Untitled Document
Sign Up | Login    

Food Recipes

ಗುಲ್ ಮೊಹರ್
ಗುಲ್ ಮೊಹರ್

Ingredients :

  • » ಬೇಕಾಗುವ ಸಾಮಗ್ರಿಗಳು:

    ಹಾಲು -3ಲೀಟರ್
    ಸಕರೆ - 250ಗ್ರಾಂ
    ನಿಂಬೆಹಣ್ಣು - 2
    ಬೇಕಿಂಗ್ ಪೌಡರ್ -1/2ಚಮಚ
    ಮೈದಾಹಿಟ್ಟು - 1ಚಮಚ
    ಗೋಡಂಬಿ -25ಗ್ರಾಂ
    ದ್ರಾಕ್ಷಿ -15ಗ್ರಾಂ
    ಬಾದಾಮಿ 10-12 ಕೇಸರಿ ಮತ್ತು ಕಾರ್ಡಮಮ್ ಎಸೆಮ್ಸ್(ಅಥವಾ ನಿಮಗೆ ಬೇಕಾದ ಫ್ಲೇವರ್)
    ಆರೆಂಜ್ ಮತ್ತು ಹಸಿರು ಕಲರ್
Preparation :

How to make ಗುಲ್ ಮೊಹರ್ :

  • ಮಾಡುವ ವಿಧಾನ:
    ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ನಿಂಬೆರಸ ಸೇರಿಸಿ ಕುದಿಸಿ. ಆಗ ಹಾಲು ಒಡೆಯುತ್ತದೆ. ಅದರ ನೀರನ್ನು ಬಸಿದು ಸ್ವಚ್ಛ ಬಟ್ಟೆಯಲ್ಲಿ ಸೋಸಿ ಪೂರ್ಣ ನೀರು ಬಸಿದಿಡಿ. ಈಗ ಪನೀರ್ ಭಾಗ ಮತ್ರ ಉಳಿದಿರುತ್ತದೆ. ಈ ಪನೀರ್ ಗೆ ಬೇಕಿಂಗ್ ಪೌಡರ್, ಮೈದಾ ಹಿಟ್ಟು ಸೇರಿಸಿ ಗಂಟುಗಳಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಕಲಸಿದ ಪನೀರ್ ಕಣಕ್ಕೆಕೇಸರಿ, ಕಾರ್ಡಮಮ್ ಎಸನ್ಸ್ ಕೆಲ ಹನಿಸೇರಿಸಿ, ಅದನ್ನು 3 ಭಾಗಗಳಾಗಿ ಮಾಡಿಟ್ಟುಕೊಳ್ಳಿ. ಒಂದು ಭಾಗ ಹಾಗೇ ಬಿಳಿ ಇರಲಿ. ಉಳಿದ 2 ಭಾಗದಲ್ಲಿ ಒಂದಕ್ಕೆ ಆರಂಜ್ ಕಲರ್ ಹಾಗೂ ಇನ್ನೊಂದಕ್ಕೆ ಹಸಿರು ಕಲರ್ ಸೇರಿಸಿ. ಈಗ ಅದನ್ನು ಸಣ್ಣ ಸಣ್ಣ ಗೋಲಿಮಾಡಿಕೊಳ್ಳಿ.

    ಬೇರೆ ಬೇರೆಯ ಸಣ್ಣ ಮೂರು ಪಾತ್ರೆಯಲ್ಲಿ 50ಗ್ರಾಂ ಸಕ್ಕರೆ, 200ಮಿ.ಮಿ.ಲೀ ನೀರು ಬೆರಸಿ ಕುದಿಸಿ. ಸಕ್ಕರೆ ನೀರು ಕುದಿಯುತ್ತಿರುವಾಗ ಸಣ್ಣ ಉರಿಮಾಡಿ ಬೇರೆಬೇರೆಯಾಗಿ ಮೂರು ಕಲರ್ ಪನೀರ್ ಗೋಲಿಗಳನ್ನು ಅದರಲ್ಲಿ ಹಾಕಿ 10-15 ನಿಮಿಷ ಬೇಯಿಸಿ. ಚ್ಚಮಚದಿಂದ ಗೋಲಿಗಳನ್ನು ಆಗಾಗ ಮಗುಚಿ ಹಾಕಿ. ಅದು ಜಾಮೂನಿನಂತೆ ದೊಡ್ಡದಾಗುತ್ತದೆ. ಬಳಿಕ ಪಾತ್ರೆಯನ್ನು ಕೆಳಗಿಳಿಸಿ 1ಗಂಟೆ ಮುಚ್ಚಿಡಿ.

    ಗೋಡಂಬಿ ಹಾಗೂ ಬಾದಾಮಿ ಹಾಲು: 1ಲೀಟರ್ ಹಾಲಿಗೆ 8-10 ಗೋಡಂಬಿ, ಬಾದಾಮಿ ಅರೆದು ಹಾಕಿ. ಸಕ್ಕರೆಯನ್ನು ಅದಕ್ಕೆ ಸೇರಿಸಿ. ಸೌಟಿನಿಂದ ತಿರುಗಿಸುತ್ತಾ ಚೆನ್ನಾಗಿ ಕಾಯಿಸಿ. ಹಾಲು ಸುಮಾರು ಮುಕ್ಕಾಲು ಲೀಟರ್ ಗೆ ಬಂದಾಗ ಅದಕ್ಕೆ ಕೇಸರಿ ಕಾರ್ಡಮಮ್ ಫ್ಲೇವರ್ ಸೇರಿಸಿ, ಕೆಳಗಿಳಿಸಿ, ಉಳಿದ ಬಾದಾಮಿ, ದ್ರಾಕ್ಷಿಗಳನ್ನು ಸೇರಿಸಿ, ತಯಾರಿಸಿಟ್ಟ ಗೋಲಿಗಳನ್ನು ಅದರಲ್ಲಿ ಇಡಿ. ಕೆಲ ಸಮಯ ಫ್ರಿಜ್ ನಲ್ಲಿ ಇಟ್ಟಿರಿ. ಈಗ ರುಚಿಯಾದ ಗುಲ್ ಮೊಹರ್ ಸವಿಯಲು ಸಿದ್ಧ.

Recipe by :ಗಂಗಾ ಜಿ.ಭಟ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited