Untitled Document
Sign Up | Login    

Food Recipes

ಕಣಲೆ ಪಲ್ಯ
ಕಣಲೆ ಪಲ್ಯ

Ingredients :

  • » ಸಣ್ಣಗೆ ಹೆಚ್ಚಿದ ಕಣಲೆ - 2 ಕಪ್(ಬಿದಿರಿನ ಮೊಳಕೆ)
    ಕಡಲೆ -1/2ಕಪ್(ನೆನೆಸಿದ ಕಡಲೆ)
    ಈರುಳ್ಳಿ - 1
    ಹಸಿ ಮೆಣಶಿನ ಕಾಯಿ-2
    ಎಣ್ಣೆ - 2 ಚಮಚ
    ಇಂಗು - 1 ಚಿಟಿಕೆ
    ಅರಸಿಣ - ಸ್ವಲ್ಪ
    ಸಾಸಿವೆ - ಸ್ವಲ್ಪ
    ಕರಿಬೇವು - ಸ್ವಲ್ಪ
    ನಿಂಬೆರಸ - 1ಚಮಚ
    ಉಪ್ಪು - ರುಚಿಗೆ ತಕ್ಕಷ್ಟು
    ತೆಂಗಿನ ತುರಿ-ಸ್ವಲ್ಪ(ಬೇಕಾದರೆ ಮಾತ್ರ)
Preparation :

How to make ಕಣಲೆ ಪಲ್ಯ :

  • ಬಾಣೆಲೆಯಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಕತ್ತರಿಸಿದ ಹಸಿಮೆಣಸು, ಕರಿಬೇವು ಹಾಕಿ.
    ಬಳಿಕ ಹೆಚ್ಚಿಟ್ಟ ಕಣಲೆ, ಕಡಲೆ,ಅರಿಸಿಣ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಕೈಯಾಡಿಸಿ.
    ನಂತರ ಸ್ವಲ್ಪ ಉರಿ ಕಡಿಮೆ ಮಾಡಿ ಪ್ಲೇಟ್ ಮುಚ್ಚಿಡಿ, ಆಗಾಗ ಕೈಯಾಡಿಸುತ್ತಿರಿ.
    20 ನಿಮಿಷದ ಬಳಿಕ ಒಂದು ಹದಕ್ಕೆ ಕಣಲೆ ಹಾಗೂ ಕಡಲೆ ಬೆಂದ ಬಳಿಕ ಅದಕ್ಕೆ ಈರುಳ್ಳಿ ಸೇರಿಸಿ.
    ಉರಿ ಕಡಿಮೆ ಮಾಡಿ ಎಲ್ಲವೂ ಚೆನ್ನಾಗಿ ಹುರಿಯುವ ವರೆಗೆ ಕೈಯಾಡಿಸುತ್ತಿರಿ. ಹುರಿದ ಬಳಿಕ ಉರಿಯಾರಿಸಿ.
    ಅದಕ್ಕೆ ನಿಂಬೆರಸ ಸೇರಿಸಿ. ನಿಮಗೆ ಇಷ್ಟವಾಗುವಂತಿದ್ದಲ್ಲಿ ತೆಂಗನ ತುರಿ ಸೇರಿಸಬಹುದು.
    ಈಗ ರುಚಿ ರುಚಿಯಾದ ಕಣಲೆ ಪಲ್ಯ ಸವಿಯಲು ಸಿದ್ಧ

Recipe by :ಪಾರ್ವತಿ ಭಟ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited