Untitled Document
Sign Up | Login    
Dynamic website and Portals
  

Related News

ಕಂಪ್ಯೂಟರ್ ಖರೀದಿ ಹಗರಣ: ದೆಹಲಿ ಸಿಎಂ ಪ್ರಧಾನ ಕಾರ್ಯದರ್ಶಿ ಬಂಧನ

50 ಕೋಟಿ ರೂಪಾಯಿ ಕಂಪ್ಯೂಟರ್ ಖರೀದಿ ಹಗರಣದಲ್ಲಿ ನಡೆದ ಭ್ರಷ್ಟಾಚಾರ ಆರೋಪದಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ನಾಲ್ವರನ್ನು ಸಿಬಿಐ ಬಂಧಿಸಿದೆ. ಹಗರಣದ ಪ್ರಮುಖ ರಾಜೇಂದ್ರ ಕುಮಾರ್ ಎಂದು ಸಿಬಿಐ ಮೂಲಗಳು ತಿಳಿಸಿದ್ದು, ಕುಮಾರ್...

ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣ: ಪ್ರಭಾವೀ ವ್ಯಕ್ತಿ ಭಾಗಿ -ಮನೋಹರ್ ಪಾರೀಕರ್‌

ಅಗಸ್ಟಾ ವೆಸ್ಟ್‌ ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಒಬ್ಬ ಅತ್ಯಂತ ಪ್ರಭಾವೀ ವ್ಯಕ್ತಿ ಶಾಮೀಲಾಗಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಸಂಸತ್ತಿನಲ್ಲಿ ಹೇಳುವ ಮೂಲಕ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಹೇಳದೇ ನಿಗೂಢತೆಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಅಗಸ್ಟಾ ಹಗರಣದಲ್ಲಿ ಯಾರು ಶಾಮೀಲಾಗಿದ್ದಾರೆ...

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಆರೋಪ ತಳ್ಳಿಹಾಕಿದ ಸೋನಿಯಾ ಗಾಂಧಿ

ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಪಟ್ಟಂತೆ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ, ಮುಚ್ಚಿಡುವುದಿಲ್ಲ. ಯಾವುದಕ್ಕೂ ಹೆದರುವುದೂ ಇಲ್ಲಾ ಎಂದು ಕಾಂಗೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ನನ್ನ ವಿರುದ್ಧ ಆರೋಪಿಸುತ್ತಿವೆ. ನಾನು...

ಕಲ್ಲಿದ್ದಲು ಹಗರಣ: ಮೊದಲ ತೀರ್ಪು ಪ್ರಕಟ

ಯುಪಿಎ-2 ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತೀರ್ಪು ಪ್ರಕಟವಾಗಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ವಂಚಿಸಿ ಜಾರ್ಖಂಡ್‌ ನ‌ಲ್ಲಿ ಕಲ್ಲಿದ್ದಲು ಗಣಿ ಮಂಜೂರು ಮಾಡಿಸಿಕೊಂಡ ಪ್ರಕರಣದಲ್ಲಿ ಜಾರ್ಖಂಡ್‌ ಇಸ್ಪಾತ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ...

ಲಂಚ ಹಗರಣ: ಗೋವಾದ ಮಾಜಿ ಕಾಂಗ್ರೆಸ್ ಸಚಿವ ಚರ್ಚಿಲ್ ಅಲೆಮಾವೋ ಬಂಧನ

ಲೂಯಿಸ್ ಬರ್ಗರ್ ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗೋವಾದ ಮಾಜಿ ಲೋಕೋಪಯೋಗಿ ಸಚಿವ ಚರ್ಚಿಲ್ ಅಲೆಮಾವೋ ರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಇತ್ತೀಚೆಗೆ ಬಹಿರಂಗಗೊಂಡ ಅಮೆರಿಕದ ಲೂಯಿಸ್ ಬರ್ಗರ್ ಇಂಟರ್ನ್ಯಾಷನಲ್ ಐಎನ್ಸಿ (ಎಲ್.ಬಿ.ಐ) ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾಂಗ್ರೆಸ್ ಮಂತ್ರಿ ಅಲೆಮಾವೋ...

ಲಲಿತ್ ಮೋದಿಗೆ ಪ್ರವಾಸಿ ದಾಖಲೆ ನೀಡುವಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿಲ್ಲಃಸುಷ್ಮಾ

ಸೋಮವಾರ ರಾಜ್ಯಸಭೆಯಲ್ಲಿ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿವಾದದ ಕುರಿತಂತೆ ಮೌನ ಮುರಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ನೀಡುವಂತೆ ಬ್ರಿಟಿಷ್ ಸರ್ಕಾರಕ್ಕೆ ಎಂದೂ ಮನವಿಯನ್ನೇ ಮಾಡಿಲ್ಲ, ನನ್ನ ಮೇಲೆ ಮಾಡಿರುವ ಆರೋಪದಲ್ಲಿ...

ಕಾಂಗ್ರೆಸ್ ವಿರುದ್ದ ಟ್ವಿಟ್ಟರ್ ನಲ್ಲಿ ಸುಷ್ಮಾ ಸ್ವರಾಜ್ ಹೊಸ ಬಾಂಬ್

ಲಲಿತ್ ಗೇಟ್ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ವಾಗ್ದಾಳಿ ತಡೆಯಲು, ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಹೊಸ ಪ್ರತಿ ಆಕ್ರಮಣ ನಡೆಸಿದ್ದಾರೆ. ಬಹುಕೋಟಿ ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿ ಸಂತೋಷ ಬಗ್ರೋಡಿಯಾ ಅವರಿಗೆ ಪಾಸ್​ಪೋರ್ಟ್...

ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ದವಿದೆ : ಪ್ರಧಾನಿ ನರೇಂದ್ರ ಮೋದಿ

ಸೋಮವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ದವಾಗಿದೆ, ಭೂಸ್ವಾಧೀನ ಮಸೂದೆಯನ್ನು ಪ್ರತಿಪಕ್ಷಗಳು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿ ಎಂದು ಆಗ್ರಹಿಸಿದರು. ಸಂಸತ್ತಿನ ಸಮಯ ಬಹಳ ಮಹತ್ವವನ್ನು ಹೊಂದಿದೆ, ಇದನ್ನು ಎಲ್ಲಾ ವಿಷಯಗಳನ್ನು ಚರ್ಚಿಸಲು...

ಲಲಿತ್ ಮೋದಿ ಬಾಂಬ್: ರಾಹುಲ್ ಗಾಂಧಿ ಮತ್ತು ವಾದ್ರ ನನ್ನ ಆತಿಥ್ಯ ಸ್ವೀಕರಿಸಿದ್ದರು

ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಲಲಿತ್ ಗೇಟ್ ಹಗರಣಕ್ಕೆ ಈಗ ಹೊಸ ಸೇರ್ಪಡೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ತಾನು ಐಪಿಎಲ್ ಕಮಿಷನರ್ ಆಗಿದ್ದಾಗ ತನ್ನ ಆತಿಥ್ಯ ಸ್ವೀಕರಿಸಿದ್ದರು ಎಂದು ಟ್ವಿಟ್ಟರ್ ನಲ್ಲಿ...

ಸುಷ್ಮಾ ಸ್ವರಾಜ್, ವಸುಂಧರಾ ರಾಜೀನಾಮೆ ನೀಡಲಿ: ಆರ್.ಎಸ್.ಎಸ್ ಒತ್ತಾಯ

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ವಿದೇಶದಲ್ಲಿರಲು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್, ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದೆ. ಲಲಿತ್ ಮೋದಿಗೆ ನೆರವು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಖಾತ ಸಚಿವೆ ಸುಷ್ಮಾ ಸವ್ರಾಜ್ ಹಾಗೂ ರಾಜಸ್ಥಾನ ಸಿಎಂ...

ಲಲಿತ್ ಮೋದಿ ವಲಸೆ ಅರ್ಜಿಗೆ ಸಹಿ ಹಾಕಿದ್ದನ್ನು ಒಪ್ಪಿಕೊಂಡ ರಾಜಸ್ಥಾನ ಸಿಎಂ

ಐಪಿಎಲ್‌ ಹಗರಣದ ಆರೋಪ ಎದುರಿಸುತ್ತಿರುವ ಲಲಿತ್‌ ಮೋದಿ ವಲಸೆ ಅರ್ಜಿಗೆ ಸಹಿ ಮಾಡಿದ್ದ ದಾಖಲೆಯನ್ನು ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದ ಮಾರನೆಯ ದಿನವೇ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ’ಆ ಸಹಿ ನನ್ನದೇ' ಎಂದು ಪಕ್ಷದ ನಾಯಕತ್ವದ ಮುಂದೆ ಒಪ್ಪಿಕೊಂಡಿದ್ದಾರೆ....

ಲಲಿತ್ ತಮ್ಮನ್ನು ರಕ್ಷಿಸಿಕೊಳ್ಳಲು ರಾಜಕಾರಣಿಗಳ ಬಳಕೆ ಮಾಡಿಕೊಳ್ಳುತ್ತಿದ್ದಾರೆ

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾಜಕಾರಣಿಗಳನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ಲಿಲಿತ್ ಮೋದಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಮತ್ತು...

ನ್ಯಾಷನಲ್ ಹೆರಾಲ್ಡ್ ಹಗರಣ: ಸೋನಿಯಾ, ರಾಹುಲ್ ಗೆ 1,300 ಕೋಟಿ ರೂ. ದಂಡ ಸಾಧ್ಯತೆ

ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿಗೆ ಆದಾಯ ತೆರಿಗೆ ಸಂಕಷ್ಠ ಎದುರಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸೇರಿದ್ದ ರೂ.1600 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ...

ದೆಹಲಿ ಕ್ರಿಕೆಟ್ ಸಂಸ್ಥೆ ಹಗರಣದಲ್ಲಿ ಜೇಟ್ಲಿ ಭಾಗಿ: ಲಲಿತ್ ಮೋದಿ ಆರೋಪ

ದೆಹಲಿ ಕ್ರಿಕೆಟ್‌ ಸಂಸ್ಥೆಯ ಹಗರಣದಲ್ಲಿ ಅರುಣ್ ಜೇಟ್ಲಿ ಭಾಗಿಯಾಗಿದ್ದು, ಅವರು ತಮ್ಮ ದೂರವಾಣಿ ಕರೆ ವಿವರ ಬಹಿರಂಗಪಡಿಸಲಿ ಎಂದು ಮಾಜಿ ಐಪಿಎಲ್‌ ಮುಖ್ಯಸ್ಥ ಲಲಿತ್‌ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು...

ಲಲಿತ್ ಮೋದಿಗೆ ನೆರವು ಆರೋಪ: ಸುಷ್ಮಾ ಸ್ವರಾಜ್ ರಾಜೀನಾಮೆಗೆ ಹೆಚ್ಚಿದ ಒತ್ತಡ

ಐಪಿಎಲ್‌ ಕ್ರಿಕೆಟ್‌ ಹಗರಣಗಳ ಆರೋಪ ಹೊತ್ತು ಲಂಡನ್‌ ನಲ್ಲಿ ನೆಲೆಸಿರುವ ಬಿಸಿಸಿಐ ಮಾಜಿ ಉಪಾಧ್ಯಕ್ಷ ಲಲಿತ್‌ ಮೋದಿ ಅವರಿಗೆ ನೆರವು ನೀಡಿ ಪ್ರತ್ಯುಪಕಾರ ಪಡೆದ ಗುರುತರ ಆರೋಪ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿರುದ್ಧ ಕೇಳಿ ಬಂದಿದೆ. ’ಲಲಿತ್‌ ಮೋದಿ ಅವರಿಗೆ ಬ್ರಿಟನ್‌...

ದೆಹಲಿ ನೂತನ ಕಾನೂನು ಸಚಿವರಾಗಿ ಕಪಿಲ್ ಮಿಶ್ರಾ ನೇಮಕ

ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಹೊಂದಿರುವ ಆರೋಪದಲ್ಲಿ ಬಂಧಿತರಾದ ಜಿತೇಂದ್ರ ಸಿಂಗ್‌ ತೋಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ದೆಹಲಿ ಸರ್ಕಾರದ ಕಾನೂನು ಸಚಿವ ಸ್ಥಾನಕ್ಕೆ ಕಪಿಲ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ದೆಹಲಿಯ ಜಲಮಂಡಳಿ ಅಧ್ಯಕ್ಷರಾಗಿದ್ದ ಆಪ್‌ ಶಾಸಕ ಕಪಿಲ್‌...

ಪ್ರದೀಪ್ ಬೈಜಾಲ್ ಯುಪಿಎ ಸರ್ಕಾರದ ಕಿರುಕುಳಕ್ಕೆ ಒಳಗಾಗಿದ್ದರು: ಜೇಟ್ಲಿ

ಯುಪಿಎ ಸರ್ಕಾರದ ಅವಧಿಯಲ್ಲಿ ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ವಿರುದ್ಧ ಪ್ರದೀಪ್ ಬೈಜಾಲ್...

ಬೋಫೋರ್ಸ್ ಹಗರಣ ಎಂದು ಕೋರ್ಟ್ ನಲ್ಲಿ ಸಾಬೀತಾಗಿಲ್ಲ: ಪ್ರಣಬ್ ಮುಖರ್ಜಿ

ಭಾರತದ ಯಾವುದೇ ನ್ಯಾಯಾಲಯದಲ್ಲಿ ಬೊಫೋರ್ಸ್‌ ಪ್ರಕರಣ ಈ ತನಕವೂ ಒಂದು ಹಗರಣವೆಂದು ಸಾಬೀತಾಗಿಲ್ಲ; ಬೊಫೋರ್ಸ್‌ ಹಗರಣವು ಕೇವಲ ಮಾಧ್ಯಮ ವಿಚಾರಣೆಯ ಫ‌ಲಶ್ರುತಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಸ್ವೀಡನ್‌ ಪತ್ರಿಕೆ ಡೇಜನ್ಸ್‌ ನ್ಹೆಟರ್‌ ಗೆ ನೀಡಿದ ಸಂದರ್ಶನದಲ್ಲಿ, ರಾಷ್ಟ್ರಪತಿ ಮುಖರ್ಜಿ ಅವರಿಗೆ...

ಸಿದ್ದರಾಮಯ್ಯ ಕುಮಾರಸ್ವಾಮಿಯಲ್ಲ: ಸಿಎಂ

ರಾಜ್ಯದಲ್ಲಿ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ರಕ್ಷಿಸಲು ಸರ್ಕಾರ ಹೊರಟಿಲ್ಲ. ಜಾತಿ ಹೆಸರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಸಿದ್ದರಾಮಯ್ಯನೇ, ಕುಮಾರಸ್ವಾಮಿಯಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ...

ಲಾಟರಿ ಹಗರಣ: ವರದಿ ನೀಡುವಂತೆ ಸರ್ಕಾರಕ್ಕೆ ಗವರ್ನರ್ ಪತ್ರ

ರಾಜ್ಯದಲ್ಲಿನ ಬಹುಕೋಟಿ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಪಟ್ಟಂತೆ ಈವರೆಗೆ ಕೈಗೊಂಡ ಕ್ರಮ ಸೇರಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಇಷ್ಟು ದೊಡ್ಡ ಹಗರಣ ನಡೆದಿದ್ದರೂ ರಾಜಭವನಕ್ಕೆ ಮಾಹಿತಿ...

ಜಯಲಲಿತಾ ಪ್ರಕರಣ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವಂತೆ ಈಶ್ವರಪ್ಪ ಒತ್ತಾಯ

ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಜಯಲಲಿತಾ ವಿರುದ್ಧ ಸರ್ಕಾರ ಸುಪ್ರಿಂ ಕೋರ್ಟ್‌ಗೆ ಹೋಗದಿದ್ದಲ್ಲಿ ಕಾಂಗ್ರೆಸ್ ಏನೋ ತಪ್ಪು ಮಾಡಿದೆ, ಹಾಗಾಗಿ...

ಲಾಟರಿ ಹಗರಣ: ಎಡಿಜಿಪಿ, ಐಜಿಪಿ ಹೆಸರು - ಸಿಐಡಿ ಪತ್ತೆ

ಲಾಟರಿ ಹಗರಣದ ದಂಧೆಕೋರರ ಶೋಧ ಕಾರ್ಯಾಚರಣೆಗಿಳಿದು ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಈಗ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಹಾಗೂ ಆರಕ್ಷಕ ಮಹಾ ನಿರೀಕ್ಷಕ (ಐಜಿಪಿ) ಮಟ್ಟದ ಇಬ್ಬರು ಉನ್ನತ ದರ್ಜೆಯ ಅಧಿಕಾರಿಗಳ ಹೆಸರು ಕೇಳಿ ಬಂದಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಪ್ರಕರಣದ ಪ್ರಮುಖ...

ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ಸವಾಲು

ಸ್ವಚ್ಛ, ಪಾರದರ್ಶಕ, ಹಗರಣ ಮುಕ್ತ ಸರ್ಕಾರ ನೀಡುತ್ತಿದ್ದೇವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಬೆಂಗಳೂರು...

2ಜಿ ಹಗರಣ: ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಹಗರಣ ಕುರಿತಂತೆ ರಂಜಿತ್ ಸಿನ್ಹಾ ಅವರು ಮೊದಲು ತಮ್ಮನ್ನು ತಾವು ತನಿಖೆಗೊಳಪಡಿಸಿಕೊಳ್ಳಬೇಕು ಎಂದು ಹೇಳಿದೆ. ಹಗರಣದ ಆರೋಪಿಗಳನ್ನು ಚಾರ್ಜ್ ಶೀಟ್ ಸಲ್ಲಿಸುವ ಮೊದಲೇ ರಂಜಿತ್ ಸಿನ್ಹಾ,...

2ಜಿ ಹಗರಣದಲ್ಲಿ ಮನಮೋಹನ್ ಸಿಂಗ್ ಪಾತ್ರವಿಲ್ಲ: ಸಿಬಿಐ

2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಏನು ಇಲ್ಲ ಎಂದು ವಿಶೇಷ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ನಡೆಯುತ್ತಿದ್ದು,...

ಕಲ್ಲಿದ್ದಲು ಹಗರಣ: 3 ವರ್ಷ ಮನಮೋಹನ್ ಸಿಂಗ್ ನಿರಾಳ

ಕಲ್ಲಿದ್ದಲು ಹಗರಣದಲ್ಲಿ ಆರೋಪಿಯಾಗಿ ಕೋರ್ಟಿಗೆ ಹಾಜರಾಗಲು ಸಮನ್ಸ್‌ ಪಡೆದಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಈ ಕೇಸಿನ ಬಗ್ಗೆ ಇನ್ನು ಕನಿಷ್ಠ 3 ವರ್ಷ ನಿರಾಳವಾಗಿರಬಹುದು. ಏಕೆಂದರೆ 2018ಕ್ಕೆ ಮೊದಲು ಮನಮೋಹನ್‌ ಸಿಂಗ್‌ ವಿರುದ್ಧದ ಕಲ್ಲಿದ್ದಲು ಕೇಸು ಸುಪ್ರೀಂ ಕೋರ್ಟಿನ ಮುಂದೆ...

ಸತ್ಯಂ ಕಂಪ್ಯೂಟರ್ಸ್ ಹಗರಣ: ಎಲ್ಲಾ 10 ಜನರ ವಿರುದ್ಧ ಆರೋಪ ಸಾಬೀತು

ಬಹುಕೋಟಿ ಸತ್ಯಂ ಕಂಪ್ಯೂಟರ್ಸ್ ಹಗರಣಕ್ಕೆ ಸಂಬಧಿಸಿದಂತೆ ಪ್ರಕರಣದ ಎಲ್ಲಾ 10 ಜನನರ ವಿರುದ್ಧ ಆರೋಪ ಸಾಬೀತಾಗಿದೆ. ಸತ್ಯಂ ಕಂಪ್ಯೂಟರ್ಸ್ ನ ಮುಖ್ಯಸ್ಥ ವ್ಯವಸ್ಥಾಪಕ ರಾಮಲಿಂಗಾರಾಜು ಸೇರಿದಂತೆ ಒಟ್ಟು 10 ಜನರು ತಪ್ಪಿತಸ್ಥರು ಎಂದು ಹೈದ್ರಾಬಾದ್ ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು...

ಸತ್ಯಂ ಕಂಪ್ಯೂಟರ್ಸ್ ಹಗರಣ: ರಾಮಲಿಂಗಾರಾಜು ಸೇರಿ 10 ಮಂದಿಗೆ 7ವರ್ಷ ಜೈಲು

ಬಹುಕೋಟಿ ಸತ್ಯಂ ಕಂಪ್ಯೂಟರ್ಸ್ ಹಗರಣದಲ್ಲಿ ರಾಮಲಿಂಗಾರಾಜು ಸೇರಿದಂತೆ ಹತ್ತು ಮಂದಿ ಆರೋಪಿಗಳು ದೋಷಿ ಎಂದು ಹೈದರಾಬಾದ್ ನ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹತ್ತು ಜನರ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇಂದೇ ಪ್ರಕಟಿಸಿದೆ. ಸಿಬಿಐ ವಿಶೇಷ ನ್ಯಾಯಾಧೀಶ ಬಿ.ವಿ.ಎಲ್‌.ಎನ್‌ ಚಕ್ರವರ್ತಿ,...

ಕಲ್ಲಿದ್ದಲು ಹಗರಣ: ಮನಮೋಹನ್ ಸಿಂಗ್ ಗೆ ನೀಡಿದ್ದ ಸಮನ್ಸ್ ಗೆ ತಡೆ

ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿ ಗೆ ನೀಡಲಾಗಿದ್ದ ಸಮನ್ಸ್ ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹಿಂಡಾಲ್ಕೊ ಕಂಪೆನಿಯ ಜಂಟಿ ಉದ್ಯಮಕ್ಕೆ ಒಡಿಶಾದ ದ್ವಿತೀಯ ತಲಬಿರಾ ಕಲ್ಲಿದ್ದಲು ನಿಕ್ಷೇಪವನ್ನು ಅಕ್ರಮವಾಗಿ ಹಂಚಿಕೆ ಮಾಡಲಾದ...

ಸಿಬಿಐ ಸಮನ್ಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಮಾಜಿ ಪ್ರಧಾನಿ ಸಿಂಗ್

'ಹಿಂಡಾಲ್ಕೋ ಕಂಪನಿ'ಗೆ ಅಕ್ರಮವಾಗಿ ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಸಿಬಿಐ ತಮಗೆ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾ.25ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ನಾನು ಭಾಗಿಯಾಗಿರುವುದಕ್ಕೆ ಸಿಬಿಐ ಅಧಿಕಾರಿಗಳ...

ಕಲ್ಲಿದ್ದಲು ಹಂಚಿಕೆ ಹಗರಣ: ಮೇಲ್ಮನವಿ ಸಲ್ಲಿಸಲು ಡಾ.ಸಿಂಗ್ ನಿರ್ಧಾರ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮಗೆ ಜಾರಿಯಾಗಿರುವ ಸಮನ್ಸ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿರ್ಧರಿಸಿದ್ದಾರೆ. ಹಿಂಡಾಲ್ಕೊ ಕಂಪೆನಿಯನ್ನು ಒಳಗೊಂಡ ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಓರ್ವ ಆರೋಪಿಯಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ವಿಶೇಷ ಸಿಬಿಐ...

ಸಿಬಿಐ ಸಮನ್ಸ್: ಮನಮೋಹನ್ ಸಿಂಗ್ ಗೆ ಬೆಂಬಲ ಘೋಷಿಸಿ ಕಾಂಗ್ರೆಸ್ ಏಕತಾ ಮೆರವಣಿಗೆ

'ಕಲ್ಲಿದ್ದಲು ಹಗರಣ'ಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಿಂದ ಮನಮೋಹನ್ ಸಿಂಗ್ ನಿವಾಸದ ವರೆಗೆ ಏಕತಾ ಮೆರವಣಿಗೆ ಕೈಗೊಳ್ಳಲಾಗಿದೆ. ಮನಮೋಹನ್ ಸಿಂಗ್ ನೆರವಿಗೆ...

ಕಲ್ಲಿದ್ದಲು ಹಗರಣ: ಪ್ರಧಾನಿ ಮನಮೋಹನ್ ಸಿಂಗ್ ಗೆ ಸಿಬಿಐ ನಿಂದ ಸಮನ್ಸ್

ಬಹುಕೋಟಿ ಕಲ್ಲಿದ್ದಲು ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಸಮನ್ಸ್ ನೀಡಿದೆ. ಮನಮೋಹನ್ ಸಿಂಗ್ ಅವರೊಂದಿಗೆ ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಪಿ.ಸಿ ಪರಾಖ್, ಹಿಂಡಾಲ್ಕೋ...

ಸಿಬಿಐ ಸಮನ್ಸ್ ನಿಂದ ನೋವಾಗಿದೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

'ಸಿಬಿಐ' ಸಮನ್ಸ್ ಬಂದಿರುವುದರಿಂದ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಧಿಸಿದಂತೆ ಸಿಬಿಐ ಸಮನ್ಸ್ ನೀಡಿರುವುದಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ, ಪ್ರಕರಣದ ಸಂಬಂಧ ಸತ್ಯಾಂಶ ಹೊರಬೀಳುವುದು ಮುಖ್ಯ ಎಂದಿದ್ದಾರೆ. ಈ ವರೆಗೂ ತಮಗೆ...

ಅರ್ಕಾವತಿ ಬಡಾವಣೆ ಹಗರಣ: ಬಿಜೆಪಿಯಿಂದ ಕೆಂಪಣ್ಣ ಆಯೋಗಕ್ಕೆ ದಾಖಲೆ ಸಲ್ಲಿಕೆ

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಹಿರಿಯ ವಕೀಲರಾದ ದೊರೆರಾಜು ಹಾಗೂ ನಟರಾಜ್ ಶರ್ಮ ಅವರ ಮೂಲಕ, ನ್ಯಾ.ಕೆಂಪಣ್ಣ ನೇತೃತ್ವದ ವಿಚಾರಣಾ ಆಯೋಗಕ್ಕೆ 810 ಪುಟಗಳ ದಾಖಲೆಗಳನ್ನು ಸಲ್ಲಿಸಿದೆ. ಕೆಂಪಣ್ಣ ಆಯೋಗದ ಕಾರ್ಯದರ್ಶಿ ಎಸ್.ಶ್ರೀವತ್ಸ ಕೆದಿಲಾಯ ಅವರಿಗೆ ದೊರೆರಾಜು...

ಪರೀಕ್ಷಾ ಮಂಡಳಿ ಹಗರಣ: ಮಧ್ಯಪ್ರದೇಶ ರಾಜ್ಯಪಾಲರಿಗೆ ರಾಜೀನಾಮೆಗೆ ಸೂಚನೆ

ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕತಿ ಹಗರಣದಲ್ಲಿ ಶಾಮೀಲಾದ ಆರೋಪ ಹಿನ್ನಲೆಯಲ್ಲಿ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಂದ್ರ ಗೃಹಸಚಿವಾಲಯ ರಾಮ್ ನರೇಶ್ ಯಾದವ್ ಗೆ ಸೂಚನೆ ನೀಡಿದೆ. ವೃತ್ತಿಪರ ಶಿಕ್ಷಣ ಮಂಡಳಿಯಲ್ಲಿನ ನೇಮಕಾತಿ ಹಗರಣ ನಡೆದಿದ್ದು, ಮಧ್ಯಪ್ರದೇಶ ಸ್ಪೆಷಲ್ ಟಾಸ್ಕ್ ಪೋರ್ಸ್...

ಪರೀಕ್ಷಾ ಮಂಡಳಿ ಹಗರಣ: ಶಿವರಾಜ್ ಸಿಂಗ್ ಗೆ ಪ್ರಧಾನಿ ಬುಲಾವ್

ಮಧ್ಯಪ್ರದೇಶದ ಪರೀಕ್ಷಾ ಮಂಡಳಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಧಾನಿ ಮೋದಿ ಬುಲಾವ್ ನೀಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾಗುವಂತೆ ಪ್ರಧಾನಿ ಮೋದಿ, ಶಿವರಾಜ್ ಸಿಂಗ್ ರನ್ನು ಆಹ್ವಾನಿಸಿದ್ದು, ಇಂದು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲಿದ್ದಾರೆ. ಇದೇ...

ಗಣಿ ಗುತ್ತಿಗೆ ನವೀಕರಣ: ಸಿಎಂ ಅಕ್ರಮವೆಸಗಿರುವುದು ಸತ್ಯ-ಹೆಚ್.ಡಿ.ಕೆ

ರಾಜ್ಯ ಸರ್ಕಾರದಿಂದ 8 ಗಣಿ ಗುತ್ತಿಗೆ ಕಂಪನಿಗಳ ಲೈಸನ್ಸ್ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಅಕ್ರಮವೆಸಗಿದ್ದು ಸತ್ಯ ಎಂದು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದಂತೆ ಇದು...

ಪರೀಕ್ಷಾ ಮಂಡಳಿ ಹಗರಣ: ಶಿವರಾಜ್‌ ಸಿಂಗ್‌ ಭಾಗಿ - ಕಾಂಗ್ರೆಸ್ ಆರೋಪ

ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ನೇಮಕಾತಿ ಹಗರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡಾ ಭಾಗಿಯಾಗಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯವನ್ನು, ತನಿಖೆ ನಡೆಸಿದ್ದ ಎಸ್‌.ಟಿ.ಎಫ್ ಮಾಡಿದೆ...

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವ ಪ್ರಶ್ನೆಯೆ ಇಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್, ಕಾಂಗ್ರೆಸ್‌ ನನ್ನ ವಿರುದ್ದ ಮಾಡಿರುವ ಆರೋಪಗಳು ಆಧಾರ ರಹಿತ...

ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ರಾಜೀನಾಮೆ

ಶಾರದಾ ಚಿಟ್‌ ಪಂಡ್ ಹಗರಣ ಸಂಬಂಧ, ಕೇಂದ್ರದ ಮಾಜಿ ಸಚಿವ ಮಾತಂಗ್‌ ಸಿನ್‌ ಅವರನ್ನು ಬಂಧಿಸದಂತೆ ತಡೆಯಲು ಯತ್ನಿಸಿದ್ದ ಗೃಹ ಇಲಾಖೆಯ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಅವರನ್ನು ಹುದ್ದೆಯಿಂದ ವಜಾ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೆಲ ದಿನಗಳ ಹಿಂದಷ್ಟೇ ಸಿಬಿಐ,...

ಗೃಹ ಇಲಾಖೆ ನೂತನ ಕಾರ್ಯದರ್ಶಿಯಾಗಿ ಎಲ್‌.ಸಿ ಗೋಯಲ್‌ ಅಧಿಕಾರ ಸ್ವೀಕಾರ

‌ಗೃಹ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ಅನಿಲ್‌ ಗೋಸ್ವಾಮಿ ಅವರನ್ನು ವಜಾ ಮಾಡಿದ ಬೆನ್ನಲ್ಲೇ ಎಲ್‌.ಸಿ ಗೋಯಲ್‌ ಅವರನ್ನು ನೂತನ ಗೃಹ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 1979 ರ ತಂಡದ ಐಎಎಸ್‌ ಅಧಿಕಾರಿಯಾಗಿರುವ ಎಲ್‌.ಸಿ ಗೋಯಲ್‌ ಅವರು ಗುರುವಾರ...

ಶಾರದಾ ಚಿಟ್ ಫಂಡ್ ಹಗರಣ: ತನಿಖೆಯಲ್ಲಿ ಟಿಎಂಸಿಗೆ ಅನ್ಯಾಯ- ಮಮತಾ ಆರೋಪ

ಶಾರದಾ ಚಿಟ್ ಫಂಡ್ ಹಗರಣದ ತನಿಖೆಯಲ್ಲಿ ಬಿಜೆಪಿ ಅನ್ಯಾಯ ಮಾಡುತ್ತಿದ್ದು, ಟಿಎಂಸಿ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಕೋಲ್ಕತಾದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಮತಾ ಬ್ಯಾನರ್ಜಿ ಬಹುಕೋಟಿ ಹಗರಣ ಶಾರದಾ ಚಿಟ್...

ಅರ್ಕಾವತಿ ಡಿನೋಟಿಫೀಕೇಷನ್‌ಃ ಕಡತ ವಿಲೇವಾರಿ ಕೊಠಡಿಗೆ ಬೀಗ

ಅರ್ಕಾವತಿ ಬಡಾವಣೆ ಡಿನೋಟಿಫೀಕೇಷನ್‌ಗೆ ಸಂಬಂಧಪಟ್ಟಂತೆ ಇದ್ದ ದಾಖಲೆಯ ಕೊಠಡಿಗೆ ಹೊರಗಿನಿಂದ ಬೀಗ ಹಾಕಿಕೊಂಡ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಸಿಬ್ಬಂದಿ, ಒಳಗೆ ಕುಳಿತು ಕಡತ ವಿಲೇವಾರಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಠಡಿಗೆ ಬೀಗ ಹಾಕಿಕೊಂಡು ಕೆಲಸ ಮಾಡುವುದರ ಜತೆಗೆ ಇಬ್ಬರು...

ಕಲ್ಲಿದ್ದಲು ಹಗರಣ: ಪ್ರಗತಿ ವರದಿ ವಿಶೇಷ ಕೋರ್ಟಿಗೆ ಸಲ್ಲಿಸಿದ ಸಿಬಿಐ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಸಿಬಿಐ, ಮಂಗಳವಾರ ಮುಚ್ಚಿದ ಲಕೋಟೆಯಲ್ಲಿ ಇರಿಸಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ.ಪಾರೇಖ್‌ ಮತ್ತು ಇತರ ಕೆಲವರನ್ನು ಒಳಗೊಂಡ ಕಲ್ಲಿದ್ದಲು ಹಗರಣಕ್ಕೆ...

ಕಲ್ಲಿದ್ದಲು ಹಗರಣ: ಸಿಬಿಐ ನಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಚಾರಣೆ

'ಕಲ್ಲಿದ್ದಲು ಹಂಚಿಕೆ' ಹಗರಣದ ಸಂಬಂಧ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಹಿಂಡಾಲ್ಕೋ ಕಂಪನಿಗೆ ಅಕ್ರಮವಾಗಿ ಕಲ್ಲಿದ್ದಲು ಹಂಚಿಕೆ ಮಾಡಿದ ಪ್ರಕರಣದಲ್ಲಿ ಸಿಂಗ್ ಅವರನ್ನು ಎರಡು ದಿನಗಳ ಹಿಂದೆಯೇ ವಿಚಾರಣೆಗೊಳಪಡಿಸಲಾಗಿದೆ. ಆದರೆ ಈ ಬಗ್ಗೆ ಮನಮೋಹನ್ ಸಿಂಗ್...

ಸೋನಿಯಾ, ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಉದ್ಧಾರ ಅಸಾಧ್ಯ: ನ್ಯಾ.ಮಾರ್ಕಾಂಡೇಯ ಕಾಟ್ಜು

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಪತ್ರಿಕಾ ಮಂಡಳಿ ಮಾಜಿ ಅಧ್ಯಕ್ಷ ನ್ಯಾ. ಮಾರ್ಕಾಂಡೇಯ ಕಾಟ್ಜು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವವರೆಗೂ ಕಾಂಗ್ರೆಸ್ ಪುನಶ್ಚೇತನಗೊಳ್ಳಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ....

ಶಾರದಾ ಚಿಟ್‌ ಫಂಡ್ ಹಗರಣ: ಮುಕುಲ್ ರಾಯ್‌ಗೆ ಸಮನ್ಸ್ ಜಾರಿ

ಬಹುಕೋಟಿ ಶಾರದಾ ಚಿಟ್‌ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಟಿಎಂಸಿ ನಾಯಕ ಮುಕುಲ್ ರಾಯ್‌ಗೆ ಸಮನ್ಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಟಿಎಂಸಿ ನಾಯಕರನ್ನು ಬಂಧಿಸಿರುವ ಸಿಬಿಐ ಇದೀಗ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್‌ಗೆ ವಿಚಾರಣೆಗೆ ಹಾಜರಾಗುವಂತೆ...

ಮಮತಾರನ್ನು ಬಂಧಿಸಿದರೆ ಪ.ಬಂಗಾಳ ಹೊತ್ತಿ ಉರಿಯುತ್ತೆ: ಇದ್ರಿಸ್ ಅಲಿ

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ತೃಣಮೂಲ ಕಾಂಗ್ರೆಸ್ ಸಂಸದ ಇದ್ರಿಸ್ ಅಲಿ, ಒಂದು ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬಂಧಿಸಿದ್ರೆ ಪಶ್ಚಿಮ ಬಂಗಾಳ ಹೊತ್ತಿ ಉರಿಯಲಿದೆ ಹುಷಾರ್! ಎಂದು ಕೇಂದ್ರ ಸರ್ಕಾರಕ್ಕೆ...

ಕೆ.ಪಿ.ಎಸ್.ಸಿ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್ ಸುದರ್ಶನ್ ಹೆಸರು ಶಿಫಾರಸು

ರಾಜ್ಯ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್ ನ ಮಾಜಿ ಸಭಾಪತಿ, ಕಾಂಗ್ರೆಸ್ ನಾಯಕ ವಿ.ಆರ್ ಸುದರ್ಶನ್ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಕೆ.ಪಿ.ಎಸ್.ಸಿ ಅಧ್ಯಕ್ಷರ ಹುದ್ದೆ ಕಳೆದ ಒಂದು ವರ್ಷದಿಂದ ಖಾಲಿ ಇತ್ತು. ಈ ಹುದ್ದೆಗೆ...

ಪಶ್ಚಿಮ ಬಂಗಾಳ ಸಚಿವ ಮದನ್ ಮಿತ್ರಾ ಬಂಧನ ಖಂಡಿಸಿ ಟಿಎಂಸಿ ಪ್ರತಿಭಟನೆ

'ಶಾರದಾ ಚಿಟ್ ಫಂಡ್' ಹಗರಣದಲ್ಲಿ ಸಚಿವ ಮದನ್ ಮಿಶ್ರಾ ಅವರನ್ನು ಬಂಧಿಸಿರುವುದಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಡಿ.13ರಂದು ಮಧ್ಯಾಹ್ನ 1ಗಂಟೆಗೆ ಸೆಂಟ್ರಲ್ ಕೋಲ್ಕತ್ತಾದ ಮೈದಾನ್ ಏರಿಯಾದಲ್ಲಿ ಟಿಎಂಸಿ ಪ್ರತಿಭಟನೆ ನಡೆಸಲಿದೆ. ಶಾರದಾ ಚಿಟ್...

ಶಾರದಾ ಚಿಟ್ ಫಂಡ್ ಹಗರಣ: ಸಿ.ಬಿ.ಐ ನಿಂದ ಪಶ್ಚಿಮ ಬಂಗಾಳ ಸಚಿವನ ಬಂಧನ

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿತ್ರ ಅವರನ್ನು ಸಿ.ಬಿ.ಐ ಡಿ.12ರಂದು ಬಂಧಿಸಿದೆ. ಸುದೀರ್ಘ ವಿಚಾರಣೆಯ ಬಳಿಕ ಮದನ್ ಮಿತ್ರಾ ಅವರನ್ನು ಸಿ.ಬಿ.ಐ ಅಧಿಕಾರಿಗಳು ಬಂಧಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮದನ್...

ನೀವು ಕ್ರಿಕೆಟ್ ನ್ನು ಕೊಲ್ಲುತ್ತಿದ್ದೀರಿ: ಬಿಸಿಸಿಐಗೆ ಸುಪ್ರೀಂ ಚಾಟಿ

'ಫಿಕ್ಸಿಂಗ್ ಹಗರಣ'ದ ಕಳಂಕ ಹೊತ್ತಿರುವ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಚಾಟಿ ಏಟು ನೀಡಿದ್ದು ನೀವು ಕ್ರಿಕೆಟನ್ನು ಕೊಲ್ಲುತ್ತಿದ್ದೀರಿ ಎಂದು ಛೀಮಾರಿ ಹಾಕಿದೆ. ಐಪಿಎಲ್ ಸೀಸನ್-6ರಲ್ಲಿ ನಡೆದ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ್ದ ಮುದ್ಗಲ್ ಸಮಿತಿ ವರದಿಯಲ್ಲಿ ತಮ್ಮ ಹೆಸರು...

814 ಫಿರಂಗಿ ಖರೀದಿಗೆ ಸಮ್ಮತಿ

1986ರಲ್ಲಿ ಬೋಫೋರ್ಸ್ ಫಿರಂಗಿ ಖರೀದಿ ಹಗರಣ ಬೆಳಕಿಗೆ ಬಂದ ಬಳಿಕ ಒಂದೇ ಒಂದು ಫಿರಂಗಿಯನ್ನೂ ಖರೀದಿಸದಿದ್ದ ಭಾರತ, 28 ವರ್ಷಗಳ ಬಳಿಕ ಮತ್ತೆ ಆ ರೀತಿಯ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ. ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ...

ಶಾರದಾ ಚಿಟ್ ಫಂಡ್ ಹಗರಣ: ಟಿಎಂಸಿ ಸಂಸದನ ಬಂಧನ

ಬಹುಕೋಟಿ ಶಾರದಾ ಚಿಟ್‌ ಫ‌ಂಡ್‌ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಹಗರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಶೃಂಜೋಯ್‌ ಬೋಸ್‌ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಶೃಂಜೋಯ್‌ ಬೋಸ್‌ ರನ್ನು 5 ತಾಸುಗಳ ಸುದೀರ್ಘ‌ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದೇ...

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ: ಶ್ರೀನಿವಾಸ, ಮೇಯಪ್ಪನ್,ರಾಜ್ ಕುಂದ್ರಾ ಹೆಸರು ಬಹಿರಂಗ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್ ಹಗರಣ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ತನಿಖಾ ಸಮಿತಿಯಲ್ಲಿ ಉಲ್ಲೇಖಿಸಲಾಗಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಗೊಳಿಸಿದೆ. ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ಸಮಿತಿ ನೀಡಿರುವ ವರದಿಯಲ್ಲಿ ಗುರುನಾಥ್ ಮೇಯಪ್ಪನ್,...

ಕನ್ನಿಮೋಳಿ ವಿರುದ್ಧದ ಬಂಧನ ವಾರಂಟ್ ರದ್ದು

ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪಿ ಡಿಎಂಕೆ ಸಂಸದೆ ಕನ್ನಿಮೋಳಿಯವರಿಗೆ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ಬಂಧನ ವಾರಂಟ್ ರದ್ದುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಿಮೋಳಿ ನ.10ರಂದು ದೆಹಲಿಯ ಪಟಿಯಾಲಾ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕನ್ನಿಮೋಳಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ....

ಶಾರದಾ ಚಿಟ್ ಫಂಡ್ ಹಗರಣ: ಸಂಸದ ಕುನಾಲ್ ಘೋಷ್ ರಿಂದ ಆತ್ಮಹತ್ಯೆ ಬೆದರಿಕೆ

ಪಶ್ಚಿಮ ಬಂಗಾಳದ ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ತೃಣಮೂಲ ಕಾಂಗ್ರೆಸ್ ಸಂಸದ ಕುನಾಲ್ ಘೋಷ್ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಹಗರಣದ ಹಿಂದೆ ಹಲವು...

2ಜಿ ಹಗರಣ: ಎ.ರಾಜಾ, ಕನಿಮೋಳಿ ಸೇರಿದಂತೆ 18ಜನರ ವಿರುದ್ಧ ದೋಷಾರೋಪ

ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಅಧಿನಾಯಕ ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಸೇರಿದಂತೆ 18 ಆರೋಪಿಗಳ ವಿರುದ್ಧ ಅ.31ರಂದು ದೋಷಾರೋಪ ಹೊರಿಸಲಾಗಿದೆ. ಈ ಬೆಳವಣಿಗೆಯಿಂದ ಬಹುಕೋಟಿ 2ಜಿ ತರಂಗಾಂತರ ಪ್ರಕರಣಕ್ಕೆ ಮಹತ್ವದ ತಿರುವು...

ಆಂಬುಲೆನ್ಸ್ ಹಗರಣ: ಗೆಹ್ಲೋಟ್,ಸಚಿನ್ ಪೈಲೆಟ್ ವಿರುದ್ಧ ಸಿ.ಬಿ.ಐ ತನಿಖೆ

ದುರಾಡಳಿತ ನಡೆಸಿದ್ದರ ಪರಿಣಾಮ ಕಾಂಗ್ರೆಸ್ ದೇಶಾದ್ಯಂತ ತನ್ನ ನೆಲೆ ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಧಿಕಾರಾವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಪ್ರಕರಣಗಳು ಜೀವಪಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ...

