Untitled Document
Sign Up | Login    
Dynamic website and Portals
  
May 31, 2016

'ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್' ಸೇರಿದ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಪ್ರಕಾಶನ

'ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್' ಸೇರಿದ  ರಾಮಚಂದ್ರಾಪುರ ಮಠದ  ಶ್ರೀ ಭಾರತೀ ಪ್ರಕಾಶನ

ಬೆಂಗಳೂರು : ಶ್ರೀ ರಾಮಚಂದ್ರಾಪುರ ಮಠದ ಶ್ರೀ ಭಾರತೀಪ್ರಕಾಶನವು ಪ್ರಕಟಿಸಿದ 'ಗುರುಗ್ರಂಥಮಾಲಿಕೆ' ಲಿಮ್ಕಾ ದಾಖಲೆ ನಿರ್ಮಿಸಿದೆ. 60 ದಿನಗಳ ಕಾಲ ದಿನಕ್ಕೊಂದರಂತೆ 60 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ್ದನ್ನು ಪುರಸ್ಕರಿಸಿ 'ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್' ಇದೊಂದು ದಾಖಲೆಯ ಕಾರ್ಯವೆಂದು ಪ್ರಶಂಸಿಸಿದೆ. ( Link : http://www.limcabookofrecords.in/record-detail.aspx?rid=1039 )

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ತಮ್ಮ ಚಾತುರ್ಮಾಸ್ಯದ ಸಂದರ್ಭದ 60 ದಿನಗಳ ಕಾಲ ಈ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ್ದರು. ಉತ್ತರಕನ್ನಡ ಜಿಲ್ಲೆಯ ಕೆಕ್ಕಾರಿನಲ್ಲಿ 2014ರ ಜುಲೈ 12ರಿಂದ ಸಪ್ಟೆಂಬರ್ 9ರವರಗೆ ಈ ವಿಶಿಷ್ಟ ಕಾರ್ಯ ನಡೆದಿತ್ತು.

'ಗುರುಗ್ರಂಥಮಾಲಿಕೆ' ಎನ್ನುವ ಶೀರ್ಷಿಕೆಯಲ್ಲಿ 60 ಮಹಾತ್ಮರ ಜೀವನ ಮತ್ತು ಸಂದೇಶಗಳನ್ನು ಈ ಮಾಲಿಕೆಯಲ್ಲಿ ನಿರೂಪಿಸಲಾಗಿತ್ತು. ಋಷಿಗಳು, ಸಂತರು, ಮಹಾಪುರುಷರು, ಶಾಸ್ತ್ರಕಾರರು, ಪೀಠಾಧಿಪತಿಗಳು ಮುಂತಾದ ಭಾರತ ಕಂಡ 60 ಗುರುಗಳ ಬದುಕಿನ ಅನಾವರಣ ಈ ಗ್ರಂಥದಲ್ಲಿತ್ತು.

ಶ್ರೀ ಭಾರತೀಪ್ರಕಾಶನವು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ವಿಶಿಷ್ಟ ಕಲ್ಪನೆಯ ಪ್ರಕಟಣಾ ಸಂಸ್ಥೆಯಾಗಿದ್ದು, ಜೀವನವನ್ನು ಉಜ್ಜೀವನಗೊಳಿಸುವ ಅನುಪಮ ಸಾಹಿತ್ಯಗಳ ಪ್ರಕಟಣೆಯನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಪುಸ್ತಕಗಳು, ಸಿ.ಡಿಗಳು, ಆಟಿಕೆಗಳು ಮುಂತಾದವುಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಪ್ರಕಾಶನ ವಿಶಿಷ್ಟ ಕಾರ್ಯ ಮಾಡುತ್ತಿದೆ.

 

 

Share this page : 
 

Table 'bangalorewaves.bv_news_comments' doesn't exist