Untitled Document
Sign Up | Login    

Food Recipes

ಹಾಗಲಕಾಯಿ ಗೊಜ್ಜು
ಹಾಗಲಕಾಯಿ ಗೊಜ್ಜು

Ingredients :

  • » ಹಾಗಲಕಾಯಿ 1 (ಚಿಕ್ಕ ಗಾತ್ರದಾದರೆ 2)
    ಸಕ್ಕರೆ 2 -3ಚಮಚ
    ಮೆಣಸಿನ ಪುಡಿ 1 ಚಮಚ
    ಮೆಂತೆ ಪುಡಿ ¼ ಚಮಚ (ಎಣ್ಣೆ ಹಾಕದೆ ಹುರುದು ಪುಡಿ ಮಾಡಿದ ಮೆಂತೆ ಪುಡಿ)ಡಿ)
    ಅರಿಶಿಣ ಪುಡಿ ¼ ಚಮಚ
    ಎಣ್ಣೆ 4 ಚಮಚ
    ಹುಣಸೆ ರಸ 4 ಚಮಚ
    ಸ್ವಲ್ಪ ಸಾಸಿವೆ ಸ್ವಲ್ಪ
    ಕರಿಬೇವಿನ ಎಲೆ
    ಚಿಟಿಕೆಯಷ್ಟು ಇಂಗು
    ರುಚಿಗೆ ತಕ್ಕ ಉಪ್ಪು
Preparation :

How to make ಹಾಗಲಕಾಯಿ ಗೊಜ್ಜು :

  • * ಹಾಗಲಕಾಯಿಯನ್ನು ತೊಳೆದುಕೊಂಡು ಎರಡು ಭಾಗ ಮಾಡಿ, ಬೀಜವನ್ನು ತೆಗೆದು, ಹಾಗಲಕಾಯಿಯನ್ನು ಸಾಧ್ಯವಾದಷ್ಟು ಸಣ್ಣಗೆ ಹೆಚ್ಚಿಕೊಳ್ಳಬೇಕು. ಈ ತುಂಡುಗಳಿಗೆ ಉಪ್ಪು ಸೇರಿಸಿ ಒಂದು ಗಂಟೆ ಮುಚ್ಚಿಡಿ. ನಂತರ ಇದನ್ನು ಚೆನ್ನಾಗಿ ಹಿಂಡಿ ರಸವನ್ನೆಲ್ಲ ಬೇರ್ಪಡಿಸಿ ( ಈ ರೀತಿ ಮಾಡಿದರೆ ಹಾಗಾಲಕಾಯಿಯ ಕಹಿ ಕಡಿಮೆಯಾಗುತ್ತದೆ).

    * ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿಕೊಂಡು ಹಾಗಲಕಾಯಿಯನ್ನು ಚೆನ್ನಾಗಿ ಮಗುಚುತ್ತಾ, ಅದು ಸ್ವಲ್ಪ ಗರಿಗರಿಯಾಗುವ ತನಕ ಹುರಿಯಬೇಕು.

    * ಈಗ ಇನ್ನೊಂದು ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿಕೊಂಡು ಒಗ್ಗರಣೆ ಮಾಡಿಕೊಂಡು, ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಂಡು, ಅರಿಶಿಣ ಪುಡಿ, ಮೆಂತ್ಯದ ಪುಡಿ, ಹಾಗೂ ಮೆಣಸಿನ ಪುಡಿ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ.
    ನಂತರ ಹುರಿದ ಹಾಗಲ ಕಾಯಿ, ಸಕ್ಕರೆ, ಹುಣಸೆ ರಸ ಹಾಕಿ 5-10 ನಿಮಿಷ ಸಣ್ಣ ಉರಿಯಲ್ಲಿ ನೀರಿನಂಶ ಇರುವ ತನಕ ಕುದಿಸಬೇಕು. ಈ ಗೊಜ್ಜನ್ನು ಉರಿಯಿಂದ ಇಳಿಸುವ ಮುನ್ನ ಉಪ್ಪು ಸರಿಯಿದೆಯೇ ಎಂದು ನೋಡಬೇಕು. ಇದನ್ನು ಮೊಸರನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

Recipe by :Seema Bhat

Share this page :   

Readers' Comments (5)

UGG Outlet08-12-2015:02:04:25 am

Louis Vuitton Handbags no more Red Bottom Shoes Prorsum Michael Kors Outlet and Burberry London Burberry Outlet

Shree29-01-2013:04:25:35 pm

Interesting

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited