Untitled Document
Sign Up | Login    
Dynamic website and Portals
  
September 25, 2016

ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ

ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಮತ್ತೊಂದು ಮೈಲುಗಲ್ಲು ಸ್ಥಾಪನೆಗೆ ಸಿದ್ಧತೆ ನಡೆಸಿದ್ದು, ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡಲು ತಯಾರಿ ನಡೆಸಿದೆ.

ಸೋಮವಾರ ಏಕಕಾಲದಲ್ಲಿ 8 ಉಪಗ್ರಹ ಉಡಾವಣಾ ಕಾರ್ಯ ನಡೆಯಲಿದ್ದು, ಈಗಾಗಲೇ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಲ್ಲಿ ಪಿಎಸ್ ಎಲ್ ವಿ-ಸಿ35 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೋ ಹೇಳಿದೆ.

8 ಉಪಗ್ರಹಗಳ ಪೈಕಿ ಮೂರು ಉಪಗ್ರಹಗಳು ಭಾರತದ್ದಾಗಿದ್ದು, ಐದು ವಿದೇಶಿ ಉಪಗ್ರಹಗಳು ಸೇರಿವೆ. ಒಟ್ಟು 8 ಉಪಗ್ರಹಗಳನ್ನು ಏಕಕಾಲದಲ್ಲಿ 2 ಕಕ್ಷೆಗೆ ಸೇರಿಸುವುದು ಇಸ್ರೋ ಗುರಿಯಾಗಿದೆ. 8 ಉಪಗ್ರಹಗಳ ಪೈಕಿ ಮೂರು ಉಪಗ್ರಹಗಳು ಸ್ವದೇಶಿ ಉಪಗ್ರಹಗಳಾಗಿದ್ದು, ಈ ಪೈಕಿ ಭಾರತದ ಪ್ರಮುಖ ಹವಾಮಾನ ಉಪಗ್ರಹ ಸ್ಕಾಟ್​ಸ್ಯಾಟ್-1 371 ಕೆಜಿ. ತೂಕ ಹೊಂದಿದೆ.

ಈ ಸ್ಕಾಟ್​ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ. ಇದಲ್ಲದೆ ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ನಿರ್ವಿುಸಿದ ಪಿಸ್ಯಾಟ್ ಉಪಗ್ರಹ ಕೂಡಾ ಕಕ್ಷೆ ಸೇರಲಿದೆ. ಸ್ಕಾಟ್​ಸ್ಯಾಟ್-1 ಉಪಗ್ರಹವು ಓಶಿಯನ್​ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ.

 

 

Share this page : 
 

Table 'bangalorewaves.bv_news_comments' doesn't exist