» ಸಾಮಗ್ರಿಗಳು:
ಬ್ರೆಡ್ -6ಪೀಸ್
ಈರುಳ್ಳಿ -1
ಹಸಿಮೆಣಸಿನಕಾಯಿ-1
ಎಣ್ಣೆ-ಸ್ವಲ್ಪ್
ಸಾಸಿವೆ
ಜೀರಿಗೆ-ಸ್ವಲ್ಪ
ಕರಿಬೇವು -ಸ್ವಲ್ಪ
ಉದ್ದಿನಬೇಳೆ-ಸ್ವಲ್ಪ
ಕಡ್ಲೆಬೇಳೆ -ಸ್ವಲ್ಪ
ಟಮೋಟ ಹಣ್ಣು -1
ಉಪ್ಪು
ನಿಂಬೆರಸ -ಸ್ವಲ್ಪ
ಕೊತ್ತುಂಬರಿಸೊಪ್ಪು
ಕಾಯಿತುರಿ --ಸ್ವಲ್ಪ
Preparation :
How to make ಬ್ರೆಡ್ ಉಪ್ಪಿಟ್ಟು :
ಬ್ರೆಡ್ ಅನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು ಹಾಕಿ,ನಂತರ ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ, ಮೂರ್ನಾಲ್ಕು ನಿಮಿಷ ಬಾಡಿಸಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದ ನಂತರ ಹೆಚ್ಚಿದ ಟಮೋಟ ಹಾಕಿ, ಒಂದೆರಡು ನಿಮಿಷ ಹುರಿದು,ಉಪ್ಪು,ನಿಂಬೆರಸ, ಸ್ವಲ್ಪ ಕೊತ್ತುಂಬರಿಸೊಪ್ಪು ಹಾಕಿ,ಜೊತೆಯಲ್ಲಿಯೇ ಬ್ರೆಡ್ ಚೂರುಗಳನ್ನು ಹಾಕಿ,ಎಲ್ಲಾ ಒಗ್ಗರಣೆ ಬೆರೆಯುವಂತೆ ಸರಿಯಾಗಿ ಬೆರೆಸಿ. ಕಾಯಿತುರಿ ಸಹ ಬೆರೆಸಿ. ಇಳಿಸಿ.