Untitled Document
Sign Up | Login    

Food Recipes

ಕ್ಯಾಬೇಜ್ (ಕೋಸುಗಡ್ಡೆ) ಸಾಂಬಾರ್
ಕ್ಯಾಬೇಜ್ (ಕೋಸುಗಡ್ಡೆ) ಸಾಂಬಾರ್

Ingredients :

  • » ಬೇಕಾಗುವ ಸಾಮಗ್ರಿ:
    ಚಿಕ್ಕದಾಗಿ ಹೆಚ್ಚಿದ ಕ್ಯಾಬೇಜ್- 1 ದೊಡ್ದ ಬೌಲ್
    ಹೆಸರುಬೇಳೆ - 1/2 ಬೌಲ್
    ಹುಣಸೆಹಣ್ಣು- ಸ್ವಲ್ಪ
    ಸಾಸಿವೆ 1/2 ಚಮಚ
    ಅರಿಷಿಣ - ಒಂದು ಚಿಟಿಕೆ
    ತೆಂಗಿನ ತುರಿ - 1/2 ಬೌಲ್
    ಒಣಮೆಣಸು- 3-4
    ದನಿಯ - 2 ಚಮಚ
    ಇಂಗು- ಒಂದು ಚಿಟಿಕೆ
    ಕರಿಬೇವು -ಸ್ವಲ್ಪ
    ಕೊತ್ತಂಬರಿ ಸೊಪ್ಪು - ಸ್ವಲ್ಪ
    ಉಪ್ಪು - ರುಚಿಗೆ ತಕ್ಕಷ್ಟು
Preparation :

How to make ಕ್ಯಾಬೇಜ್ (ಕೋಸುಗಡ್ಡೆ) ಸಾಂಬಾರ್ :

  • ಮಾಡುವ ವಿಧಾನ:
    ಹೆಸರು ಬೇಳೆಯನ್ನು ತೊಳೆದು ಬೇಯಿಸಿಟ್ಟುಕೊಳ್ಳಿ.
    ಒಣ ಮೆಣಸು, ದನಿಯಾ, ಇಂಗು ಇವುಗಳನ್ನು ಹುರಿದಿಟ್ಟುಕೊಳ್ಳಿ.
    ಈಗ ಹುರಿದಿಟ್ಟ ಜೀನಸು, ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
    ಬಾಣೆಲೆಗೆ ಸ್ವಲ್ಪ ನೀರು ಹಾಕಿ ಹೆಚ್ಚಿಟ್ಟ ಕೋಸುಗಡ್ದೆ, ಅರಿಷಿಣ, ಉಪ್ಪು ಹಾಕಿ 3-4 ನಿಮಿಷ ಕುದಿಸಿ.
    ಹುಣಸೆ ಹಣ್ಣನ್ನು 1/2 ಕಪ್ ನೀರಿನಲ್ಲಿ ನೆನೆಹಾಕಿ ರಸ ಹಿಂಡಿ ತೆಗೆಯಿರಿ. ಇದನ್ನು ಕುದಿಯುವ ಕೋಸುಗಡ್ಡೆಗೆ ಹಾಕಿ ಬೇಯಿಸಿ.
    ಅದು ಮೃದುವಾದಾಗ ಬೇಯಿಸಿದ ಬೇಳೆ, ರುಬ್ಬಿದ ಮಿಶ್ರಣಗಳನ್ನು ಸೇರಿಸಿ ಬೇಯಿಸಿ.
    ಬಳಿಕ ಕರಿಬೇವು, ಕೊತ್ತಂಬರಿ ಸೊಪ್ಪನ್ನು ಅದಕ್ಕೆ ಹಾಕಿ ಕೆಳಗಿಳಿಸಿ.
    ಇದಕ್ಕೆ ತುಪ್ಪ ಅಥವಾ ಎಣ್ಣೆಯಲ್ಲಿ ಒಗ್ಗರಣೆ ಹಾಕಿದರೆ ಬಿಸಿಬಿಸಿ ಕ್ಯಾಬೇಜ್ ಸಾಂಬಾರ್ ರೆಡಿ.

Recipe by :ಯಶೋದಾ ಆರ್.ಬಿ

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited