» ಬೇಕಾಗುವ ಸಾಮಗ್ರಿ
ಆಲೂಗಡ್ದೆ- 2-3
ಹೆಸರುಕಾಳು-1ಕಪ್
ಕಡಲೆ ಹಿಟ್ಟು-1/2 ಕಪ್
ಈರುಳ್ಳಿ-1 ಕಪ್
ಹೆಚ್ಚಿದ ಹಸಿಮೆಣಶಿನಕಾಯಿ-2
ಹೆಚ್ಚಿಟ್ಟ ಶುಂಠಿ-ಸ್ವಲ್ಪ
ಮೆಂತ್ಯ-ಸ್ವಲ್ಪ
ಜೀರಿಗೆ -1/2 ಚಮಚ
ನಿಂಬೆರಸ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಇಂಗು-ಒಂದು ಚಿಟಿಕೆ
ಎಣ್ಣೆ-ಸ್ವಲ್ಪ
Preparation :
How to make ಆಲೂ-ಹೆಸರು ಪಕೋಡ :
ಮಾಡುವ ವಿಧಾನ
ಮೊದಲಿಗೆ ಹೆಸರು ಕಾಳನ್ನು ಕೆಲ ಗಂಟೆಗಳ ಕಾಲ ನೆನೆಹಾಕಬೇಕು. ನಂತರ ಅದನ್ನು ತೊಳೆದು ಮಿಕ್ಸಿಗೆ ಹಾಕಿ ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಿ. ಬಳಿಕ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆತೆಗೆದು ನುಣ್ಣಗೆ ಹಿಸುಕಿ. ಈಗ ರುಬ್ಬಿಟ್ಟ ಹೆಸರುಕಾಳಿನ ಹಿಟ್ಟಿಗೆ ಸೇರಿಸಿ ಮಿಶ್ರಣ ಮಾಡಿ. ಆಲೂ, ಎಣ್ಣೆ, ಕಡಲೆಹಿಟ್ತು ಬಿಟ್ಟು ಹೆಸರುಕಾಳು ಮಿಶ್ರಣಕ್ಕೆ ಉಳಿದೆಲ್ಲ ಪದಾರ್ಥ್ಗಳನ್ನು ಹಾಕಿ ಮಿಶ್ರಣಮಾಡಿ ಉಂಡೆ ಕಟ್ಟಿ. ಈಗ ಬಾಣೆಲೆಗೆ ಅರ್ಧ ಎಣ್ನೆಹಾಕಿ ಕಾಯಿಸಿ.
ಬಳಿಕ ಕಟ್ಟಿದ ಉಂಡೆಗಳನ್ನು ಕಡಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ತಿರುಗಿಸುತ್ತ ಇರಿ. ಈಗ ಬಾಣೆಲೆಯಿಂದ ತೆಗೆದರೆ ಬಿಒಸಿ ಬಿಸಿ ಆಲೂ-ಹೆಸರು ಪಕೋಡ ಸವಿಯಲು ಸಿದ್ಧ.