Untitled Document
Sign Up | Login    

Food Recipes

ತರಕಾರಿ ಚಿತ್ರಾನ್ನ
ತರಕಾರಿ ಚಿತ್ರಾನ್ನ

Ingredients :

  • » ಚಿಕ್ಕದಾಗಿ ಕತ್ತರಿಸಿದ ಬೀನ್ಸ್-100ಗ್ರಾಮ್
    ಚಿಕ್ಕದಾಗಿ ಕತ್ತರಿಸಿದ ಕ್ಯಾರೇಟ್-2-3
    ಚಿಕ್ಕದಾಗಿ ಕತ್ತರಿಸಿದ ಕ್ಯಾಪ್ಸಿಕಂ-ಅರ್ಧ
    ಚಿಕ್ಕದಾಗಿ ಕತ್ತರಿಸಿದ ಟೊಮೆಟೊ-1
    ಸಾಧಾರಣವಾಗಿ ಕತ್ತರಿಸಿದ ದೊಡ್ಡದಾದ ಈರುಳ್ಳಿ-1
    ಬೇಯಿಸಿದ ಬಟಾಣಿ-ಚಿಕ್ಕ ಬೌಲ್
    ಸಾಂಬರ್ ಪೌಡರ್-1ಚಮಚ
    ಕತ್ತರಿಸಿದ ಹಸಿಮೆಣಶಿನಕಾಯಿ-2
    ಅನ್ನ-1ಬೌಲ್
    ಕರಿಬೇವು-ಸ್ವಲ್ಪ
    ಕೊತ್ತಂಬರಿ ಸೊಪ್ಪು-ಸ್ವಲ್ಪ
    ಅರಿಶಿನ-1ಚಿಟಿಕೆ
    ಸಾಸಿವೆ-ಸ್ವಲ್ಪ
    ಎಣ್ಣೆ-ನಾಲ್ಕು ಚಮಚ
    ಉಪ್ಪು-ರುಚಿಗೆ ತಕ್ಕಷ್ಟು
Preparation :

How to make ತರಕಾರಿ ಚಿತ್ರಾನ್ನ :

  • * ಮೊದಲಿಗೆ ಬಾಣೆಲೆಯಲ್ಲಿ ಎಣ್ಣೆ ಹಾಕಿ. ಬಳಿಕ ಸ್ವಲ್ಪ ಸಾಸಿವೆ, ಕತ್ತರಿಸಿಟ್ಟುಕೊಂಡ ಹಸಿ ಮೆಣಶಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಅದಕ್ಕೆ ಹೆಚ್ಚಿಟ್ಟುಕೊಂಡ ಬೀನ್ಸ್, ಕ್ಯಾರೆಟ್, ಟೊಮೇಟೊ, ಕ್ಯಾಪ್ಸಿಕಂ, ಬೇಯಿಸಿದ ಬಟಾಣಿ, 1ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 4-5 ನಿಮಿಷ ಹಾಗೇ ಕೈಯಾಡಿಸುತ್ತಿರಿ. ಈಗ ಈರುಳ್ಳಿ ಹಾಗೂ 1ಚಮಚ ಸಾಂಬಾರ್ ಪೌಡರ್ ನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಉರಿ ಕಡಿಮೆ ಮಾಡಿ1ನಿಮಿಷ ಅದರ ಮೇಲೆ ಪ್ಲೇಟ್ ನಿಂದ ಮುಚ್ಚಿಡಿ ಬಳಿಕ ಕರಿಬೇವನ್ನು ಹಾಕಿ ಸ್ಟೋವ್ ಆಫ್ ಮಾಡಿ.

    * ತಯಾರಾದ ತರಕಾರಿ ಗೊಜ್ಜಿಗೆ ಈಗ 1 ಬೌಲ್ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದರ ಮೆಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಬಿಸಿ ಬಿಸಿ ತರಕಾರಿ ಚಿತ್ರಾನ್ನ ಸವಿಯಲು ಸಿದ್ದ.

Recipe by :ಚಂದ್ರಲೇಖಾ ರಾಕೇಶ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited