ಮೊದಲಿಗೆ ಆಲೂಗಡ್ದೆ, ಬಟಾಣಿ, ಕಾಲಿಫ್ಲವರ್ ಗಳನ್ನು ಬೇಯಿಸಿಟ್ಟುಕೊಳ್ಳಿ. ದೊಡ್ದ ಮೆಣಸಿನಕಾಯಿ, ಈರುಳ್ಳಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಬಳಿಕ ಟೊಮೆಟೊವನ್ನು ಹೆಚ್ಚಿ, ಮಿಕ್ಸಿಯಲ್ಲಿ ರುಬ್ಬಿ ರಸ ತೆಗೆದಿಟ್ಟುಕೊಳ್ಳಿ.
ಈಗ ಕಾದ ಬಾಣೆಲೆಗೆ 2 ಚಮಚ ಬೆಣ್ಣೆ, ಶುಂಠಿ,ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಹುರಿಯಿರಿ. ಬಳಿಕ ಹೆಚ್ಚಿಟ್ಟ ದೊಡ್ಡ ಮೆಣಸಿನಕಾಯಿ ಹಾಕಿ ಕಂದುಬಣ್ಣ ಬರುವ ವರೆಗೆ ಹುರಿಯಿರಿ.ಈಗ ಟೊಮೆಟೊ ರಸ, ಖಾರದಪುಡಿ, ಪಾವ್ ಬಾಜಿ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಗಟ್ಟಿಯಾಗುವ ವರೆಗೆ ಕುದಿಸಿ. ಬಳಿಕ ಅದರ ಮೇಲೆ ಸ್ವಲ್ಪ ಬೆಣ್ಣೆ, ಕೊತ್ತಂಬರಿ ಸೊಪ್ಪು ಹಾಕಿ.
ಈಗ ಕಾದ ತವಾದ ಮೇಲೆ ಬೆಣ್ಣೆ ಸವರಿದ ಪಾವ್ ಇಟ್ಟು ಸ್ವಲ್ಪ ರೋಸ್ಟ್ ಮಾಡಿ. ಒಂದು ಪ್ಲೇಟ್ ಗೆ ಪಾವ್ ಹಾಕಿ, ಒಂದು ಬೌಲ್ ನಲ್ಲಿ ಬಾಜಿ ಅದರ ಮೇಲೆ ಸ್ವಲ್ಪ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಇಟ್ಟು ಅಲಂಕರಿಸಿ. ಅದರ ಮೇಲೆ ಸ್ವಲ್ಪ ನಿಂಬೆರಸ ಹಾಕಿದರೆ ಬಿಸಿ ಬಿಸಿ ಪಾವ್ ಬಾಜಿ ಸವಿಯಲು ಸಿದ್ಧ.