Untitled Document
Sign Up | Login    
Dynamic website and Portals
  
Home >> Movie Home >> Reviews >> ಚಂದ್ರ
Movie Review
ಚಂದ್ರ
ಗ್ರ್ಯಾಂಡ್ ಚಂದ್ರ'ಗ್ರಹಣ'
Rating :
Hero :
ಪ್ರೇಮ್
Heroine :
ಶ್ರೇಯ ಶರಣ್
Other Cast :
ಗಣೇಶ್ ವೆಂಕಟರಾಂ, ವಿಜಯ್ ಕುಮಾರ್. ಶ್ರೀನಾಥ್, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ,ವಿವೇಕ್, ಸುಕನ್ಯ, ಸುಮಿತ್ರ.
Director :
ರೂಪ ಅಯ್ಯರ್
Music Director :
ಗೌತಮ್ ಶ್ರೀವತ್ಸ
Producer :
ರೂಪ ಅಯ್ಯರ್, ಇಂಡಿಯಾ ಕ್ಫ್ಲಾಸಿಕ್ ಆರ್ಟ್,
Release Date :
27-06-2013
ಸಿನಿಮಾಗೆ ಹಾಕಿರುವ ಬಂಡವಾಳ ಓಕೆ, ಹಾಡುಗಳು ಓಕೆ, ಶ್ರೇಯ ಶರಣ್ ಓಕೆ, ರಿಚ್‌ನೆಸ್ ಓಕೆ. ಎಲ್ಲಾ ಓಕೆ ಆದ್ಮೇಲೆ "ಗ್ರಹಣ" ಏಕೆ..? ಅಂತೀರಾ..? ಸಿನಿಮಾ ಅಂದರೆ ಕೇವಲ ಮೇಲಿನದೆಲ್ಲಾ ಇದ್ದರೆ ಆಯಿತೆ ಒಂದು ಒಳ್ಳೆ ಕಥೆ ಇರಬೇಡವೆ..? ಉತ್ತಮ ನಿರೂಪಣೆ ಇರಬೇಡವೇ.? ಟಾಕೀಸಿನಿಂದ ಬಂಡಕೂಡಲೇ ಒಂದು ಹಾಡು ಗುನುಗಬೇಡವೇ..? ಅದು ಚೆನ್ನಾಗಿತ್ತು, ಇದು ಚೆನ್ನಾಗಿತ್ತು.., ಕಾಮಿಡಿ ಸೂಪರ್ ಎಂದು ನೆನೆಸಿಕೊಂಡು ನಗೋದು ಬೇಡವೇ..? ಅದಾವುದು ಇತೀಚಿನ ಚಿತ್ರಗಳಲ್ಲಿ ಎಲ್ಲಿಯೂ ಬಂದಿಲ್ಲ ಬಿಡಿ. ಬಂದರೂ ನೆನಪಿನಲ್ಲಿ ಉಳಿಯೋಲ್ಲ. 'ಚಂದ್ರ' ಕೂಡ ಅಂತಹ ಒಂದು ಚಿತ್ರಗಳ ಗುಂಪಿಗೆ ಸೇರಿದ್ದೆ.

ರೂಪ ಅಯ್ಯರ್ ಅವರು ಕತೆ, ಚಿತ್ರ ಕತೆ ಮಾಡಿ, ಸಂಭಾಷಣೆ ಬರೆದು, ಡ್ರಸ್ ಡಿಸೈನ್ ಮಾಡಿ, ಇನ್ನೂ ಹಲವಾರು ವಲಯಗಳಲ್ಲಿ ತಮ್ಮದೆ ಮೇಲುಗೈ ಮಾಡಿ ನಿರ್ದೇಶಿಸಿರುವ ಚಿತ್ರ ಚಂದ್ರ. ಅದು ಗ್ರ್ಯಾಂಡ್ ಚಂದ್ರಗ್ರಹಣ. ಎಲ್ಲವೂ ಚೆನ್ನಾಗಿ ಕಾಣೆಸುವಂತೆ ಮಾಡಿದ್ದಾರೆ. ಹಾಕಿರುವ ಹಣ ತೆರೆಯ ಮೇಲೆ ಕಾಣುತ್ತದೆ. ಡ್ರಸ್ಸಿಂಗ್ ಕಾಂಬಿನೇಷನ್ ಚೆನ್ನಾಗಿದೆ. ಸಂಗೀತ ಕೇಳಬಹುದು. ಓಂಕಾರದಲಿ.. ತುಂಬಾ ಚೆನ್ನಾಗಿದೆ. ಕಮರ್ಶಿಯಲ್ ಎಲಿಮೆಂಟಾಗಿ ಯಶ್‌ನನ್ನು ಸಾಂಗಿಗಾಗಿ ಬಳಸಿದ್ದಾರೆ. ಪಕ್ಕಾ ಕ್ಲಾಸಿಕಲ್ ವಿತ್ ರೊಮ್ಯಾಂಟಿಕ್ ಆಗಿ ಹೇಳಲು ಹೊರಟಿರುವ ಶೈಲಿ ಚೆನ್ನಾಗಿದೆ. ಆದರೆ ಕತೆ ತುಂಬಾ ಬಾಲ್ಯಾವಸ್ಥೆಯಲ್ಲಿದೆ. ನವಿರಾದ ರೊಮ್ಯಾಂಟಿಕ್ ಕತೆಯನ್ನು ಹೆಣೆಯುವಲ್ಲಿ ಸೋತಿದ್ದಾರೆ. ರೂಪ ಅಯ್ಯರ್ ಒಬ್ಬ ಕಲ್ಪನಾ ವ್ಯಕ್ತಿಯಾಗಿರಬಹುದು, ಅವರಿಗೆ ಅದು ಚೆಂದ ಎನಿಸಿರಬಹುದು. ಆದರೆ ನೋಡುಗನಿಗೆ ಚೆಂದ ಎನಿಸಿ, ಅವನಿಗೆ ಚಿತ್ರ ಮನರಂಜನೆಯಾಗಿರಬೇಕು.

