» ಬೇಕಾಗುವ ಸಾಮಗ್ರಿ:
ಬ್ರೆಡ್ - 1/2ಕಿ.ಗ್ರಾಂ
ಸಕ್ಕರೆ - 1/4ಕಿ.ಗ್ರಾಂ
ತುಪ್ಪ - 1ಬೌಲ್
ಏಲಕ್ಕಿ - 3-4
Preparation :
How to make ಬ್ರೆಡ್ ಲಾಡು :
ಮಾಡುವ ವಿಧಾನ:
ಮೊದಲಿಗೆ ಬ್ರೆಡ್ ಪೀಸ್ ಗಳಿಗೆ ತುಪ್ಪವನ್ನು ಸವರಿ, ಹೆಂಚಿನ ಮೇಲಿಟ್ಟು ಕಂದು ಬಣ್ಣ ಬರುವವರೆಗೆ ಸುಡಬೇಕು.
ಬಳಿಕ ಅವುಗಳನ್ನು ಪುಡಿಮಾಡಿಟ್ಟುಕೊಳ್ಳಿ.
ಈಗ ಸಕ್ಕರೆ ಪಾಕವನ್ನು ಮಾಡಿ, ಅದಕ್ಕೆ ಏಲಕ್ಕಿ ಪುಡಿ ಸೇರಿಸಿ.
ನಂತರ ಬ್ರೆಡ್ ಪುಡಿಯನ್ನು ಹಾಕಿ ಕೈಯಾಡಿಸುತ್ತಿರಿ.
ಒಂದು ಹದಕ್ಕೆ ಬಂದ ಬಳಿಕ ಮಿಶ್ರಣವನ್ನು ಉಂಡೆಯಾಕಾರವಾಗಿ ಮಾಡಿ.
ಇದರ ಮೇಲೆ ಅಲಂಕಾರಕ್ಕಾಗಿ ಗೋಡಂಬಿಯನ್ನಿಟ್ಟರೆ ಬ್ರೆಡ್ ಲಾಡು ಸವಿಯಲು ಸಿದ್ಧ.