» ಬೇಕಾಗುವ ಸಾಮಗ್ರಿ:
ಅಕ್ಕಿ - 1/4 ಕೆ.ಜಿ
ಬಣ್ಣದ ಸೌತೆ - 1( ದೊಡ್ಡದಾದರೆ 1/2)
ಕಾಯಿ ತುರಿ _ ಒಂದು ಸಣ್ಣ ಬೌಲ್
ಏಲಕ್ಕಿ -2
ಬೆಲ್ಲ - 1 ಬೌಲ್
Preparation :
How to make ಸೌತೆ ಕಾಯಿ ಸಿಹಿ ಕಡಬು :
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ಇಟ್ಟುಕೊಳ್ಳಿ. ಬಳಿಕ ಸೌತೆ ಕಾಯಿಯನ್ನು ತುರಿದಿಟ್ಟುಕೊಳ್ಳಿ.
ನಂತರ ಅಕ್ಕಿ, ಸೌತೆ ತುರಿ, ತೆಂಗಿನ ತುರಿ, ಏಲಕ್ಕಿಗಲೊಂದಿಗೆ ಸೇರಿಸಿ ಒಂದು ಹದಕ್ಕೆ ರುಬ್ಬಿ.ನಂತರ ಬೆಲ್ಲವನ್ನು ಹಾಕಿ ಮತ್ತೆ ರುಬ್ಬಿ. ಈಗ ಇಡ್ಲಿ ತಟ್ಟೆಗೆ ಸ್ವಲ್ಪ ತುಪ್ಪ ವರಸಿ ರುಬ್ಬಿದ ಮಿಶ್ರಣವನ್ನು ಹರಡಿ ಬೇಯಿಸಿ.
ಈಗ ಬಿಸಿ ಬಿಸಿ ಸೌತೆ ಕಡಬು ತುಪ್ಪದೊಡನೆ ಸವಿಯಲು ಸಿದ್ದ.