Untitled Document
Sign Up | Login    
Dynamic website and Portals
  
June 26, 2016

ಉದ್ಯಾನ ವನದಲ್ಲಿ ಉದಯರಾಗ

ಬೆಂಗಳೂರು : ಬೆಂಗಳೂರು ಬಾಲ ಭವನವು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಪ್ರತಿ ಭಾನುವಾರಗಳಂದು ’ಉದ್ಯಾನದಲ್ಲಿ ಉದಯರಾಗಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

05-16 ವರ್ಷದ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅನುವಾಗುವಂತೆ, ಕಬ್ಬನ್ ಉದ್ಯಾನವನದ ‘ಬ್ಯಾಂಡ್ ಸ್ಟ್ಯಾಂಡ್’ ನಲ್ಲಿ ” ಉದ್ಯಾನದಲ್ಲಿ ಉದಯರಾಗ” ಶೀರ್ಷಿಕೆಯಡಿ ಮಕ್ಕಳಿಗೆ ಹಾಗೂ ಮಕ್ಕಳ ನೃತ್ಯ ಸಂಗೀತ ಸಂಸ್ಥೆಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದರೊಂದಿಗೆ, ಪ್ರದರ್ಶನ ನೀಡುವ ಮಕ್ಕಳಿಗೆ ಉಚಿತ ವೇದಿಕೆ ಹಾಗೂ ಮಕ್ಕಳ ಕಲಾ ಸಂಸ್ಥೆಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ.

2016-17 ನೇ ಸಾಲಿನಲ್ಲೂ ಕಾರ್ಯಕ್ರಮ ಮುಂದುವರೆಸಲು ಉದ್ದೇಶಿಸಿ, ಜುಲೈ – 2016 ರಿಂದ ಮಾರ್ಚ್ 2017 ರವರೆಗೆ ಬೆಳಿಗ್ಗೆ 8.00 ರಿಂದ 9.00 ಗಂಟೆವರೆಗೆ ಪ್ರತಿ ಭಾನುವಾರಗಳಂದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಏರ್ಪಡಿಸಲು ಅನುವಾಗುವಂತೆ, ವಿವಿಧ ಕಲಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣೆಗಾಗಿ ಕಾರ್ಯದರ್ಶಿಗಳ ಕಚೇರಿ, ಬಾಲ ಭವನ, ಕಬ್ಬನ್ ಉದ್ಯಾನವನ, ಬೆಂಗಳೂರು, ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080 – 22861423/22864189 ಮೂಲಕ ಸಂಪರ್ಕಿಸಬಹುದು.

 

 

Share this page : 
 

Table 'bangalorewaves.bv_news_comments' doesn't exist