Untitled Document
Sign Up | Login    

Food Recipes

ಕೆಸುವಿನ ಎಲೆ ಚಟ್ನಿ
ಕೆಸುವಿನ ಎಲೆ ಚಟ್ನಿ

Ingredients :

  • » ಕೆಸವುನ ಎಲೆ 2-3
    ಹಸಿಮೆಣಶಿನಕಾಯಿ-4
    ತೆಂಗಿನ ತುರಿ-1ಚಿಕ್ಕ ಬೌಲ್
    ಹುಣಸೆರಸ-4ಚಮಚ
    ಸಾಸಿವೆ-ಸ್ವಲ್ಪ
    ಅರಿಶಿಣ ಪುಡಿ-ಸ್ವಲ್ಪ
    ಇಂಗು-1ಚಿಟಿಕೆ
    ಕರಿಬೇವು-ಸ್ವಲ್ಪ
    ಉಪ್ಪು-ರುಚಿಗೆ ತಕ್ಕಷ್ಟು
Preparation :

How to make ಕೆಸುವಿನ ಎಲೆ ಚಟ್ನಿ :

  • * 2-3ಕೆಸವಿನ ಎಲೆಯನ್ನು ತೆಗೆದುಕೊಂಡು, ಅದರ ನಾರನ್ನು ತೆಗೆಯಬೇಕು. ಚೆನ್ನಾಗಿ ತೊಳೆದು, ಒಂದು ಪಾತ್ರೆಯಲ್ಲಿ ಕೆಸವಿನ ಎಲೆ ಗಳನ್ನಿಟ್ಟು ಬೇಯಿಸಿ.
    * ಕಾದ ಬಾಣೆಲೆಗೆ 1ಚಮಚ ಅಡಿಗೆ ಎಣ್ಣೆ, ಸ್ವಲ್ಪ ಸಾಸಿವೆ, 4ಹಸಿ ಮೆಣಶಿನ ಕಾಯಿಗಳನ್ನು ಹಾಕಿ ಹುರಿಯಿರಿ. ಸ್ಟೋವ್ ಆಫ್ ಮಾಡಿ 1ಚಿಟಿಕೆಯಷ್ಟು ಇಂಗನ್ನು ಹಾಕಿ.
    * 1 ಚಿಕ್ಕ ಬೌಲ್ ನಷ್ಟು ಹೆಚ್ಚಿಟ್ಟ ತೆಂಗಿನ ತುರಿಯೊಂದಿಗೆ ಬೇಯಿಸಿಟ್ಟ ಕೆಸವಿನ ಎಲೆ, ಹುರಿದ ಹಸಿಮೆಣಸಿನ ಮಿಶ್ರಣ, ಹುಣಸೆ ಹಣ್ಣಿನ ರಸಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ.
    * ರುಬ್ಬಿದ ಮಿಶ್ರಣವನ್ನು ಈಗ ಒಂದು ಬೌಲ್ ಗೆ ಹಾಕಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಇದಕ್ಕೆ ಕರಿಬೇವಿನ ಒಗ್ಗರಣೆಯನ್ನು ಹಾಕಿದರೆ ಬಿಸಿ ಬಿಸಿ ಅನ್ನದ ಜೊತೆ ತಿನ್ನಲು ಕೆಸವಿನ ಚಟ್ನಿ ಸಿದ್ಧ.

Recipe by :ಚಂದ್ರಲೇಖಾ ರಾಕೇಶ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited