Untitled Document
Sign Up | Login    
Dynamic website and Portals
  
June 18, 2016

ಯುದ್ಧ ವಿಮಾನಕ್ಕೆ ಸೇರ್ಪಡೆಯಾಗಲಿರುವ ಮೂವರು ಮಹಿಳಾ ಪೈಲಟ್ ಗಳು

ಯುದ್ಧ ವಿಮಾನಕ್ಕೆ ಸೇರ್ಪಡೆಯಾಗಲಿರುವ ಮೂವರು ಮಹಿಳಾ ಪೈಲಟ್ ಗಳು

ಹೈದ್ರಾಬಾದ್ : ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಿಗೆ ಮೊದಲಬಾರಿ ಇಂದು ಮೂವರು ಮಹಿಳಾ ಪೈಲಟ್ ಗಳು ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ.

ಮಹಿಳಾ ಪೈಲಟ್‌ ಗಳಾದ ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಇವರು ಮೊದಲಬಾರಿಗೆ ಯುದ್ಧ ವಿಮಾನಗಳಿಗೆ ಪೈಲಟ್ ಆಗಿ ಸೇರ್ಪಡೆಯಾಗುವ ಅವಕಾಶ ಪಡೆದಿದ್ದಾರೆ. ಈ ಮೂಲಕ ದೇಶದ ಮೊದಲ ಮಹಿಳಾ ಫೈಟರ್‌ ಪೈಲಟ್‌ಗಳೆಂಬ ಖ್ಯಾತಿ ಇವರದ್ದು.

ಮೂವರೂ ಮಹಿಳಾ ಪೈಲಟ್‌ಗಳು ಯುದ್ಧವಿಮಾನದ ಚಾಲನೆಯ ಪ್ರಾಥಮಿಕ ತರಬೇತಿಯನ್ನು ಕರ್ನಾಟಕದ ಬೀದರ್‌ ವಾಯುನೆಲೆಯಲ್ಲಿ ಪಡೆದಿದ್ದಾರೆ. 150 ತಾಸುಗಳ ಹಾರಾಟದ ಅನುಭವವನ್ನು ತರಬೇತಿ ಅವಧಿಯಲ್ಲಿ ಅವರು ಗಳಿಸಿಕೊಂಡಿದ್ದಾರೆ. ಮುಂದಿನ 6 ತಿಂಗಳು ಬ್ರಿಟನ್‌ ನಿರ್ಮಿತ ಹಾಕ್‌ ಸೂಪರ್‌ ಸಾನಿಕ್‌ ಯುದ್ಧವಿಮಾನಗಳ ಚಾಲನೆ ತರಬೇತಿ ಪಡೆಯಲಿದ್ದಾರೆ.

ವಾಯುಪಡೆ ಮುಖ್ಯಸ್ಥ ಆರೂಪ್‌ ರಾಹ ಅವರು, ಮಹಿಳಾ ಪೈಲಟ್‌ಗಳಿಗೆ 'ಮಹಿಳೆಯರು' ಎಂಬ ಯಾವುದೇ ವಿನಾಯಿತಿ ನೀಡುವುದಿಲ್ಲ. ಅಗತ್ಯವಿದ್ದ ಕಡೆ ಅವರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.

ಹೈದರಾಬಾದಿನ ಹೊರವಲಯ ದುಂಡಿಗಾಲ್ ನ ವಾಯುಪಡೆ ಅಕಾಡೆಮಿಯಲ್ಲಿ ನಡೆಯಲಿರುವ ಪರೇಡ್ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಭಾಗವಹಿಸಲಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist