Untitled Document
Sign Up | Login    
Dynamic website and Portals
  
July 16, 2016

ಸ್ನೇಹ ಶಾಲೆಗೆ ಕರ್ನಾಟಕ ಕಾರ್ಮಿಕ ಲೋಕ ಬಳಗ ಭೇಟಿ

ಸ್ನೇಹ ಶಾಲೆಗೆ ಕರ್ನಾಟಕ ಕಾರ್ಮಿಕ ಲೋಕ ಬಳಗ ಭೇಟಿ

ಸೂಳ್ಯ : ಪ್ರಸಿದ್ಧ ಲೇಖಕ ರಾ.ನಂ.ಚಂದ್ರಶೇಖರ ಅವರ ನೇತೃತ್ವದಲ್ಲಿ ಕರ್ನಾಟಕ ಕಾರ್ಮಿಕ ಲೋಕದ ತಂಡ ಸ್ನೇಹ ಶಿಕ್ಷಣ ಸಂಸ್ಥೆಯನ್ನು ನೋಡುವ ಉದ್ದೇಶದಿಂದ ಜು.13ರಂದು ಶಾಲೆಗೆ ಭೇಟಿ ನೀಡಿದ್ದು, ಪರಿಸರದ ಮಧ್ಯೆ ಶಾಲೆ ಬೆಳವಣಿಗೆಯಾಗುವುದನ್ನು ನೋದಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಕಾರ್ಮಿಕ ಬಳಗದ ಮುಖ್ಯಸ್ಥ, ರಾ.ನಮ್.ಚಂದ್ರಶೇಖರ, ಸ್ನೇಹ ಶಾಲೆ ವಾತಾವರಣವು ಹಿಂದಿನ ಕಾಲದ ಪರ್ಣಕುಟೀರ, ಗುರುಕುಲದ ನೆನಪನ್ನು ತರುತ್ತಿದೆ. ಇದು ಒಂದು ಅಪರೂಪದ ಅಪೂರ್ವ ಶಾಲೆ. ಈ ಶಾಲೆ ಕನ್ನಡ ನಾಡಿಗೆ, ಸಾಂಸ್ಕೃತಿಕ ಲೋಕಕ್ಕೆ ಒಂದು ದೊಡ್ಡ ಕೊಡುಗೆ. ಇಲ್ಲಿ ಪ್ರತಿಭೆಗಳ ಪ್ರಭೆ ಸೂಸುವ ಮಕ್ಕಳಿದ್ದಾರೆ. ನಿಮ್ಮೆಲ್ಲರ ಸೃಜನ ಶೀಲತೆ ಬೆಳೆಯಲಿ ಎಂದು ಆಶಿಸಿದರು.

ಇದೇ ವೇಳೆ ಚಂದ್ರಶೇಖರ ಅವರು ಶಾಲೆಯ ಗ್ರಂಥಾಲಯಕ್ಕೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾತರಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆ, ಸಂಸ್ಥೆಗಳ ಪರಸ್ಪರ ಸಹಯೋಗ ಬೆಳವಣಿಗೆಗೆ ಪೂರಕ ಎಂದರು.

ಬಿ.ವಿ.ರವಿಕಾಂತ್, ಆರ್.ರಾಮಸ್ವಾಮಿ, ಎ.ಪ್ರಭಾಕರ್,ಎಸ್.ಎಸ್.ಧರ್ಮೆಂದ್ರ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ದಾಮ್ಲೆ ಉಪಸ್ಥಿತರಿದ್ದರು.

 

 

Share this page : 
 

Table 'bangalorewaves.bv_news_comments' doesn't exist