Untitled Document
Sign Up | Login    
Dynamic website and Portals
  
September 17, 2016

ಪ್ರಧಾನಿ ಹುಟ್ಟಹಬ್ಬದ ಸಂಭ್ರಮಕ್ಕೆ 3,750 ಕೆ ಜಿ ತೂಕದ ಕೇಕ್

ಪ್ರಧಾನಿ ಹುಟ್ಟಹಬ್ಬದ ಸಂಭ್ರಮಕ್ಕೆ 3,750 ಕೆ ಜಿ ತೂಕದ ಕೇಕ್

ಸೂರತ್ : ಇಂದು ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಹುಟ್ಟುಹಬ್ಬ. ಈ ಸಂಭ್ರಮವನ್ನು ದೇಶಾದ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಈ ದಿನವನ್ನು ಇನ್ನಷ್ಟು ವಿಶಿಷ್ಟಗೊಳಿಸಲು ಗುಜರಾತ್ ನ ಸೂರತ್ ನಲ್ಲಿ 3,750 ಕೆ ಜಿ ತೂಕದ ಅತಿ ದೊಡ್ಡ ಕೇಕ್ ತಯಾರಿಸಲಾಗಿದೆ.

ಕೇಕ್ ವಿಶ್ವ ದಾಖಲೆಗಳ ಗಿನ್ನೆಸ್‌ ಬುಕ್‌ ನಲ್ಲಿ ವಿಶ್ವದ ಅತೀ ಎತ್ತರದ ಪಿರಮಿಡ್ ಮಾದರಿಯ ಕೇಕ್‌ ಎಂಬ ಹೆಗ್ಗಳಿಕೆಯೊಂದಿಗೆ ಸ್ಥಾನ ಪಡೆದಿದೆ. ಸೂರತ್‌ ನಗರದ ಅತುಲ್‌ ಬೇಕರಿಯಲ್ಲಿ ಈ ಕೇಕ್ ನಿರ್ಮಾಣ ಮಾಡಲಾಗಿದೆ.

ಅತುಲ್‌ ಬೇಕರಿಯ ಅಧ್ಯಕ್ಷ ಅತುಲ್‌ ವೇಕರಿಯಾ ಅವರು "ಈ ಕೇಕ್‌ 3,750 ಕಿಲೋ ತೂಕ ಹೊಂದಿದೆ. ನಾವಿಂದು ವಿಶ್ವ ದಾಖಲೆಯನ್ನು ಮುರಿದಿದ್ದೇವೆ. ಇದು ಶುದ್ಧ ಸಸ್ಯಾಹಾರಿ ಕೇಕ್‌ ಆಗಿದೆ. ನಾನು, ನನ್ನ ಮಕ್ಕಳು, ವಿಕಲಾಂಗ ಮಕ್ಕಳು ಎಲ್ಲರೂ ಈ ಕೇಕ್‌ನ ಸವಿಯನ್ನು ಸವಿಯಲಿದ್ದಾರೆ' ಎಂದು ಹೇಳಿದ್ದಾರೆ.

24 ಗಂಟೆಗಳಲ್ಲಿ 30 ಬಾಣಸಿಗರನ್ನೊಳಗೊಂಡ ತಂಡ ಈ ಕೇಕ್ ತಯಾರಿಸಿದ್ದು, ಇದು 7 ಅಡಿ ಎತ್ತರವಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
 • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
 • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
 • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
 • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited