ಮಾಡುವ ವಿಧಾನ:
ಅಕ್ಕಿಯಿಂದ ಉದುರುದುರಾಗಿ ಅನ್ನಮಾಡಿಟ್ಟುಕೊಳ್ಳಿ. ಬಳಿಕ ಬಾಣೆಲೆಗೆ ಎಣ್ಣೆ ಹಾಕಿ, ಕಾದ ಬಳಿಕ ಜೀರಿಗೆ, ಹಸಿ ಮೆಣಸಿನಕಾಯಿ, ಕತ್ತರಿಸಿದ ಈರುಳ್ಳಿ ಹಾಕಿ ತಿರುಗಿಸಿ. ಈ ರುಳ್ಲಿ ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ಆಲುಗಡ್ಡೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪಹೊತ್ತು ಬೇಯಿಸಿ. ಈಗ ಅದಕ್ಕೆ ಖಾರದ ಪುಡಿ, ಸ್ವಲ್ಪ ಗರಂ ಮಸಾಲ ಹಾಕಿ ಬೇಯಿಸಿ.
ನಂತರ ಅದಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿಬಿಸಿಯಾದ ಆಲೂ ಜೀರಾ ರೈಸ್ ಸವಿಯಲು ಸಿದ್ಧ.