Untitled Document
Sign Up | Login    

Food Recipes

ಸೌತೆ ರೊಟ್ಟಿ
ಸೌತೆ ರೊಟ್ಟಿ

Ingredients :

  • » ಸೌತೆರೊಟ್ಟಿಗೆ ಬೇಕಾದ ವಸ್ತುಗಳು
    * ಎರಡು ಮಧ್ಯಮಗಾತ್ರದ ಮಿಡಿಸೌತೆ(ಕುಕುಂಬರ್)
    * ಒಂದು ಮಧ್ಯಮ ಗಾತ್ರದ ಈರುಳ್ಳಿ
    * ಒಂದು ಕಪ್‌ ಸೂಜಿ ರವೆ
    * ಒಂದು ಅಥವಾ ಎರಡು ಹಸಿಮೆಣಸು
    * ಸಣ್ಣ ತುಂಡು ಹಸಿಶುಂಠಿ
    * ಕಾಲು ಕಪ್‌ ಅಕ್ಕಿ ಹುಡಿ (ಬೇಕಾದಲ್ಲಿ)
    * ಕರಿಬೇವಿನ ಸೊಪ್ಪು (4-5)
    * ಉಪ್ಪು ಮತ್ತು ಸಕ್ಕರೆ (ರುಚಿಗೆ ತಕ್ಕಷ್ಟು)
Preparation :

How to make ಸೌತೆ ರೊಟ್ಟಿ :

  • ಮಾಡುವ ವಿಧಾನ:

    ಮಿಡಿ ಸೌತೆಕಾಯಿ, ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿಮೆಣಸುಗಳನ್ನು ಸಣ್ಣ ಗಾತ್ರಕ್ಕೆ ಹಚ್ಚಿಟ್ಟುಕೊಳ್ಳಿ, ಹಸಿಶುಂಠಿಯನ್ನು ಜಜ್ಜಿ ಸಣ್ಣ ಸಣ್ಣ ಪೀಸ್‌ಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಒಂದು ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಎಲ್ಲವನ್ನೂ ಹಾಕಿ ಚೆನ್ನಾಗಿ ಕಲಸಬೇಕು. ರೊಟ್ಟಿ ಹಿಟ್ಟಿನ ಹದಕ್ಕೆ ಬಂದ ಬಳಿಕ, ಅದನ್ನು ನೇರವಾಗಿ ತವಾಕ್ಕೆ ಹಿಟ್ಟು ಹಾಕಿ ರೊಟ್ಟಿ ತಟ್ಟಬಹುದು. ಇಲ್ಲವೇ, ಪ್ಲಾಸ್ಟಿಕ್ ಕಾಗದ ಅಥವಾ ಬಾಳೆ ಎಲೆಯ ಮೇಲೆ ರೊಟ್ಟಿ ತಟ್ಟಿ ತವಾದಲ್ಲಿ ಎರಡೂ ಬದಿ ಕಾಯುವಂತೆ ಬೇಯಿಸಬೇಕು. ರುಚಿ ರುಚಿಯಾದ ಸೌತೆ ರೊಟ್ಟಿ ರೆಡಿಯಾಗಿರುತ್ತದೆ.
    ಸೈಡ್ಸ್‌ಗೆ ಬೇಕಾದಲ್ಲಿ ಚಟ್ನಿ ಸಿದ್ಧಪಡಿಸಿಕೊಟ್ಟುಕೊಳ್ಳಬಹುದು. ಇಲ್ಲವೇ, ತುಪ್ಪ ಅಥವಾ ಹೊಸ ಕೊಬ್ಬರಿ ಎಣ್ಣೆ ರೊಟ್ಟಿ ಮೇಲೆ ಸವರಿ ತಿನ್ನುವಾಗ ಉಂಟಾಗುವ ಸ್ವಾದ ಆಹಾ...

Recipe by :ಪೂರ್ಣಿಮಾ ನಾಯಕ್‌

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited