Untitled Document
Sign Up | Login    
Dynamic website and Portals
  
September 21, 2017

ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ

ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ

ಮೈಸೂರು : ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ದೊರೆತಿದೆ. ನಿತ್ಯೋತ್ಸವ ಕವಿ, ನಾಡೋಜ ಡಾ.ಕೆ ಎಸ್ ನಿಸಾರ್ ಅಹಮದ್ ದಸರಾ ಹಬ್ಬಕ್ಕೆ ವೈಭವದ ಚಾಲನೆ ನೀಡಿದರು.

ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿಗೆ ಅಗ್ರ ಪೂಜೆ ನೆರವೇರಿಸುವ ಮೂಲಕ ಬೆಳಗ್ಗೆ 8.45ಕ್ಕೆ ತುಲಾ ಲಗ್ನ ಮುಹೂರ್ತದಲ್ಲಿ ದಸರಾ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಸಚಿವೆ ಉಮಾಶ್ರೀ, ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೊದಲ ದಿನ 12 ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅಂಬಾವಿಲಾಸ ಅರಮನೆಯ ಮುಂಭಾಗ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮುಂದಿನ ಹತ್ತು ದಿನಗಳ ಕಾಲ ಮೈಸೂರಿನಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಸಂಗೀತ, ನೃತ್ಯ, ಕಲೆ, ಸಿನಿಮಾ, ಕವಿಗೋಷ್ಠಿ, ಕ್ರೀಡೆ, ವೈವಿಧ್ಯಮಯ ಆಹಾರ ಮೇಳ, ನಾಡಕುಸ್ತಿ ಮೇಳೈಸಲಿವೆ. ಇದೇ ಮೊದಲ ಬಾರಿ ಉರ್ದು ಕವಿಗಳ ಸಂಗಮವಾದ ಮುಶೈರಾ ಆಯೋಜಿಸಲಾಗಿದೆ. ಸೆ. 30 ರಂದು ಜಂಬೂಸವಾರಿ ನಡೆಯಲಿದೆ.

ಚೆಸ್ ಗ್ರ್ಯಾಂಡ್ಮಾಸ್ಟರ್ ಎಂ.ಎಸ್.ತೇಜ್ಕುಮಾರ್ ಅವರು ದಸರಾ ಕ್ರೀಡಾಜ್ಯೋತಿ ಬೆಳಗಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist