Untitled Document
Sign Up | Login    
Dynamic website and Portals
  
July 3, 2015

ಭಾರತದ ಅರ್ಥ ವ್ಯವಸ್ಥೆ ಈಗ 2 ಟ್ರಿಲಿಯನ್ ಡಾಲರ್

ನವದೆಹಲಿ : ವಿಶ್ವ ಬ್ಯಾಂಕ್ ವರದಿಯಂತೆ ಭಾರತದ ಜಿಡಿಪಿ (ಅರ್ಥ್ ವ್ಯವಸ್ಥೆ) ಈಗ 2 ಟ್ರಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. 2014ರಲ್ಲೇ ಈ ಮಹತ್ವದ ಮೈಲಿಗಲ್ಲನ್ನು ದಾಟಿದ ಭಾರತದ ಜಿಡಿಪಿ ಈಗ 2.067 ಟ್ರಿಲಿಯನ್ ಅಮೆರಿಕನ್ ಡಾಲರ್ ಗಳಷ್ಟಿದೆ.

ಕಳೆದ ಕೇವಲ ಏಳು ವರ್ಷಗಳಲ್ಲಿ ಭಾರತ ತನ್ನ ಅರ್ಥ ವ್ಯವಸ್ಥೆಗೆ ಒಂದು ಟ್ರಿಲಿಯನ್ ಡಾಲರ್ ಸೇರಿಸಿಕೊಂಡಿದೆ. ಇದೊಂದು ಮಹತ್ವ್ದದ ಸಾಧನೆಯಾಗಿದ್ದರೂ ಆದಾಯವನ್ನು ಗಣನೆಗೆ ತೆಗೆದುಕೊಂಡರೆ ಭಾರತ ಇನ್ನೂ ಕೆಳೆ ಮಧ್ಯಮ ಆದಾಯ (lower middle income) ಸ್ಥರದಲ್ಲೇ ಉಳಿದುಕೊಂಡಿದೆ.

ಪ್ರತಿಯೊಬ್ಬ ಭಾರತೀಯನ ಒಟ್ಟು ರಾಷ್ಟ್ರೀಯ ವಾರ್ಷಿಕ ಆದಾಯ (gross national income) 1,610 ಡಾಲರ್ ಗೆ ಹೆಚ್ಚಿದೆ. ಅಂದರೆ ಪ್ರಸ್ತುತ ವಿದೇಶೀ ವಿನಿಮಯ ದರದಂತೆ ಇದು ರೂ.1,01,430 ಆಗುತ್ತದೆ.

ಈ ವರ್ಷದಲ್ಲಿ ಭಾರತವು ಆರ್ಥಿಕವಾಗಿ ಪ್ರಪಂಚದಲ್ಲೇ ಅತಿ ವೇಗದ ಗತಿಯಲ್ಲಿ ಬೆಳೆಯುತ್ತಿರುವ ದೇಶವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ರಘುರಾಮ್ ರಾಜನ್ ಗುರುವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಂತೆ ಭಾರತದ ಆರ್ಥಿಕತೆ ಪುನಶ್ಛೇತನಗೊೞುವ ಹಾದಿಯಲ್ಲಿದೆ. 'ಬಂಡವಾಳ ಹೂಡಿಕೆಯಲ್ಲಿ ಪ್ರಗತಿ ಕಂಡುಬರುತ್ತಿದೆ' ಎಂದು ರಾಜನ್ ಹೇಳಿದ್ದಾರೆ.

ಈ ನಡುವೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲಿಕಿರುವ ಗ್ರೀಸ್ ನ ಸಮಸ್ಯೆ ಭಾರತದ ಮೇಲೆ ಕೇವಲ ಸೀಮಿತ ಪರಿಣಾಮವಷ್ಟೇ ಬೀರಬಲ್ಲುದು ಎಂದವರು ಅಭಿಪ್ರಾಯಪಟ್ಟಿದ್ದಾರೆ. ಪ್ರತ್ಯಕ್ಷ ಪರಿಣಾಮವಿಲ್ಲದಿದ್ದರೂ ಗ್ರೀಸ್ ಸಂಕಷ್ಟಕ್ಕೆ ಯುರೋ ಸ್ಪಂದನೆಯನ್ನಾಧರಿಸಿ ಕೆಲವೊಂದು ಪರೋಕ್ಷ ಪರಿಣಾಮವಾಗುವ ಸಾಧ್ಯತೆ ಇದೆ ಎಂದು ರಾಜನ್ ಹೇಳಿದ್ದಾರೆ.

'ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತಮ ಅನುಕೂಲ ವಾತಾವರಣವಿದೆ. ಅಲ್ಲದೆ ನಮ್ಮ ದೇಶದಲ್ಲಿ ಸಾಕಷ್ಟು ವಿದೇಶೀ ವಿನಿಮಯದ ಸಂಗ್ರಹವೂ ಇದೆ' ಎಂದು ಆರ್.ಬಿ.ಐ. ಗವರ್ನರ್ ಹೇಳಿದ್ದಾರೆ.

ರಫ್ತು ವ್ಯಾಪಾರ ಇತ್ತೀಚೆಗೆ ನಿರೀಕ್ಷಿತ ಪ್ರಗತಿ ಕಾಣದಿದ್ದರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಚೀನಾ ಹೊರತುಪಡಿಸಿ ಎಲ್ಲಾ ಏಷಿಯನ್ ದೇಶಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಹೇಳಿದರು. ಈವರೆಗೆ ಬಂದ ವರದಿಯಂತೆ ದೇಶದಲ್ಲಿ ಮುಂಗಾರು ಉತ್ತಮವಾಗಿದೆ. ಆದರೆ ವರದಿಗಳನ್ನಾಧರಿಸಿ, ಮುಂದಿನ ದಿನಗಳಲ್ಲಿ ಇದು ಹೆಚ್ಚು ಕಡಿಮೆಯಾಗುವ ಸಂಭವವಿದೆ (ಅದರಿಂದ ಆರ್ಥಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಂಭವವಿದೆ) ಎನ್ನಲಾಗುತ್ತಿದೆ ಎಂದು ರಾಜನ್ ಎಚ್ಚರಿಕೆಯ ಮಾತನ್ನು ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
 • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
 • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
 • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited