Untitled Document
Sign Up | Login    
Dynamic website and Portals
  
August 13, 2016

ಆಗಸ್ಟ್ 14 ರ ಮಧ್ಯ ರಾತ್ರಿ ರನ್ ಫಾರ್ ಭಾರತ್

ಆಗಸ್ಟ್ 14 ರ ಮಧ್ಯ ರಾತ್ರಿ ರನ್ ಫಾರ್ ಭಾರತ್

ಬೆಂಗಳೂರು : ಬಿಜೆಪಿ ಯುವಮೋರ್ಚಾ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ವತಿಯಿಂದ ಆ.14ರ ಮಧ್ಯರಾತ್ರಿ ‘ರನ್ ಫಾರ್ ಭಾರತ್’ ಸ್ವಾತಂತ್ರ್ಯ ಓಟವನ್ನು ಆಯೋಜಿಸಲಾಗಿದೆ.

ಫ್ರೀಡಂ ಪಾರ್ಕ್​ನಲ್ಲಿ ರಾತ್ರಿ 9 ಗಂಟೆಯಿಂದ ದೇಶಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಮ್ ಬ್ಯಾಂಡ್ ತಂಡದಿಂದ ಫ್ಯೂಶನ್ ರಾಕ್ ಸಂಗೀತವಿರಲಿದೆ.

ಮಧ್ಯರಾತ್ರಿ 12.02ಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಷ್ಟ್ರ ಧ್ವಜಾರೋಹಣ ಮಾಡಿದ ನಂತರ ಭಾರತಕ್ಕಾಗಿ ಓಟ ಕಾರ್ಯಕ್ರಮ ಆರಂಭವಾಗಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು 080- 40751579 ಸಂಖ್ಯೆಗೆ ಮಿಸ್ಡ್​ಕಾಲ್ ನೀಡಿ ಹೆಸರು ನೊಂದಾಯಿಸಿಕೊಳ್ಳಬಹುದು.

 

 

Related News

Share this page : 
 

Table 'bangalorewaves.bv_news_comments' doesn't exist