Untitled Document
Sign Up | Login    

Food Recipes

ಮಲೈ ಚಂ ಚಂ
ಮಲೈ ಚಂ ಚಂ

Ingredients :

  • » ಮಲೈ ಕುಟುಂಬಕ್ಕೆ ಸೇರಿದ ಒಂದು ಸಿಹಿ ತಿಂಡಿ. ಮಲೈ ಚುಮ್ ಚುಮ್ ನನ್ನು ಚೀಸ್ ನಿಂದ ತಯಾರಿಸಲಾಗುವುದು. ಈ ಮಲೈ ಸ್ವೀಟ್ ಅನ್ನು ಬೇರೆ ಬೇರೆ ಬಣ್ಣದಲ್ಲಿ ತಯಾರಿಸಲಾಗುವುದು. ಇಲ್ಲಿ ನಾವು ಕೇಸರಿ ಹಾಕಿ ತಯಾರಿಸುವ ಕಂದು ಬಣ್ಣದ ಮಲೈ ತಿಂಡಿಯಾಗಿದೆ. ಈ ಸ್ವೀಟ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳ ವಿವಿರಃ

    ಪನ್ನೀರ್ 2 ಕಪ್ ಸಕ್ಕರೆ
    2 ಕಪ್ ನೀರು
    4-5 ಕಪ್ ಕೇಸರಿ ಅರ್ಧ ಚಮಚ.

    ಇತರ ಸಾಮಾಗ್ರಿಗಳು:
    ಹಾಲು 2-3 ಕಪ್
    ಸಕ್ಕರೆ 2 ಕಪ್
    ಏಲಕ್ಕಿ 1 ಚಮಚ
    ಅಲಂಕಾರಕ್ಕೆ ಗೋಡಂಬಿ ಸ್ವಲ್ಪ (ಚಿಕ್ಕದಾಗಿ ಕತ್ತರಿಸಿದ್ದು) ಸ್ವಲ್ಪ ಕೇಸರಿ
Preparation :

How to make ಮಲೈ ಚಂ ಚಂ :

  • ತಯಾರಿಸುವ ವಿಧಾನ:

    * ಒಂದು ಬಟ್ಟಲಿನಲ್ಲಿ ಪನ್ನೀರ್ ಹಾಕಿ ಅದು ಮೃದುವಾಗುವವರೆಗೆ ಕಲೆಸಿ. ಪನ್ನೀರ್ ಸ್ವಲ್ಪ ಗಟ್ಟಿಯಾಗಿದ್ದರೆಸ್ವಲ್ಪ ಬಿಸಿ ನೀರನ್ನು ಸೇರಿಸಿ ಕಲೆಸಿ.

    * ಈಗ ಸಮ ಭಾಗಗಳಾಗಿ ತೆಗೆದುಕೊಂಡು ಅದರಿಂದ ಉಂಡೆ ಕಟ್ಟಿ. ನಂತರ ಅವುಗಳನ್ನು ಮೊಟ್ಟೆಯ ಆಕಾರದಲ್ಲಿ ಮಾಡಿ ತಟ್ಟೆಯಲ್ಲಿಡಿ.

    * ನಂತರ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಬೇಕು. ಅದು ಕುದಿಯಲಾರಂಭಿಸಿದಾಗ ಸಕ್ಕರೆ ಮತ್ತು ಕೇಸರಿ ಹಾಕಿ ತಿರುಗಿಸಿ ಸಕ್ಕರೆ ಪಾಕ ಮಾಡಿ.

    * ಈಗ ಮೊಟ್ಟೆಯ ಆಕಾರದಲ್ಲಿ ತಟ್ಟಿದ ಪನ್ನೀರ್ ಅನ್ನು ಸಕ್ಕರೆ ಪಾಕಕ್ಕೆ ಹಾಕಿ. ಆಗ ಪನ್ನೀರ್ ಸಕ್ಕರೆ ನೀರನ್ನು ಹೀರಿಕೊಂಡು ಸ್ವಲ್ಪ ದಪ್ಪಗಾಗುತ್ತದೆ. ಪನ್ನೀರ್ ಸ್ವಲ್ಪ ಸ್ಪಾಂಜ್ ರೀತಿಯಲ್ಲಿ ಆದಾಗ ಗ್ಯಾಸ್ ಆಫ್ ಮಾಡಿ.

Recipe by :Seema Bhat

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited