Untitled Document
Sign Up | Login    
Dynamic website and Portals
  
August 26, 2016

ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ: ರಾಘವೇಶ್ವರಶ್ರೀ

ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ: ರಾಘವೇಶ್ವರಶ್ರೀ

ಬೆಂಗಳೂರು : ನಮ್ಮ ದೇಶದಲ್ಲಿ ಗೋವಿಗಾಗಿ ಪ್ರಾಣಕೊಟ್ಟವರು ಇದ್ದಾರೆ, ನಾವು ದೇಶೀ ಗೋವಿನ ಹಾಲು ಕುಡಿಯುವ ಸಂಕಲ್ಪ ಮಾಡುವುದರ ಮೂಲಕ ಗೋವನ್ನು ಉಳಿಸಿಕೊಳ್ಳೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದು ವಿದೇಶೀ ವಸ್ತುಗಳು ನಮ್ಮ ಮನೆಬಾಗಿಲಿಗೆ ಬಂದು ಸೇರುವ ವ್ಯವಸ್ಥೆ ಇದೆ.ಹೀಗಿರುವಾಗ ದೇಶೀ ಗೋವಿನ ಹಾಲು ನಮ್ಮ ಮನೆಯನ್ನು ಸೇರುಲಾಗುವುದಿಲ್ಲವೇ ಎಂದು ಪ್ರಶ್ನಿಸಿದ ಶ್ರೀಗಳು, ದೇಶೀಹಸುವಿನ ಹಾಲನ್ನು ಕುಡಿಯುವ ವಾತಾವರಣ ನಿರ್ಮಾಣವಾದರೆ, ಹಾಲನ್ನು ಪೂರೈಸುವ ವಾತಾವರಣವೂ ನಿರ್ಮಾಣವಾಗುತ್ತದೆ. ಹಾಲನ್ನು ಸೇವಿಸಿದರೆ ನಮಗೆ ಮಾತ್ರವಲ್ಲ, ಗೋವಿಗೂ ಒಳ್ಳೆಯದಾಗುತ್ತದೆ. ದೇಶೀ ಹಾಲನ್ನು ಕುಡಿದರೆ ಗೋರಕ್ಷಣೆ ಸಾಧ್ಯ ಎಂದು ಆಶಿಸಿದರು.

ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ, ಹಾಲಿನಿಂದ ಸತ್ವಗುಣ, ಶ್ಲೇಷ್ಮಗುಣ ವೃದ್ಧಿಯಾಗುವುದರ ಮುಖಾಂತರ ಮನಸ್ಸಿಗೆ ಶಾಂತತೆ, ದೇಹಕ್ಕೆ ದೃಡತೆ ಉಂಟಾಗುತ್ತದೆ ಎಂದರು.

ಹೊಸೂರಿನ ಬ್ರಹ್ಮಶ್ರೀ ಶ್ರೀವೇಂಕಟೇಶ್ವರ ಸ್ವಾಮಿಗಳು ಸಂತಸಂದೇಶ ನೀಡಿ, ಗೋವಿದ್ದಲ್ಲಿ ಆರೋಗ್ಯ ಇರುತ್ತದೆ. ಉಪಕಾರ ಮಾಡಿದವರಿಗೆ ಮಾತರವಲ್ಲ, ಅಪಕಾರ ಮಾಡಿದವರಿಗೂ ಗೋವು ಅಮೃತಸಮಾನವಾದ ಹಾಲನ್ನು ನೀಡುತ್ತದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾತನಾಡಿ, ಗೋವುಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟವರು ಪೂಜ್ಯ ರಾಘವೇಶ್ವರಭಾರತೀ ಸ್ವಾಮಿಗಳು. ಗೋಚಾತುರ್ಮಾಸ್ಯದ ಮೂಲಕ ಗೋಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ, ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಗೋಸೇವೆಗೆ ಮುಂದಾಗೋಣ ಎಂಬ ಕರೆಯನ್ನು ನೀಡಿದರು.

ಬೆಂಗಳೂರು ನಗರದಲ್ಲಿದ್ದರೂ ದೇಶೀಯ ಹಸುವನ್ನು ಸಂರಕ್ಷಿಸಿ ಮಾದರಿಯಾಗಿರುವ ಕುಮಾರ್ ಜಹಗೀರದಾರ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾ ಪುರಸ್ಕಾರ ಸ್ವೀಕರಿಸಿದ ಕುಮಾರ್ ಜಹಗೀರದಾರ ಅವರು, ಗವ್ಯೋತ್ಪನ್ನಗಳ ಶ್ರೇಷ್ಠತೆಯನ್ನು ಹಾಗೂ ಗೋವಿನೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ವಿಚಾರವಿಹಾರ 3 ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಬ್ರಹ್ಮಶ್ರೀ ಶ್ರೀವೇಂಕಟೇಶ್ವರ ಸ್ವಾಮಿಗಳು ಲೋಕಾರ್ಪಣೆ ಮಾಡಿದರು.ಗೋಸಂದೇಶ ಸಭೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಗೋಪಾಲ್ ಚಿಟ್ಟಿಯಾರ್ ಅವರನ್ನು ಶ್ರೀಗಳು ಆಶೀರ್ವದಿಸಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಶ್ರೀಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು.

ಮಂಗಳೂರು ಮಂಡಲಾಂತರ್ಗತ ಕೇಪು, ವಿಟ್ಲ, ಕಲ್ಲಡ್ಕ ಹಾಗೂ ಕುಂದಾಪುರ ವಲಯದವರಿಂದ ಸರ್ವಸೇವೆ ನೆರವೆರಿತು. ಇಸ್ರೋದ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ ಜೆ ಭಟ್, ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
 • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
 • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited