Untitled Document
Sign Up | Login    
Dynamic website and Portals
  
October 16, 2017

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ

ನವದೆಹಲಿ : ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ನೌಕಾಪಡೆಯ ಅಡ್ಮಿರಲ್ ಸುನೀಲ್ ಲಾಂಬಾ ,ಪಿವಿಎಸ್‌ಎಂ, ಎವಿಎಸ್‌ಎಂ, ಎಡಿಸಿ, ನೌಕಾಪಡೆ ಮುಖ್ಯಸ್ಥರು ಹಾಗೂ ನೌಕಾ ಪಡೆಯ ಸಿಬ್ಬಂದಿ ಭಾಗವಹಿಸಿದ್ದರು.

ಐಎನ್‌ಎಸ್‌ ಕಿಲ್ತಾನ್‌ ಕೋಲ್ಕತ್ತದ ಗಾರ್ಡನ್‌ ರೀಚ್‌ ಶಿಪ್‌ ಬಿಲ್ಡರ್ಸ್‌ ಹಾಗೂ ಎಂಜಿನಿಯರ್‌ಗಳಿಂದ ನಿರ್ಮಿಸಲ್ಪಟಿದ್ದು, ಭಾರತೀಯ ಪಡೆಯ ವಿನ್ಯಾಸ ನಿರ್ದೇಶನಾಲಯದಿಂದ ವಿನ್ಯಾಸಗೊಂಡಿದೆ. ಶಿವಾಲಿಕ್‌ ಕ್ಲಾಸ್‌, ಕೋಲ್ಕತ್ತ ಕ್ಲಾಸ್‌, ಐಎನ್‌ಎಸ್‌ ಕಾಮೋರ್ಟಾ ಕ್ಲಾಸ್‌ ನೌಕೆಗಳು ಸೇರ್ಪಡೆಗೊಂಡ ಬಳಿಕ ನೌಕಪಡೆಗೆ ಸೇರ್ಪಡೆಯಾಗುತ್ತಿರುವ ದೇಶಿ ನಿರ್ಮಿತ ಯುದ್ಧ ನೌಕೆ ಇದಾಗಿದೆ.

 

 

Share this page : 
 

Table 'bangalorewaves.bv_news_comments' doesn't exist