Untitled Document
Sign Up | Login    
Dynamic website and Portals
  
October 8, 2017

ಬನ್ನೇರುಘಟ್ಟ ಉದ್ಯಾನವನದಲ್ಲಿ ಹುಲಿ ದಾಳಿಗೆ ಕೇರ್ ಟೇಕರ್ ಸಾವು

ಬನ್ನೇರುಘಟ್ಟ ಉದ್ಯಾನವನದಲ್ಲಿ ಹುಲಿ ದಾಳಿಗೆ ಕೇರ್ ಟೇಕರ್ ಸಾವು

ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ದಾಳಿಗೆ ಪ್ರಾಣಿ ಪಾಲಕನೊಬ್ಬ ಬಲಿಯಾಗಿದ್ದು, ಮೃತ ವ್ಯಕ್ತಿಯ ಕುಟುಂಬ ಸದಸ್ಯರು ನ್ಯಾಯದೊರಕಿಸಿಕೊಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

7 ದಿನಗಳ ಹಿಂದಷ್ಟೆ ಸಹಾಯಕ ಪ್ರಾಣಿ ಪಾಲಕನಾಗಿ ಕೆಲಸಕ್ಕೆ ಸೇರಿದ್ದ 35 ವರ್ಷದ ಆಂಜನೇಯ ಹುಲಿಗಳ ದಾಳಿಗೆ ಬಲಿಯಾದ ವ್ಯಕ್ತಿ. ಸಂಜೆ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ವೇಳೆ 1 ವರ್ಷ ಪ್ರಾಯದ 2 ಮರಿ ಹುಲಿಗಳು ಮೈಮೇಲೆ ಎರಗಿವೆ. ಈ ವೇಳೆ ದೊಡ್ಡ ಹುಲಿಗಳು ದಾಳಿ ಮಾಡಿದ್ದು ,ತೀವ್ರ ರಕ್ತಸ್ರಾವದಿಂದ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಧಿಕಾರಿಗಳ ಬೇಜಾವಾಬ್ದಾರಿತನವೇ ಪ್ರಾಣಿ ಪಾಲಕನ ಮೇಲೆ ಹುಲಿ ದಾಳಿಗೆ ಕಾರಣ ಎಂಬ ಆಕ್ರೋಶ ವ್ಯಕ್ತವಾಗಿದೆ. ಬನ್ನೇರು ಘಟ್ಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist