Untitled Document
Sign Up | Login    
Dynamic website and Portals
  
March 15, 2016

ಯೋಗಗುರು ಬಾಬಾ ರಾಮದೇವ್ ಅವರಿಂದ ಬೆಂಗಳೂರಿನಲ್ಲಿ ಉಚಿತ ಯೋಗ ಶಿಬಿರ

BW News Bureau : ಯೋಗಗುರು ಬಾಬಾ ರಾಮದೇವ್ ಮಾ. 19ರಿಂದ 23ರವರೆಗೆ ಬೆಂಗಳೂರಿನಲ್ಲಿ ಉಚಿತ ಯೋಗ ಶಿಬಿರ ನಡೆಸಲಿದ್ದಾರೆ.

ಅರಮನೆ ಮೈದಾನದಲ್ಲಿ ಪ್ರತಿದಿನ ಉಚಿತ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ನಡೆಸುವ ಮೂಲಕ ಲಕ್ಷಾಂತರ ಜನರಿಗೆ ಉತ್ತಮ ಆರೋಗ್ಯದ ಮಾರ್ಗ ತೋರಿಸಲಿದ್ದಾರೆ. ರೋಗಮುಕ್ತ ಹಾಗೂ ಉತ್ಸಾಹದಾಯಕ ಜೀವನ ಮುನ್ನಡೆಸುವಲ್ಲಿ ಯೋಗ ಪ್ರಮುಖ ಪಾತ್ರವಹಿಸಬಲ್ಲದು ಎಂಬುದನ್ನು ಬಾಬಾ ರಾಮದೇವ್ ಸಾಬೀತುಪಡಿಸಿದ್ದಾರೆ.

ಮಹಿಳೆ- ಮಕ್ಕಳ ಅನುಕೂಲಕ್ಕಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ. ಮಾ. 20ರಂದು ಸಂಜೆ 3ರಿಂದ 5ರವರೆಗೆ ಮಹಿಳೆಯರಿಗೆ ವಿಶೇಷ ಶಿಬಿರವಿದೆ. ಹರಿದ್ವಾರದ ಪತಂಜಲಿ ಯೋಗಪೀಠದಿಂದ ತರಬೇತಿ ಪಡೆದ ವೈದ್ಯರ ತಂಡ ಎಲ್ಲರಿಗೂ ಆರೋಗ್ಯ ತಪಾಸಣೆ ಹಾಗೂ ಸಲಹೆ ನೀಡಲಿದೆ. ಮಾ. 21ರ ಸಂಜೆ 3ರಿಂದ 5ರವರೆಗೆ ಮಕ್ಕಳು ಮತ್ತು ಯುವಕರಿಗಾಗಿ ವಿಶೇಷ ಶಿಬಿರ ಆಯೋಜಿಸಲಾಗಿದೆ.

ಒಟ್ಟು 5 ದಿನಗಳ ಕಾಲ ಬೆಳಗ್ಗೆ 5ರಿಂದ 7.30ರವರೆಗೆ ಯೋಗಶಿಬಿರ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಲು ಉಚಿತ ಅವಕಾಶವಿದ್ದರೂ 88808 87078 ದೂರವಾಣಿ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.

 

 

Share this page : 
 

Table 'bangalorewaves.bv_news_comments' doesn't exist