Untitled Document
Sign Up | Login    
Dynamic website and Portals
  
September 30, 2017

ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ

ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದ ಐತಿಹಾಸಿಕ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಜಂಬೂ ಸವಾರಿ ಹಾಗೂ ಪಂಜಿನ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳವ ಆನೆಗಳಿಗೆ ಅಲಂಕಾರ ಮಾಡಲಾಗುತ್ತಿದ್ದು, ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಜ ಯದುವೀರ್ ​ಒಡೆಯರ್​ಅವರು ವಿಜಯದಶಮಿ ಮತ್ತು ಶಮಿ ಪೂಜೆ ನೆರವೇರಿಸಲಿದ್ಧಾರೆ. ಮಧ್ಯಾಹ್ನ 2.15ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಸಂಜೆ 4.45ಕ್ಕೆ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಐತಿಹಾಸಿಕ ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.

ನಾಡದೇವತೆ ಚಾಮುಂಡೇಶ್ವರಿ ದೇವತೆಯನ್ನು ಹೊರಲಿರುವ ಆನೆ ಅರ್ಜುನ ಸಿದ್ಧನಾಗಿದ್ದು, ಅರ್ಜುನನ್ನು ಸಕಲ ರೀತಿಯಲ್ಲೂ ಸಿಂಗಾರಗೊಳಿಸಲಾಗಿದೆ. ಚಿನ್ನದ ಅಂಬಾರಿ ಹೊತ್ತ ಅರ್ಜುನ, ಅರಮನೆಯ ಬಲರಾಮ ದ್ವಾರದಿಂದ ತೆರಳಲಿದ್ದು, ಬನ್ನಿ ಮಂಟಪ ತಲುಪಲಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ 40 ಕಲಾತಂಡಗಳು, 40 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಇನ್ನು ರಾತ್ರಿ 8 ಗಂಟೆಗೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ.

 

 

Share this page : 
 

Table 'bangalorewaves.bv_news_comments' doesn't exist