Untitled Document
Sign Up | Login    

Food Recipes

ಬಾಳೆಕಾಯಿ ಮಜ್ಜಿಗೆ ಹುಳಿ
ಬಾಳೆಕಾಯಿ ಮಜ್ಜಿಗೆ ಹುಳಿ

Ingredients :

  • » ಬೇಕಾಗುವ ಸಾಮಗ್ರಿ:
    ಬಾಳೆಕಾಯಿ - 1
    ತೊಗರಿ ಬೇಳೆ - ಸ್ವಲ್ಪ
    ಹಸಿಮೆಣಸ ಕಾಯಿ - 2-3
    ಸಾಸಿವೆ - ಸ್ವಲ್ಪ
    ಇಂಗು - 1 ಚಿಟಿಕೆ
    ಅರಿಷಿಣ - 2-3ಚಿಟಿಕೆ
    ತೆಂಗಿನ ತುರಿ - ಚಿಕ್ಕದಾದ ಬೌಲ್ ನಲ್ಲಿ 1/2ಬೌಲ್
    ಮಜ್ಜಿಗೆ ಅಥವಾ ಮೊಸರು
    ಎಣ್ಣೆ - ಸ್ವಲ್ಪ
    ಕರಿಬೇವು - ಒಗ್ಗರಣೆಗೆ
Preparation :

How to make ಬಾಳೆಕಾಯಿ ಮಜ್ಜಿಗೆ ಹುಳಿ :

  • ಮಾಡುವ ವಿಧಾನ:
    ಮೊದಲು ಬೇಳೆಯನ್ನು ಬೇಯಿಸಿಟ್ಟುಕೊಳ್ಳಿ.
    ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ, ಕಾದ ಬಳಿಕ ಸಾಸಿವೆ, 2-3 ಹಸಿಮೆಣಸಿನಕಾಯಿ, ಇಂಗು ಹಾಕಿ ಸ್ವಲ್ಪ ಹುರಿಯಿರಿ.
    ಬಳಿಕ ಬಾಳೆಕಾಯಿಯ ಸಿಪ್ಪೆ ತೆಗೆದು ಹೋಳುಗಳಾಗಿ ಕತ್ತರಿಸಿ.
    ಈಗ ಕತ್ತರಿಸಿಟ್ಟ ಬಾಳೆಕಾಯಿ ಹೋಳುಗಳನ್ನು ಬೇಯಿಸಿಟ್ಟ ಬೇಳೆಗಳಿಗೆ ಸೇರಿಸಿ, ಅದಕ್ಕೆ ಅರಿಷಿಣ, ಉಪ್ಪು ಹಾಕಿ ಕುಕ್ಕರಲ್ಲಿ 1 ವಿಸಿಲ್ ಬರುವವರೆಗೆ ಬೇಯಿಸಿ.

    ಈಗ ತೆಂಗಿನ ತುರಿ, ಹುರಿದಿಟ್ಟುಕೊಂಡ ಮೆಣಸಿನ ಪದಾರ್ಥ, ಅರಿಷಿಣ, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ.
    ಬಳಿಕ ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟ ಬಾಳೆಕಾಯಿ ಪಾತ್ರೆಗೆ ಹಾಕಿ 2 ಕುದಿ ಬರುವವರೆಗೆ ಉರಿಯಲ್ಲಿಡಿ.
    ನಂತರ ಅದನ್ನು ಸ್ವಲ್ಪ ತಣ್ಣಗಾಗಲು ಬಿಡಿ.
    ಈಗ ಅದಕ್ಕೆ ನಿಮಗೆ ಬೇಕಾದಷ್ಟು ಮಜ್ಜಿಗೆ ಅಥವಾ ಮೊಸರನ್ನು ಸೇರಿಸಿ ಚೆನ್ನಾಗಿ ತಿರುಗಿಸಿ.
    ಅದಕ್ಕೆ ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿ ರುಚಿಯಾದ ಬಾಳೆಕಾಯಿ ಮಜ್ಜಿಗೆ ಹುಳಿ ಸಿದ್ಧ.
    ಇದು ಅನ್ನದಜೊತೆ ತಿನ್ನಲು ಸವಿಯಾಗಿರುತ್ತದೆ.

Recipe by :ಅಮೃತಾ .

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited