ಬೇಯಿಸಿದ ಅಲಸಂದೆ ಕಾಳು -1ಬೌಲ್
ಲವಂಗ - 2
ಚಕ್ಕೆ - ಸಣ್ಣ ಚೂರು
ಹೆಚ್ಚಿದ ಈರುಳ್ಳಿ-1
ಹೆಚ್ಚಿದ ಟೊಮೆಟೊ-1 ಬೌಲ್
ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್ - ಸ್ವಲ್ಪ
ಜೀರಿಗೆ-ಮೆಂತ್ಯ ಪೌಡರ್ - 1ಸ್ಪೂನ್
ಬೆಣ್ಣೆ - 3-4 ಸ್ಪೂನ್
ಅರಿಷಿಣ - 1 ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು- ಸ್ವಲ್ಪ
Preparation :
How to make ಅಲಸಂದೆ ಬೆಣ್ಣೆ ಮಸಾಲೆ :
ಮಾಡುವ ವಿಧಾನ
ಮೊದಲಿಗೆ ಬಾಣೆಲೆಗೆ ಬೆಣ್ಣೆಹಾಕಿ ಸ್ವಲ್ಪ ಕಾದ ಬಳಿಕ ಚೆಕ್ಕೆ, ಲವಂಗ ಹಾಕಿ ಸ್ವಲ್ಪ ಫ್ರೈ ಮಾಡಿ.
ಈಗ ಅದಕ್ಕೆ ಶುಠಿ-ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಸ್ವಲ್ಪ ಫ್ರೈ ಮಾಡಿ.
ಇದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ತಿರುಗಿಸಿ, ಬಳಿಕ ಟೊಮೆಟೊ ಹಾಕಿ ಮತ್ತೆ ಫ್ರೈ ಮಾಡಿ.
ಈಗ ಈ ಮಿಶ್ರಣಕ್ಕೆ 1 ಸ್ಪೂನ್ ಜೀರಿಗೆ-ಮೆಂತ್ಯ ಪೌಡರ್ ಹಾಕಿ ಹಸಕಲು ಹೋಗುವವರೆಗೆ ಸ್ವಲ್ಪ ತಿರುಗಿಸಿ.
ಈಗ ಇವುಗಳಿಗೆ ಬೇಯಿಸಿಟ್ಟ ಅಲಸಂದೆ ಕಾಳನ್ನು ಸೇರಿಸಿ ಅರಿಷಿಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ ಕೆಲಸಮಯ ಒಲೆಯಮೆಲೆಯೇ ಇಡಿ.
ಎಲ್ಲವೂ ಚೆನ್ನಾಗಿ ಮಿಶ್ರಣವಾದ ಬಳಿಕ ಒಂದು ಬೌಲ್ ಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ ಬಿಸಿ ಅಲಸಂದೆ ಮಸಾಲೆ ಸವಿಯಲು ಸಿದ್ಧ.