Untitled Document
Sign Up | Login    
Dynamic website and Portals
  
August 28, 2016

ಇಸ್ರೋದಿಂದ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಯಶಸ್ವಿ ಪರೀಕ್ಷೆ

ಇಸ್ರೋದಿಂದ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಯಶಸ್ವಿ ಪರೀಕ್ಷೆ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇನ್ನೊಂದು ಮೈಲುಗಲ್ಲು ಸಾಧಿಸುವತ್ತ ಹೆಜ್ಜೆ ಇಟ್ಟಿದ್ದು, ಸ್ವದೇಶಿ ನಿರ್ಮಿತ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಪರೀಕಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ.

ಬೆಳಿಗ್ಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿದೆ. ಪರೀಕ್ಷಾರ್ಥ ಪ್ರಯೋಗ ಕಾರ್ಯ ಯಶಸ್ವೀಯಾಗಿದೆ ಎಂದು ಇಸ್ರೋ ವಿಜ್ನಾನಿಗಳು ತಿಳಿಸಿದ್ದಾರೆ.

ಎರಡು ಸ್ಕ್ರಾಮ್ ಜೆಟ್ ಎಂಜಿನ್ ಗಳು ಪರೀಕ್ಷೆ ವೇಳೆ ರಾಕೆಟ್ ವಿಮಾನದ ಒಳಗೆ ಅದು 55 ಸೆಕೆಂಡುಗಳ ಕಾಲ ಉರಿಯಿತು. 6 ಸೆಕೆಂಡುಗಳ ಕಾಲ ಪರೀಕ್ಷಾರ್ಥ ಪರೀಕ್ಷೆ ನಡೆಸಲಾಯಿತು ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ರಾಕೆಟ್‌ನ ವಿಶೇಷವೆಂದರೆ ವಾತಾವರಣದಲ್ಲಿನ ಆಮ್ಲಜನಕವನ್ನು ಹೀರಿಕೊಳ್ಳುವುದರಿಂದ ಇಂಧನದ ಜೊತೆಗೆ ಕೊಂಡೊಯ್ಯುವ ಆಕ್ಸಿಡೈಸರ್‌ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ವಾಹಕವನ್ನು ಉಡಾಯಿಸುವಾಗ ಅದರ ತೂಕವನ್ನು ಅರ್ಧದಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ.

ಇಸ್ರೋದ ಮರುಬಳಕೆ ಉಡ್ಡಯನ ವಾಹಕಕ್ಕೆ ಶಬ್ದಾತೀತ ವೇಗದಲ್ಲಿ ವಿದ್ಯುತ್ ಪೂರೈಸಲು ಕೂಡ ಸ್ಕ್ರಾಮ್ ಜೆಟ್ ಎಂಜಿನ್ ಬಳಕೆ ಮಾಡಲಾಗುತ್ತದೆ.

 

 

Share this page : 
 

Table 'bangalorewaves.bv_news_comments' doesn't exist