» ಹೆಚ್ಚಿದ ಸೋರೆಕಾಯಿ - ಅರ್ಧ ಕಪ್
ಅಕ್ಕಿ ಹಿಟ್ಟು - ಒಂದು ಕಪ್
ಸ್ವಲ್ಪ ನೀರು
ಉಪ್ಪು
ಶುಂಟಿ ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
ಹೆಚ್ಚಿದ ಈರುಳ್ಳಿ - ಅರ್ಥ ಕಪ್
ಕರಿಬೇವಿನ ಸೊಪ್ಪು
ಕುತ್ತುಂಬ್ರಿ
ಕಾಲು ಚಮಚ ಜೀರಿಗೆ
Preparation :
How to make ಸೋರೆಕಾಯಿ ರೊಟ್ಟಿ :
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸ್ಪಲ್ಪ ಸಾಸಿವೆ ಕಾಳು, ಚಿಟಿ ಅರಿಶಿಣ , ಕರಿಬೇವಿನ ಸೊಪ್ಪು ಹೆಚ್ಚಿದ ಹಸಿಮೆಣಸು ಜೀರಿಗೆ ಹಾಕಿ. ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಕಾಯಿಸಿಕೊಳ್ಳಿ.
ಕಾದಿರುವ ನೀರಿನಲ್ಲಿ ಅಕ್ಕಿಹಿಟ್ಟನ್ನು ಚನ್ನಾಗಿ ಕಲಸಿ, ಹಿಟ್ಟು ನೀರಿಗೆ ಹೊಂದಿಕೊಳ್ಳುತ್ತಿರುವಾಗ ಚಿಕ್ಕದಾಗಿ ಹೆಚ್ಚಿದ ಸೋರೆ ಕಾಯಿ, ಈರುಳ್ಳಿ, ಹೆಚ್ಚಿದ ಕುತ್ತುಂಬ್ರಿ ಸೊಪ್ಪು ಹಾಕಿ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿಯೇ ಇರಲಿ.
ಸಿದ್ಧಗೊಂಡ ಹಿಟ್ಟನ್ನು ಸಣ್ಣ ಬೆಂಕಿ ಉರಿಯಲ್ಲಿ ಕಾದಿರು ತವಾದಮೇಲೆ ತಟ್ಟಿ. ತವಾಕ್ಕೆ ಎಣ್ಣೆಹಾಕಿ ತಟ್ಟುವುದು ಒಳ್ಳೆಯದು. ಎಣ್ಣೆಯೊಂದಿಗೆ ಚೆನ್ನಾಗಿ ಬೆಂದ ಅಕ್ಕಿರೊಟ್ಟಿಯನ್ನು ಹಸಿಮೆಣಸಿನ ಕಾಯಿ ಚಟ್ನಿಯೊಂದಿಗೆ ಸವಿದರೆ ಸೊಗಸಾಗಿರುತ್ತದೆ.