Untitled Document
Sign Up | Login    
Dynamic website and Portals
  
September 18, 2014

ತಂತ್ರಜ್ನಾನದ ಅತಿಯಾದ ಅವಲಂಬನೆ: ಆಭಾಸಕ್ಕೀಡಾದ ಬಿಬಿಎಂಪಿ ಬ್ಯಾನರ್

ಬಿಬಿಎಂಪಿ ಹಾಸ್ಯಾಸ್ಪದ ಬ್ಯಾನರ್ ಬಿಬಿಎಂಪಿ ಹಾಸ್ಯಾಸ್ಪದ ಬ್ಯಾನರ್

BW News Bureau : 'ತಂತ್ರಜ್ನಾನ'ದ ಅತಿಯಾದ ಅವಲಂಬನೆ ಎಷ್ಟು ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಬಿಬಿಎಂಪಿ ಬಳಸಿರುವ ಬ್ಯಾನರ್ ಉತ್ತಮ ಉದಾಹರಣೆಯಾಗಿದೆ.

ಬಿಷಪ್ ಕಾಟನ್ ಸ್ಕೂಲ್ ಎದುರು ಹಾಕಿರುವ ಬ್ಯಾನರ್ ನಲ್ಲಿ ಡುನಾಟ್ ಪಾಸ್ ಯೂರಿನ್ ಎಂಬ ವಾಕ್ಯವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ. ಸರಿಯಾದ ಕನ್ನಡ ಬಳಕೆಯಾಗಿದ್ದರೆ ಯಾರದ್ದೂ ತಕರಾರು ಇರುತ್ತಿರಲಿಲ್ಲ. ಆದರೆ ಗೂಗಲ್ ಮೂಲಕ ಕನ್ನಡಕ್ಕೆ ಅನುವಾದಿಸಲಾಗಿದೆ. ಯಡವಟ್ಟು ಆಗಿರುವುದು ಇಲ್ಲೇ. Do not pass urine ಎಂಬ ವಾಕ್ಯವನ್ನು ಗೂಗಲ್ ಟ್ರಾನ್ಸ್ ಲೇಟರ್ ಮೂಲಕ ಅನುವಾದ ಮಾಡಿದ ಪರಿಣಾಮ ಇಲ್ಲಿ ಮೂತ್ರ ತೇರ್ಗಡೆಹೊಂದಿಲ್ಲ ಎಂದಾಗಿ ಬಿಬಿಎಂಪಿಬ್ಯಾನರ್ ಹಾಸ್ಯಾಸ್ಪದವಾಗಿದೆ.

ಬಿಬಿಎಂಪಿ ಈ ಯಡವಟ್ ಕೆಲಸ ಫೇಸ್ ಬುಕ್ ನಲ್ಲಿ ನಗೆಪಾಟಲಿಗೀಡಾಗಿದೆ. ಅಲ್ಲದೇ ಈ ಬ್ಯಾನರ್ ನಿಂದಾಗಿ ಬಿಬಿಎಂಪಿಯನ್ನು ಫೇಸ್ ಬುಕ್ ನಲ್ಲಿ ಬಿಬಿಎಂ peee.... ಎಂದೇ ಅವಹೇಳನ ಮಾಡಲಾಗುತ್ತಿದೆ. ಗೂಗಲ್ ಸಹಾಯ ಪಡೆದು ಅನುವಾದ ಮಾಡಿದರೆ ಆಗುವ ಆಭಾಸ ಈ ಪ್ರಕರಣದಿಂದ ಬೆಳಕಿಗೆ ಬಂದಿದೆ.

ಗೂಗಲ್ ನಲ್ಲಿ ಇಂಗ್ಲಿಷ್ ನಿಂದ ನೇರವಾಗಿ ಕನ್ನಡಕ್ಕೆ ಅನುವಾದ ಮಾಡಿದರೆ ಇಂಗ್ಲಿಷ್ ಪದವನ್ನು ಯತಾರ್ಥವಾಗಿ ಅನುವಾದಿಸುತ್ತದೆ. ಉದಾಹರಣೆಗೆ Do not pass urine ಎಂಬ ಶಬ್ದದಲ್ಲಿ ಪಾಸ್ ಎಂಬ ಶಬ್ದವನ್ನು ಗೂಗಲ್ ತೇರ್ಗಡೆ ಎಂದು ಕನ್ನಡಕ್ಕೆ ಅನುವಾದಿಸಿದೆ.

 

 

Share this page : 
 

Table 'bangalorewaves.bv_news_comments' doesn't exist