Untitled Document
Sign Up | Login    
Dynamic website and Portals
  
September 12, 2016

ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು-ಪತನ ನಿಶ್ಚಿತ: ರಾಘವೇಶ್ವರಶ್ರೀ

ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು-ಪತನ ನಿಶ್ಚಿತ: ರಾಘವೇಶ್ವರಶ್ರೀ

ಬೆಂಗಳೂರು : ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು – ಪತನ ನಿಶ್ಚಿತ, ದೇವರಾಜ ಇಂದ್ರ ದೇವಗುರು ಬೃಹಸ್ಪತಿಯನ್ನು ಅಗೌರವದಿಂದ ಕಂಡದ್ದರಿಂದ ದಾನವರ ಜೊತೆ ನಡೆದ ಯುದ್ಧದಲ್ಲಿ ಸೋತು ಸರ್ವಪತನ ಹೊಂದಿದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಸಮುದ್ರ ಮಥನ – ಕಾಮಧೇನು ಆವಿರ್ಭಾವದ ಕಥೆಯನ್ನು ನಿರೂಪಿಸಿದ ಶ್ರೀಗಳು, ದೇವ ದಾನವರು ಸಮುದ್ರವನ್ನು ಮಥಿಸುವಾಗ ಮೊದಲು ದುಃಖ-ನೋವುಗಳು ಇದ್ದವು, ಕಾಮಧೇನುವಿನ ಆವೀರ್ಭಾವದ ನಂತರ ಸುಖ ಸಂಪತ್ತುಗಳು ಕ್ಷೀರಸಾಗರದಿಂದ ಆವೀರ್ಭವಿಸಿದವು. ಸಮುದ್ರಮಥನದ ಸಮಯದಲ್ಲಿ ದೇವ ದಾನವರ ಇಬ್ಬರು ಮನಸ್ಸಿನಲ್ಲೂ ಅಮೃತವನ್ನು ತಾವೇ ಪಡೆಯಬೇಕು ಎಂದಿತ್ತು. ನಮ್ಮ ಬಯಕೆ ಏನೇ ಇದ್ದರು ಭಗವಂತನ ಇಚ್ಛೆ ಇನ್ನೊಂದಿರುತ್ತದೆ, ನಾವು ಚಾಪೆ ಕೆಳಗೆ ನುಸುಳಬಯಸಿದರೆ, ಭಗವಂತ ರಂಗೋಲಿಯ ಕೆಳಗೆ ನುಸುಳಲು ಸಮರ್ಥ, ಭಾವ ಶುದ್ಧವಾಗಿದ್ದರೆ ಭಗವಂತ ಒಲಿಯುತ್ತಾನೆ ಎಂದು ಹೇಳಿದರು.

ಗೋವಿಗೂ – ಗುರುವಿಗೂ ಸಂಬಂಧ:
ಸಮುದ್ರ ಮಥನದಲ್ಲಿ ಕಾಮಧೇನು ಆವಿರ್ಭಾವವಾದಾಗ, ಶಿವನ ಅಣತಿಯಂತೆ ಸಂತಗಣಕ್ಕೆ ಕಾಮಧೇನು ಕೊಡಲ್ಪಟ್ಟಿತು, ಹಾಗಾಗಿ ಗೋವಿಗೂ – ಗುರುವಿಗೂ(ಸಂತರಿಗೂ) ಇರುವ ಸಂಬಂಧ ಪ್ರಾಚೀನವಾದದ್ದಾಗಿದೆ. ಹೀಗಾಗಿಯೇ ನಮಗೂ ಗೋವಿಗೂ ಅವಿನಾಭಾವ ಸಂಬಂಧ ಬೆಳೆಯಿತು ಎಂದು ಅಭಿಪ್ರಾಯ ವ್ಯಕ್ತಪದಿಸಿದ ಶ್ರೀಗಳು, ಗೋವಿನ ರಕ್ಷಣೆ ಸಂತರ ಹೊಣೆಯಾಗಿದ್ದು, ಸಂತರೆಲ್ಲರೂ ಗೋರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆನೀಡಿದರು.

ಗೋವಿದ್ದಲ್ಲಿ ನೋವು – ವಿಘ್ನಗಳಿಲ್ಲ:
ಕಳೆದ ಕೆಲವರ್ಷಗಳಿಂದ ಚಾತುರ್ಮಾಸ್ಯದ ಸಮಯದಲ್ಲಿ ಒಂದಿಲ್ಲೊಂದು ಮಿಥ್ಯಾರೊಪ ಮಾಡಿ ವಿಘ್ನವನ್ನು ಉಂಟುಮಾಡುವುದು ಒಂದು ಪದ್ಧತಿ ಆಗಿದೆ, ಆದರೆ ಈ ವರ್ಷ ಗೋವಿಗೆ ಸಂಬಂಧಿಸಿದ ಚಾತುರ್ಮಾಸ್ಯವಾಗಿದ್ದರಿಂದಲೋ ಏನೋ ನಿರ್ವಿಘವಾಗಿ ಸಾಗುತ್ತಿದೆ ಎಂದ ಶ್ರೀಗಳು, ಗೋವಿದ್ದಲ್ಲಿ ನೋವು-ಸೋಲುಗಳನ್ನು ಗೆಲ್ಲಬಹುದು ಎಂದರು.

ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳೀ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಶ್ರೀಪಾದ ಭಟ್, ದೀಪಿಕಾ ಭಟ್, ಸಾಕೇತ ಶರ್ಮ, ಸತ್ಯಜಿತ್ ಜೈನ್ ಕೊಲ್ಕೋತಾ, ಪೃಥ್ವಿ, ಪೌಷಾ, ರಘುನಂದನ ಬೇರ್ಕಡವು ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್., ಗಣೇಶ್ ಗುಂಡ್ಕಲ್, ಆದಿತ್ಯ ಭಟ್ ಕೆಕ್ಕಾರು ಮೊದಲಾದವರು ಭಾಗವಹಿಸಿದ್ದರು. ಅನಂತರ ಸಮುದ್ರಮಥನದ ರೂಪಕ ಜನರ ಮನತಟ್ಟಿತು. ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಅ.ಪು ನಾರಾಯಣಪ್ಪ ಅವರು ರಚಿಸಿದ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು ಎಂಬ ಪುಸ್ತಕವನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶ್ರೀಸಂಸ್ಥಾನದ ಶಾಸನತಂತ್ರ ಇಂದಿನ ಗೋಕಥಾ ಪ್ರಾಯೋಜಕತ್ವವನ್ನು ವಹಿಸಿತ್ತು. ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
 • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
 • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited