Untitled Document
Sign Up | Login    
Dynamic website and Portals
  
August 19, 2016

ರಿಯೋ ಒಲಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು

ರಿಯೋ ಒಲಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ  ಫೈನಲ್ ಪ್ರವೇಶಿಸಿದ ಪಿವಿ ಸಿಂಧು

ರಿಯೋ ಡಿ ಜನೈರೋ : ರಿಯೋ ಒಲಂಪಿಕ್ಸ್ ನಲ್ಲಿ ಹೈದರಾಬಾದ್​ನ ಪಿವಿ ಸಿಂಧು ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ.

ವಿಶ್ವ ನಂ. 10 ಪಿವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ. 6 ಜಪಾನ್​ನ ನೊಝೋಮಿ ಒಕುಹಾರಾ ವಿರುದ್ಧ 21-19, 21-10 ಗೇಮ್ ನಿಂದ ಅದ್ಭುತ ಗೆಲುವು ದಾಖಲಿಸಿದರು.

ಕ್ರೀಡಾಂಗಣದಲ್ಲಿ ಸೇರಿದ್ದ ಭಾರತೀಯ ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ಪ್ರಾಬಲ್ಯ ಮೆರೆದ ಹೈದರಾಬಾದ್​ನ 21 ವರ್ಷದ ಆಟಗಾರ್ತಿ ಸಿಂಧು 2ನೇ ಗೇಮ್ಲ್ಲಿ ಸತತ 11 ಅಂಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.

ಪಿವಿ ಸಿಂಧು ಅವರು ಪ್ರೀ ಕ್ವಾರ್ಟರ್‌ ಫೈನಲ್‌, ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿಫೈನಲ್‌ ಹೋರಾಟಗಳನ್ನು 2 ಸೆಟ್ ಗೆ ಮುಗಿಸಿದ್ದು ವಿಶೇಷವಾಗಿದ್ದು, ಫೈನಲ್ ನಲ್ಲಿ ಸಿಂಧು ಸ್ಪೇನ್‌ ನ ಕರೊಲಿನಾ ಮರೀನ್‌ ಜತೆ ಸೆಣೆಸಲಿದ್ದಾರೆ. ಫೈನಲ್ ಪ್ರವೇಶಿಸಿರುವ ಸಿಂಧು ಅವರಿಗೆ ಗಣ್ಯರಿಂದ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಿವಿ ಸಿಂಧುಗೆ ಅಭಿನಂದನೆ ಸಲ್ಲಿಸಿದ್ದು, ಫೈನಲ್ ಪಂದ್ಯಕ್ಕೆ ಶುಭಹಾರೈಸಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist