ್ದಾರೆ.

ಸಭಾಕುಮಾರ್ ಕ್ಯಾಮರ ಚೆನ್ನಾಗಿದೆ. ದೀಪೂ ಎಸ್ ಕುಮಾರ್ ಸಂಕಲನ ಉತ್ತಮ. ಹಾಡುಗಳ ಅವಶ್ಯಕತೆ ಇದೆ ಎಂದು ಅನಿಸದಿದ್ದರೂ, ನೋಡ್ಕಂಡ್ ನೋಡ್ಕಂಡ್.. ಹಾಡನ್ನು ನೈಜವಾಗಿ ಶೂಟ್ ಮಾಡಿದ್ದಾರೆ. ಮಿಕ್ಕಂತೆ ನಿಂತಲ್ಲೇ.. ಮತ್ತು ಪಾರ್ಟೀ ಸುರು... ಎರಡು ಹಾಡು ತುರುಕಿದಂತೆ ಕಾಣಿಸುತ್ತದೆ.. ರೆಗ್ಯುಲರ್ ಸಿನಿಮಾಗೆ ಹೋಲಿಸಿದರೆ ಕನ್ನಡಕ್ಕೆ ಹೊಸದೆನಿಸುತ್ತದೆ.

ವರದಿ: ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited