Untitled Document
Sign Up | Login    
Dynamic website and Portals
  
June 27, 2015

ಯುದ್ಧ ಟ್ಯಾಂಕರ್ ನಿರ್ಮಾಣ: ಸ್ವದೇಶಿ, ವಿದೇಶಿ ಕಂಪನಿಗಳಿಗೆ ಆಹ್ವಾನ

ನವದೆಹಲಿ : ಪ್ರಮುಖ ಯುದ್ಧ ಟ್ಯಾಂಕರ್‌ (ಎಂಬಿಟಿಎಸ್‌)ಗಳನ್ನು ಬದಲಾಯಿಸಲು ಮುಂದಾಗಿರುವ ಭಾರತೀಯ ಸೇನೆ, ಭವಿಷ್ಯದ ಯುದ್ಧ ಟ್ಯಾಂಕರ್‌ (ಫ್ಯೂಚರ್‌ ಕಾಂಬ್ಯಾಟ್‌ ವೆಹಿಕಲ್‌, ಎಫ್ಆರ್‌ಸಿವಿ) ನಿರ್ಮಾಣಕ್ಕೆ ಸ್ವದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಆಹ್ವಾನ ನೀಡಿದೆ.

ಸೇನೆಯ ಈ ನಡೆ ಈಗಾಗಲೇ ಯುದ್ಧ ಟ್ಯಾಂಕರ್‌ ಗಳ ಮಾದರಿ ನಿರ್ಮಾಣದಲ್ಲಿ ತಲ್ಲೀನವಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ಅಚ್ಚರಿಯನ್ನುಂಟು ಮಾಡಿದೆ.

ಟಿ-72 ಯುದ್ಧ ಟ್ಯಾಂಕರ್‌ ಗಳ ಬದಲಾಯಿಸುವ ಕುರಿತು ಪ್ರಸ್ತಾವಗಳನ್ನು ಆಹ್ವಾನಿಸಿರುವ ಸೇನೆ, ಇದಕ್ಕೆ ಜುಲೈ 31ರ ಗಡುವು ನೀಡಿದೆ. ಈ ಪ್ರಸ್ತಾವ ಸಲ್ಲಿಸಲು ಸ್ಥಳೀಯ ಮತ್ತು ವಿದೇಶಿ ಕಂಪನಿಗಳಿಗೆರಡಕ್ಕೂ ಅವಕಾಶ ನೀಡಲಾಗಿದೆ. ಕಂಪನಿಗಳು ಸಲ್ಲಿಸುವ ಅತ್ಯುತ್ತಮ ವಿನ್ಯಾಸಗಳನ್ನು ಆಯ್ಕೆ ಮಾಡಿ, ಬಳಿಕ ಆಯ್ಕೆಯಾದ ಮಾದರಿಯನ್ನು ಉತ್ಪಾದಿಸಲು ಕಂಪನಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಆರ್‌ಡಿಒ ನಿರ್ದೇಶಕರು, ದೀರ್ಘಾವಧಿ ದೃಷ್ಟಿಕೋನದಿಂದ ಸೇನೆಗಾಗಿ ಯೋಜನೆ ರೂಪಿಸಿದ್ದೇವೆ. ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ನಿರತರಾಗಿದ್ದು, ಇದು ಮುಂದುವರೆಯಲಿದೆ ಎಂದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
 • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
 • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
 • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited