Untitled Document
Sign Up | Login    

Food Recipes

ಬೀಟ್‌ರೂಟ್‌ ಕೇಕ್‌
ಬೀಟ್‌ರೂಟ್‌ ಕೇಕ್‌

Ingredients :

  • » * 1 1/4 ಕಪ್‌ ಗೋಧಿ ಹುಡಿ
    * 2 ಟೇಬಲ್‌ ಸ್ಪೂನ್‌ ಕೋಕಾ ಹುಡಿ
    * 1 ಟೀ ಸ್ಪೂನ್‌ ಅಡುಗೆಸೋಡಾ
    * 1/2 ಟೀ ಸ್ಪೂನ್ ಬೇಕಿಂಗ್ ಪೌಡರ್
    * 1/4 ಟೀ ಸ್ಲೂನ್ ಉಪ್ಪು
    * 1/2 ಟೀ ಸ್ಪೂನ್ ವೆನಿಲಾ ಸಿರಪ್
    * 1/4 ಕಪ್ ತಾಜಾ ಬೆಣ್ಣೆ
    * 1/2- 3/4 ಕಪ್‌ ಸಕ್ಕರೆ ಹುಡಿ
    * 1 ಕಪ್ ತಾಜಾ ಮಜ್ಜಿಗೆ ಅಥವಾ ಹಾಲು
    * 1/2 ಕಪ್ ಬೇಯಿಸಿದ ಬೀಟ್‌ರೂಟ್‌ನ ಪ್ಯೂರಿ(ಮಿಕ್ಸಿಯಲ್ಲಿ ರುಬ್ಬಿದ್ದ ಬೀಟ್‌ರೂಟ್‌)
Preparation :

How to make ಬೀಟ್‌ರೂಟ್‌ ಕೇಕ್‌ :

  • ಮಾಡುವ ವಿಧಾನ

    ಒಂದು ಬೌಲ್‌ನಲ್ಲಿ ಮೇಲೆ ಹೇಳಿದ ಮೊದಲ ನಾಲ್ಕು ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದು ಬೌಲ್‌ನಲ್ಲಿ ಬೆಣ್ಣೆ ಮತ್ತು ಸಕ್ಕರೆ ಹುಡಿಯನ್ನು ಚೆನ್ನಾಗಿ ಕಲಕಿ. ಅವೆರಡೂ ಚೆನ್ನಾಗಿ ಮಿಕ್ಸ್ ಆಗಬೇಕು. ಬೆಣ್ಣೆ ರೂಮ್ ಟೆಂಪರೇಚರ್‌ನಲ್ಲಿ ಇರಲಿ. ಇದಕ್ಕೆ ಬೀಟ್‌ರೂಟ್‌ ಪ್ಯೂರಿಯನ್ನು ಹಾಕಿ ಎಲ್ಲವನ್ನೂ ಕ್ಲಾಕ್‌ವೈಸ್‌ನಲ್ಲಿ ಏಳೆಂಟು ಸುತ್ತು ಕಲಕುತ್ತಿರಿ. ಅದಕ್ಕೆ ಎರಡು ಸ್ಪೂನ್‌ ಆರಂಭದಲ್ಲಿ ಮಿಕ್ಸ್‌ ಮಾಡಿದ ಹುಡಿಯನ್ನು ಚೆನ್ನಾಗಿ ಅದೇ ದಿಕ್ಕಿನಲ್ಲಿ ಕಲಕಿ. ಸ್ವಲ್ಪ ಮಜ್ಜಿಗೆ ಸೇರಿಸಿ. ಅದೇ ದಿಕ್ಕಿನಲ್ಲಿ ಕಲಕಿ. ಪುನಃ ಎರಡು ಸ್ಪೂನ್‌ ಹುಡಿ ಹಾಕಿ ಚೆನ್ನಾಗಿ ಕಲಕಿ. ಸ್ವಲ್ಪ ಮಜ್ಜಿಗೆ ಸೇರಿಸಿ ಚೆನ್ನಾಗಿ ಕಲಕಿ. ಹೀಗೆ ಎರಡನ್ನೂ ಇಡ್ಲಿ ಹಿಟ್ಟಿನ ಹದಕ್ಕೆ ಬರುವವರೆಗೆ ಚೆನ್ನಾಗಿ ಕಲಕಿ. ಕೊನೆಗೆ ಬೇಕಾದಲ್ಲಿ ಡ್ರೈಫ್ರುಟ್‌ ಹಾಕಿ.

    ಬೇಯಿಸುವ ವಿಧಾನ
    (ಕುಕ್ಕರ್‌ನಲ್ಲಿ ಮಾಡುವವರಿಗೆ)

    ಕುಕ್ಕರ್‌ನ ತಳಕ್ಕೆ ಅರ್ಧ ಇಂಚಿನಷ್ಟು ಹುಡಿ ಉಪ್ಪು ಹಾಕಿ ಮಧ್ಯಮ ಉರಿಯಲ್ಲಿ ಇಡಿ. ಒಂದು ಅಲ್ಯೂಮಿನಿಯಂ ಪಾತ್ರೆಗೆ ಬೆಣ್ಣೆ ಸವರಿ, ಅದರ ಗೋಧಿ ಹುಡಿಯನ್ನು ಉದುರಿಸಿರಿ. ಪಾತ್ರೆಯ ತಳವೆಲ್ಲ ಗೋಧಿ ಹುಡಿ ಅಂಟಿರಲಿ. ಈಗ ಇದಕ್ಕೆ ಬೀಟ್ ಮಾಡಿದ ಮಿಶ್ರಣವನ್ನು ಹಾಕಿ ಪಾತ್ರೆಯನ್ನು ಕುಕ್ಕರ್‌ನ ಒಳಗೆ ಉಪ್ಪಿನ ಮೇಲೆ ಇರಿಸಿ. ವೇಟ್‌ ಮತ್ತು ಗ್ಯಾಸ್ಕೆಟ್‌ ಹಾಕದೆ ಮುಚ್ಚಳ ಮುಚ್ಚಿ. ೩೦-೪೦ ನಿಮಿಷದ ತನಕ ಬೇಯಿಸಿ. ಕೇಕ್‌ ಮಧ್ಯದಲ್ಲಿ ಚೂರಿಯನ್ನು ಹಾಕಿ ನೋಡಿ.ಆ ಚೂರಿಗೆ ಒಂದು ಚೂರೂ ಹಿಟ್ಟು ಅಂಟಿಕೊಳ್ಳಬಾರದು. ಅಲ್ಲಿ ತನಕ ಬೇಯಿಸಿ.

    ಓವನ್‌ನಲ್ಲಿ ಮಾಡುವವರಿಗೆ

    ಓವನ್‌ನನ್ನು ೧೮೦ ಡಿಗ್ರಿಯಲ್ಲಿ ಪ್ರೀಹೀಟ್ ಮಾಡಿರಿ. ಬಳಿಕ ಬೀಟ್‌ ಮಿಶ್ರಣವನ್ನು ಪ್ರೀ ಹೀಟೆಡ್‌ ಓವೆನನ್ನಲ್ಲಿರಿಸಿ. ೨೦-೩೦ ನಿಮಿಷ ಬೇಕ್ ಮಾಡಿರಿ.

Recipe by :ದಿವ್ಯಶ್ರೀ

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited