Untitled Document
Sign Up | Login    

Food Recipes

ಟೊಮೆಟೊ ಸಾಂಬಾರ್
ಟೊಮೆಟೊ ಸಾಂಬಾರ್

Ingredients :

  • » ದೊಡ್ಡ ಟೊಮೆಟೊ - 5
    ಕೊತ್ತಂಬರಿ ಬೀಜ - 2 ಚಮಚ
    ಕರಿಮೆಣಸು - 3/4 ಚಮಚ
    ಬೆಳ್ಳುಳ್ಳಿ - 4 ಬೀಜ
    ತುಪ್ಪ - 2 ಚಮಚ
    ಹಸಿಮೆಣಸಿನ ಕಾಯಿ - 4
    ತೊಗರಿಬೇಳೆ - ಚಿಕ್ಕ ಬೌಲ್ ನಲ್ಲಿ ಅರ್ಧ
    ಸಾಸಿವೆ - 1/2ಚಮಚ
    ಇಂಗು - ಸ್ವಲ್ಪ
    ಕರಿಬೇವು - ಸ್ವಲ್ಪ
    ಉಪ್ಪು - ರುಚಿಗೆ ತಕ್ಕಷ್ಟು
Preparation :

How to make ಟೊಮೆಟೊ ಸಾಂಬಾರ್ :

  • ತೊಗರಿ ಬೇಳೆಯನ್ನು ತೊಳೆದ ಬಳಿಕ ಬೇಯಿಸಿ.
    ಟೊಮೆಟೊವನ್ನೂ ಬೇಯಿಸಿ.
    ಈಗ ತೊಮೆಟೊ ಸಿಪ್ಪೆ ತೆಗೆದು ಕಿವುಚಿ.
    ಬೆಂದ ಬೇಳೆಗೆ ಟೊಮೆಟೊ ಹಾಕಿ ಉಪ್ಪನ್ನು ಸೇರಿಸಿ.
    ಕೊತ್ತಂಬರಿ ಬೀಜ, ಕರಿಮೆಣಸು, ಸುಲಿದ ಬೆಳ್ಳುಳ್ಳಿ ಬೀಜ, ಹಸಿ ಮೆಣಸಿನಕಾಯಿ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ಮಸಾಲೆ ತಯಾರಿಸಿ.
    ಬಳಿಕ ಈ ಮಸಾಲೆಯನ್ನು ಬೇಳೆ, ಟೊಮೆಟೊ ಜೊತೆ ಸೇರಿಸಿ, ಬೇಕಾದ ಹದಕ್ಕೆ ನೀರು ಸೇರಿಸಿ, ಕುದಿಸಿ ಕೆಳಗಿಳಿಸಿ.
    ತುಪ್ಪದಲ್ಲಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ಸಾಂಬಾರ್ ಗೆ ಹಾಕಿ.
    ಈಗ ಬಿಸಿಬಿಸಿ ಟೊಮೆಟೊ ಸಾಂಬಾರ್ ಸವಿಯಲು ಸಿದ್ಧ. ಮಳೆಗಾಲದಲ್ಲಿ ಇದು ಆರೊಗ್ಯಕ್ಕೆ ಒಳ್ಳೆಯದು.

Recipe by :ಯಶೋಧಾ ಆರ್ ಬಿ

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited