ಹೀಟ್ ಪ್ರೂಫ್ ಜಗ್ ಅಥವಾ ಪಾತ್ರೆಯಲ್ಲಿ ಟೀ ಬ್ಯಾಗ್ ಇರಿಸಿ. ಅದಕ್ಕೆ ಕುದಿವ ನೀರನ್ನು ಎರೆಯಿರಿ. ಅದಕ್ಕೆ ಪುದಿನ ಎಲೆ ಹಾಗೂ ಸಿಪ್ಪೆ ತೆಗೆದು ಕತ್ತರಿಸಿಟ್ಟ ಲಿಂಬೆ ಹಣ್ಣು ಸೇರಿಸಿ ಮುಚ್ಚಿಡಿ. ಅರ್ಧಗಂಟೆ ಬಿಸಿ ಆರುವುದಕ್ಕೆ ಇರಿಸಿ. ಬಳಿಕ ಅದಕ್ಕೆ ಐಸ್ ಕ್ಯೂಬ್ ಸೇರಿಸಿ ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ ಸೇರಿಸಿ ಸೇವಿಸಬಹುದು.