ಕತೆಯ ವಿಷಯಕ್ಕೆ ಬಂದರೆ ಅದೇ ಹಳೆ ಕತೆಗೆ ಮೈಸೂರು ರಾಜವಂಶದ ನಂಟು ಹಾಕಿದ್ದಾರೆ. ಒಬ್ಬ ರಾಜ ಮನೆತನದ ಹುಡುಗಿ ರಾಣೆ(ಶ್ರೆಯ-ಚಂದ್ರ), ರಾಜನ ಸ್ನೇಹಿತನ ಮಗ ಚಂದ್ರಹಾಸ(ಪ್ರೇಮ್) ಹಿಮಾಲಯದಲ್ಲಿ ಆಯುರ್ವೇದ ಕಲಿಯಲು ಹೋಗಿ ಬರುತ್ತಾನೆ. ಬಂದವನಿಗೆ ರಾಣಿಯ ಮೇಲೆ ಪ್ರೀತಿಯಾಗುತ್ತದೆ. ಕುಟುಂಬ ಮರ್ಯಾದೆಯ ಪ್ರಶ್ನೆ, ಒಪ್ಪುವುದಿಲ್ಲ. ಅವಳಿಗೆ ಮತ್ತೊಂದು ಮದುವೆಯ ಸಿದ್ದತೆ ಮಾಡುತ್ತಾರೆ. ಮಿಕ್ಕಿದ ಕತೆ ನೀವೇ ಹೇಳಬಹುದು. ಇದೇನು ಅಂದ ಕಾಲದ ಕತೆಯಲ್ಲ. ಈಗಿನ ಸ್ಥಿತಿಗತಿಯಲ್ಲೇ ಓಡುವ ಕತೆ. ಅಂದೆ ಮಾಡ್ರನ್ ಯುಗದ ರಾಜ ವೈಭೋಗದ ಫ್ಯಾಮಿಲಿ ಸ್ಪೋರಿ.

ಕತೆಯಲ್ಲಿ ಏನೂ ದಮ್ಮಿಲ್ಲ. ಆದ್ದರಿಂದ ನೋಡುಗರು ಸುಮ್ಮನೆ ಶ್ರೇಯ ಮೊದಲಬಾರಿ ಕನ್ನಡದಲ್ಲಿ ಅಭಿನಯಿಸಿರುವುದರಿಂದ ನೋಡುತ್ತಾ ಕೂರಬೇಕು. ಶ್ರೇಯ ಓಕೆ. ಶ್ರೇಯ ತೆಲುಗು, ತಮಿಳು ಚಿತ್ರಗಳಿಗಿಂತ ಚೆನ್ನಾಗಿ ಕಾಣದಿದ್ದರೂ ಡಿಫರೆಂಟಾಗಿ ಕಾಣಬಹುದು. ಪ್ರೇಮ್ ಚೆನ್ನಾಗಿ ಅಭಿನಯಿಸಿದ್ದಾರೆ. ಸ್ವಲ್ಪ ಬಾಡಿ ವರ್ಕೌಟ್ ಮಾಡಿದ್ದು ವರ್ಕೌಟ್ ಆಗಿದೆ. ತಮಿಳಿನ ಸೂಪರ್ ಕಾಮಿಡಿಯನ್ ವಿವೇಕ್ ಕಾಮಿಡಿ ಇಲ್ಲಿ ವರ್ಕೌಟ್ ಆಗಿಲ್ಲ. ಮಿಕ್ಕ ಕಲಾವಿದರು ಅವರ ಪಾತ್ರಗಳಿಗೆ ಮೋಸ ಮಾಡಿಲ್ಲ. ಪಿ.ಕೆ. ಹೆಚ್ ದಾಸ್ ಕ್ಯಾಮರ ಕೈಚಳಕದಿಂದ ಎಲ್ಲಾ ಪ್ರೇಮ್ ಸುಂದರವಾಗಿ ಕಾಣುತ್ತದೆ. ಸುಂದರ ಶ್ರೇಯ, ಉತ್ತಮ ಡ್ರೆಸ್, ಗ್ರ್ಯಾಂಡ್ ಜ್ಯೂಲರಿ, ರಿಚ್ ಸೀರೆ, ಗೋಡ್ಲನ್ ಡಾಬು, ಇಯರಿಂಗ್ಸ್ ಹೀಗೆ ಇತ್ಯಾದಿ ಅಂಶಗಳನ್ನು ನೋಡುವ ಇಚ್ಚೆ ಇದ್ದವರು ಚಂದ್ರ ಚಿತ್ರಕ್ಕೆ ಹೋಗಬಹುದು.


ವರದಿ: ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited