Untitled Document
Sign Up | Login    

Food Recipes

ಹಿದಕವರೆ ಸ್ಪೆಶಲ್
ಹಿದಕವರೆ ಸ್ಪೆಶಲ್

Ingredients :

  • » ಬೇಕಾಗುವ ಸಾಮಗ್ರಿ:
    ಹಿದಕವರೆ-1ಬೌಲ್
    ಬದನೆಕಾಯಿ-1
    ಚಪ್ಪರದವರೆಕಾಯಿ-ಸ್ವಲ್ಪ
    ತೆಂಗಿನ ತುರಿ-ಸ್ವಲ್ಪ
    ಕೊಬ್ಬರಿ-ಸ್ವಲ್ಪ
    ಉದ್ದಿನಬೇಳೆ -1/2ಚಮಚ
    ಕಡಲೆಕಾಯಿ ಬೀಜ-5-6
    ಹುರಿದ ಎಳ್ಳು-1/2ಚಮಚ
    ಕೆಂಪು ಮೆಣಸಿನಕಾಯಿ-4 ಅಥವಾ ಸಾಂಬಾರ್ ಪೌಡರ್
    ಬೆಣ್ಣೆ-ಸ್ವಲ್ಪ
    ಹೆಚ್ಚಿದ ಈರುಳ್ಳಿ-1/4ಬೌಲ್
    ಹುಣಸೆ ರಸ-ಸ್ವಲ್ಪ
Preparation :

How to make ಹಿದಕವರೆ ಸ್ಪೆಶಲ್ :

  • ಮಾಡುವ ವಿಧಾನ:
    ಉದ್ದಿನಬೇಳೆ, ಕಡಲೆಕಾಯಿಬೀಜ, ಎಳ್ಳು,ಕೊಬ್ಬರಿ ಇವೆಲ್ಲವನ್ನೂ ಮೊದಲು ಹುರಿದಿಟ್ಟುಕೊಳ್ಳಿ. ಈಗ ಅವುಗಳೊಂದಿಗೆ ತೆಂಗಿನ ತುರಿಯನ್ನೂ ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ತುಪ್ಪದ ಒಗ್ಗರಣೆ ಹಾಕಿ, ಇದಕ್ಕೆ ಹಿದುಕಿದ ಅವರೆಕಾಳು, 2ಸ್ಪೂನ್ ಬೆಣ್ಣೆ, ಸ್ವಲ್ಪ ನೀರು ಹಾಕಿಮುಚ್ಚಿಡಿ. ಅವರೆ ಕಾಳು ಮುಕ್ಕಾಲು ಭಾಗ ಬೆಂದ ನಂತರ ಅದಕ್ಕೆ ಕತ್ತರಿಸಿದ ಬದನೆ, ಚಪ್ಪರದವರೆ ಹೋಳು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಬೇಯಿಸಿ. ಈಗ ಇದಕ್ಕೆ ರುಬ್ಬಿಟ್ಟ ಮಸಾಲೆ, ಹುಣಸೆ ರಸ ಹಾಕಿ ಚೆನ್ನಾಗಿ ಕೈಯಾಡಿಸಿ ಬೆಯಿಸಿ. ಒಲೆ ಆರಿಸುವ ಮುನ್ನ ಇನ್ನು ಸ್ವಲ್ಪ ಬೆಣ್ಣೆ ಹಾಕಿ ಚುಚ್ಚಿಡಿ. ಇದಕ್ಕೆ ಈರುಳ್ಳಿ ಒಗ್ಗರಣೆ ಹಾಕಿದರೆ ಬಿಸಿ ಬಿಸಿ ಹಿದಕವರೆ ಸವಿಯಲು ಸಿದ್ಧ. ಇದನ್ನು ಅನ್ನ ಅಥವಾ ಚಪಾತಿ ಜೊತೆ ತಿನ್ನಬಹುದು.

Recipe by :ಗಂಗಾ ಜಿ ಭಟ್

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited