Untitled Document
Sign Up | Login    

Food Recipes

ಬೆಣ್ಣೆ ಕುಕ್ಕೀಸ್
ಬೆಣ್ಣೆ ಕುಕ್ಕೀಸ್

Ingredients :

  • » ಬೆಣ್ಣೆ 1/2 ಕಪ್
    ಮೈದಾ 1 ಕಪ್
    ಹಾಲು ಸ್ವಲ್ಪ ( 3 ಟೀ ಸ್ಪೂನ್)
    ಸಕ್ಕರೆ (ಪೌಡರ್) 3/4 ಕಪ್
    ವೆನಿಲಾ ಎಸೆನ್ಸ್ 2 ಟೀ ಸ್ಪೂನ್
    ಬೇಕಿಂಗ್ ಪೌಡರ್ 1/2 ಟೀ ಸ್ಪೂನ್
    ಬೇಕಿಂಗ್ ಸೋಡಾ 1/4 ಟೀ ಸ್ಪೂನ್
Preparation :

How to make ಬೆಣ್ಣೆ ಕುಕ್ಕೀಸ್ :

  • ಮಾಡುವ ವಿಧಾನ

    ಕುಕ್ಕರ್ ತಳಭಾಗಕ್ಕೆ ಸ್ವಲ್ಪ ಅಡುಗೆ ಉಪ್ಪು ಹಾಕಿ ಸ್ಟವ್ ಮೇಲೆ ಇಡಿ. ಆದರೆ, ಕುಕ್ಕರ್ ವೈಟ್ ಮತ್ತು ಗ್ಯಾಸ್ಕೆಟ್ ಇಡಬೇಡಿ. ಅದು ಹಾಗೇ ಬಿಸಿಯಾಗುತ್ತಿರಲಿ. ಇನ್ನೊಂದು ಪಾತ್ರದಲ್ಲಿ ಬೆಣ್ಣೆ ಮತ್ತು ಸಕ್ಕರೆ ಹುಡಿಯನ್ನು ಚೆನ್ನಾಗಿ ಕಲಸಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಮೈದಾ ಹಾಕಿ ಕಲಸಿರಿ. (ಆದರೆ, ನಾದಬೇಡಿ. ನಾದುವುದರಿಂದ ಕುಕ್ಕೀಸ್ ಗಟ್ಟಿಯಾಗುವ ಸಾಧ್ಯತೆ ಇದೆ.) ನಂತರ ಅದಕ್ಕೆ ವೆನಿಲಾ ಎಸೆನ್ಸ್ ಹಾಕಿ ಕಲಸಿ. ಬಳಿಕ ಹಾಲು ಹಾಕಿ ಕಲಸಿ. ನಂತರ ಆ ಹಿಟ್ಟನ್ನು ಉಂಡೆ ಮಾಡಿ 2 ಇಂಚು ದಪ್ಪಕ್ಕೆ ಲಟ್ಟಿಸಿ ಬೇಕಾದ ಆಕಾರ(ವೃತ್ತ, ಚೌಕ ಅಥವಾ ಇನ್ನಾವುದೇ ಆಕಾರ)ಕ್ಕೆ ಕತ್ತರಿಸಿ. ನಂತರ ತಳಕ್ಕೆ ಬೆಣ್ಣೆ ಸವರಿ ಅದರ ಮೇಲೆ ಮೈದಾ ಸ್ಪ್ರೇ ಮಾಡಿದ ಅಲ್ಯುಮಿನಿಯಂ ಪಾತ್ರೆಯಲ್ಲಿ ಕತ್ತರಿಸಿದ ಕುಕ್ಕಿಗಳನ್ನು ಇರಿಸಿ 10-15 ನಿಮಿಷ ಬೇಯಿಸಬೇಕು. ಆಗ ಬೆಣ್ಣೆ ಕುಕ್ಕೀಸ್ ರೆಡಿಯಾಗಿರುತ್ತದೆ.

Recipe by :

Share this page :   

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited