Untitled Document
Sign Up | Login    
Dynamic website and Portals
  
August 20, 2016

ರಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು

ರಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು

ರಿಯೋ ಡಿ ಜನೈರೋ : ರಿಯೋ ಒಲಿಂಪಿಕ್ಸ್ ನ ವನಿತೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದ ಪಿವಿ ಸಿಂಧು ಭಾರತದ ಪರ ಬೆಳ್ಳಿ ಪದಕಕ್ಕೆ ತೃಪ್ತರಾದರು.

ರಿಯೋ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಸ್ಪೇನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಪರಾಭವಗೊಂಡಿದ್ದಾರೆ. ಸ್ವರ್ಣ ಪದಕದಿಂದ ಕೂದಲೆಳೆಯ ಅಂತರದಲ್ಲಿ ಹಿನ್ನಡೆ ಕಂಡ ಸಿಂಧು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಫೈನಲ್ ಪಂದ್ಯದಲ್ಲಿ ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸೆಟ್ ನ ಜಿದ್ದಾಜಿದ್ದಿನ ಹೋರಾಟದಲ್ಲಿ 21-19 ಅಂಕಗಳ ಅಂತರದಲ್ಲಿ ಮಣಿಸಿದರು. ಎರಡನೇ ಸೆಟ್ ನಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್ 21-12 ಅಂಕಗಳಿಂದ ಸಿಂಧುರನ್ನು ಮಣಿಸಿದರು. ಮೂರನೇ ಸೆಟ್ ನಲ್ಲಿ ಸಿಂಧು ವಿರುದ್ಧ ಮತ್ತೆ ಆಕ್ರಮಣಕಾರಿ ಆಟವಾಡಿದ ಮರಿನ 21-15 ಅಂಕಗಳಿಂದ ಸೋಲಿಸಿ ಸ್ವರ್ಣ ಪದಕ ವಿಜೇತರಾದರು. ಇದರೊಂದಿಗೆ ಸಿಂಧು ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಆದರೂ ವಿಶ್ವದ ಅಗ್ರ ಷಟ್ಲರ್ ಎದುರು ಒಂದು ಗಂಟೆ ಮತ್ತು 23 ನಿಮಿಷಗಳ ಕಾಲ ಹೋರಾಡಿದ ಹೈದರಾಬಾದ್ ಹುಡುಗಿ, ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.

ಸಿಂಧು ಒಲಿಂಪಿಕ್ಸ್ ಸಾಧನೆಗಳು

* ರಜತ ಪದಕ ಗೆದ್ದ ಭಾರತದ ಮೊದಲ ಮಹಿಳೆ.
* ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಭಾರತದ 15ನೇ ಕ್ರೀಡಾಪಟು.
* ಒಲಿಂಪಿಕ್ಸ್ ಪದಕ ಗೆದ್ದ ಭಾರತದ 5ನೇ, ಆಂಧ್ರದ 2ನೇ ಮಹಿಳೆ.
* ವೈಯಕ್ತಿಕ ಪದಕ ಗೆದ್ದ ಭಾರತದ ಅತಿ ಕಿರಿಯ (21 ವರ್ಷ) ಕ್ರೀಡಾಪಟು.
* ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ರಜತ ಪದಕ ಗೆದ್ದ 4ನೇ ಭಾರತೀಯರು.
* ರಿಯೋದಲ್ಲಿ ಭಾರತಕ್ಕೆ 2ನೇ ಪದಕ, ಒಲಿಂಪಿಕ್ಸ್​ನಲ್ಲಿ ಒಟ್ಟಾರೆ 28ನೇ ಪದಕ, 7ನೇ ರಜತ.

 

 

Share this page : 
 

Table 'bangalorewaves.bv_news_comments' doesn't exist