Untitled Document
Sign Up | Login    

Food Recipes

ಬ್ರೆಡ್ ರೋಲ್
ಬ್ರೆಡ್ ರೋಲ್

Ingredients :

  • » ಬೇಕಾಗುವ ಸಾಮಗ್ರಿ:
    * ಬ್ರೆಡ್ ಪೀಸ್ - ನಿಮಗೆ ಬೇಕಾದಷ್ಟು
    * ಬೇಯಿಸಿದ ಆಲೂಗಡ್ಡೆ - 5-6
    * ಈರುಳ್ಳಿ - 2
    * ಕಡಲೆ ಹಿಟ್ಟು - 1 ಚಿಕ್ಕ ಬೌಲ್
    * ಎಣ್ಣೆ
    * ಹಸಿಮೆಣಸಿನ ಕಾಯಿ- 2
    * ಕೊತ್ತಂಬರಿ ಸೊಪ್ಪು - ಸ್ವಲ್ಪ
    * ಅರಿಷಿಣ - ಒಂದು ಚಿಟಿಕೆ
    * ನಿಂಬೆರಸ -2 ಚಮಚ
    * ಗರಮಸಾಲಾ - ಸ್ವಲ್ಪ
    * ಉಪ್ಪು - ರುಚಿಗೆ ತಕ್ಕಷ್ಟು
Preparation :

How to make ಬ್ರೆಡ್ ರೋಲ್ :

  • ಮಾಡುವ ವಿಧಾನ:

    ಮೊದಲಿಗೆ ಬೇಯಿಸಿಟ್ಟ ಆಲೂಗಡ್ದೆಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಬಳಿಕ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪುಗಳನ್ನೂ ಸಣ್ಣಗೆ ಹೆಚ್ಚಿ. ಒಂದೆಡೆ ಕಡಲೆ ಹಿಟ್ಟಿಗೆ ಸ್ವಲ್ಪ ನೀರನ್ನು ಹಾಕಿ ಒಂದು ಹದಕ್ಕೆ ಬರುವಂತೆ ಮಿಶ್ರಣ ಮಾಡಿಕೊಳ್ಳಿ.

    ಈಗ ಬಾಣೆಲೆಗೆ ಎಣ್ಣೆ ಹಾಕಿ ಕಾದ ಬಳಿಕ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ಹಸಿಮೆಣಸು, ಕತ್ತರಿಸಿದ ಆಲೂಗಡ್ಡೆ, ಅರಷಿಣ, ಗರಂಮಸಾಲಾ, ಉಪ್ಪು ಹಾಕಿ ಉರಿ ಸಣ್ಣಗೆ ಮಾಡಿ ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ.

    ಈಗ ಬ್ರೆಡ್ ಪೀಸ್ ಗೆ ಸ್ವಲ್ಪ ನೀರನ್ನು ತಾಗಿಸಿ ಅದರ ಮಧ್ಯೆ ಮಿಶ್ರಣ ಮಾಡಿದ ಆಲೂ ಪಲ್ಯವನ್ನು ಹಾಕಿ ಸುತ್ತಿ. ನಿಮಗೆ ಬೇಕಾದಷ್ಟು ಬ್ರೆಡ್ ರೋಲ್ ಹೀಗೆ ಸುತ್ತಿದ ಬಳಿಕ ಅವುಗಳನ್ನು ಕಡಲೆ ಹಿಟ್ಟಿನಲ್ಲಿ ಹೊರಳಾಡಿಸಿ. ಬಳಿಕ ಅದನ್ನು ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ. ಈಗ ಬಿಸಿಬಿಸಿ ಬ್ರೆಡ್ ರೋಲ್ ಸವಿಯಲು ಸಿದ್ದ.

Recipe by :ಲೇಖಾ ಆರ್

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited