ಎರಡು ಕಪ್ ಊಟದ ಅಕ್ಕಿ ನೆನಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟಿಗಿಂತ ಕಡಿಮೆಹದದಲ್ಲಿ ರುಬ್ಬಿ, ನಂತರ ಎರಡು ಗ್ಲಾಸ್ ನೀರು ಹಾಕಿ ಬಾಣಲೆಗೆ ಸುರಿದು ಹದ ಉರಿಯಲ್ಲಿ ತಳ ಬಿಟ್ಟು ಉಂಡೆ ಕಟ್ಟುವ ಹದಕ್ಕೆ ಕೈಯಾಡಿಸುತ್ತಾ ಬೇಯಿಸಿರಿ. ಸ್ವಲ್ಪ ತಣ್ಣಗಾದ ನಂತರ ಒಂದು ಕಪ್ ತೆಂಗಿನ ಕಾಯಿ ಸುಳಿಗೆ ಅರ್ಧ ಕಪ್ ಬೆಲ್ಲ ಬೆರೆಸಿರಿ. ಬಳಿಕ ತಣ್ಣಗಾದ ಉಂಡೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿ ಅದರೊಳಗೆ ಹೂರಣದ ರೀತಿಯಲ್ಲಿ ಬೆರೆಸಿದ ತೆಂಗಿನಕಾಯಿ ಬೆಲ್ಲದ ಮಿಶ್ರಣವನ್ನು ಎರಡೆರಡು ಚಮಚದಂತೆ ತುಂಬಿರಿ. ನಂತರ ಸಣ್ಣ ಉರಿಯಲ್ಲಿ ಹಬೆಯೊಳಗೆ ಈ ಉಂಡೆಯನ್ನು ನಲವತ್ತು ನಿಮಿಷ ಬೇಯಿಸಿರಿ.