ಓಂ ಪ್ರಕಾಶ್ ಚೌಟಾಲಾ ಶರಣಾಗತಿ

ದೆಹಲಿ ಹೈಕೋರ್ಟ್ ಆದೇಶ ಹಿನ್ನಲೆಯಲ್ಲಿ ಹರ್ಯಾಣಾ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಜೈಲಾಧಿಕಾರಿಗಳ ಮುಂದೆ ಶರಣಾಗತರಾಗಿದ್ದಾರೆ. ಜಾಮೀನು ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಓಂ ಪ್ರಕಾಶ್ ಚೌಟಾಲಾ ಅವರಿಗೆ ಒಂದುದಿನದೊಳಗೆ ಜೈಲಧಿಕಾರಿಗಳ ಎದುರು ಶರಣಾಗತರಗುವಂತೆ ಅ.10ರಂದು ಸೂಚನೆ ನೀಡಿತ್ತು. ನ್ಯಾಯಾಲಯದ...

ಹಗರಣ ಮುಕ್ತ ಹರ್ಯಾಣ ನಿರ್ಮಾಣ :ಪ್ರಧಾನಿ ಭರವಸೆ

ಹಗರಣ ಮುಕ್ತ ಹರ್ಯಾಣವನ್ನು ನಿರ್ಮಾಣ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಹರ್ಯಾಣದಲ್ಲಿ ನಡೆಯುತ್ತಿರುವ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹರ್ಯಾಣ ರಾಜ್ಯವನ್ನು ಬದಲಿಸುವ ಸಮಯಬಂದಿದೆ. ಹಗರಣಗಳಿಂದ ತತ್ತರಿಸಿರುವ ಹರ್ಯಾಣವನ್ನು ಕೌಶಲ್ಯಭರಿತ ರಾಜ್ಯವನ್ನಾಗಿ...

ಭೂ ಹಗರಣದ ಆರೋಪದ ಬಗ್ಗೆ ಶೆಟ್ಟರ್ ಸ್ಪಷ್ಟನೆ ನೀಡಲಿ- ಟಿ.ಜೆ ಅಬ್ರಾಹಂ

ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಅವರ ವಿರುದ್ಧ ಭೂ ಹಗರಣದ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ, ಹಗರಣದ ಸಂಬಂಧ ತನಿಖೆ ನಡೆಸದಿದ್ದರೆ ಹಾಲಿ ಸಿ.ಎಂ ಸಿದ್ದರಾಮಯ್ಯ ಅವರ ವಿರುದ್ಧವೂ ದೂರು ದಾಖಲಿಸಿ ಲೋಕಾಯುಕ್ತರ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ. ಜಗದೀಶ್...

2ಜಿ ಹಗರಣ :ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸಿ.ಬಿ.ಐ ನಿರ್ದೇಶಕ

ಬಹುಕೋಟಿ 2ಜಿ ಹಗರಣದ ಆರೋಪಿಗಳನ್ನು ಭೇಟಿಯಾಗಿದ್ದ ಆರೋಪ ಎದುರಿಸುತ್ತಿರುವ ಸಿ.ಬಿ.ಐ ನಿರ್ದೇಶಕ ರಂಜಿತ್ ಸಿನ್ಹಾ ಸೆ.12ರಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. 2ಜಿ ಹಗರಣದಲ್ಲಿ ರಂಜಿತ್ ಸಿನ್ಹಾ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ...

ಕಲ್ಲಿದ್ದಲು ಹಗರಣ: ಸಿಬಿಐ ನಿರ್ದೇಶಕರಿಗೆ ನೋಟಿಸ್

ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾರವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಮಾಡಿದೆ. ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವವರು ರಂಜಿತ್ ಸಿನ್ಹಾ ನಿವಾಸಕ್ಕೆ ಭೇಟಿ ನೀಡಿದ್ದರ ಔಚಿತ್ಯವೇನು ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಸೆ.19ರೊಳಗೆ ಉತ್ತರ ನೀಡುವಂತೆ...

ಶಾರದಾ ಚಿಟ್ ಫಂಡ್ ಹಗರಣ: ಪಶ್ಚಿಮ ಬಂಗಾಳ ನಿವೃತ್ತ ಡಿಐಜಿ ಬಂಧನ

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸೆ.9ರಂದು ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳದ ನಿವೃತ್ತ ಡಿ.ಐ.ಜಿ ರಜತ್ ಮಜುಂದಾರ್ ಅವರನ್ನು ಬಂಧಿಸಿದ್ದಾರೆ. ಶಾರದಾ ಚಿಟ್ ಫಂಡ್ ಸಂಸ್ಥೆಗೆ ರಜತ್ ಮಜುಂದಾರ್ ಅವರು ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ...

ಮಮತಾ ಬ್ಯಾನರ್ಜಿ ಬಂಟರು ಶೀಘ್ರದಲ್ಲಿ ಜೈಲಿಗೆ ಹೋಗುತ್ತಾರೆ: ಅಮಿತ್ ಶಾ

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಟರು ಶೀಘ್ರದಲ್ಲಿಯೇ ಜೈಲು ಪಾಲಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾರದಾ...

ಸಿದ್ದರಾಮಯ್ಯ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ: ಬಿಜೆಪಿ ಕೋರ್ ಕಮಿಟಿ ಸಭೆ

ಅರ್ಕವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಸಮರ ಸಾರಲು ಬಿಜೆಪಿ ಮುಂದಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪಕ್ಷದ ಕೇಂದ್ರ ಕಛೇರಿಯಲ್ಲಿ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ...

ಅರ್ಕಾವತಿ ಡಿನೋಟಿಫಿಕೇಷನ್ ಹಗರಣ: ಶೆಟ್ಟರ್ ನೇತೃತ್ವದಲ್ಲಿ ಹೋರಾಟ

ಅರ್ಕಾವತಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಮುಂದಿನ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಅರ್ಕಾವತಿ ಡಿನೋಟಿಫಿಕೇಷನ್ ಹಗರಣಕ್ಕೆ...

2ಜಿ ಹಗರಣ: ದಯಾಳು ಅಮ್ಮಾಳ್ ಗೆ ಜಾಮೀನು

2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಧಿಸಿದಂತೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಅವರಿಗೆ ಜಾಮೀನು ನೀಡಲಾಗಿದೆ. ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ ಸೈನಿ, ಅನಾರೋಗ್ಯ ಹಿನ್ನಲೆಯಲ್ಲಿ ದಯಾಳು ಅಮ್ಮಾಳ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ. 5 ಲಕ್ಷ...

2ಜಿ ಹಗರಣ: ಎ.ರಾಜಾ, ಕನಿಮೋಳಿಗೆ ಜಾಮೀನು

'2 ಜಿ ಹಗರಣ'ದಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಎ.ರಾಜಾ, ಕನಿಮೋಳಿಗೆ ಆ.20ರಂದು ಸಿ.ಬಿ.ಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸ್ವಾನ್ ಟೆಲಿಕಾಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಾಹಿದ್ ಉಸ್ಮಾನ್ ಬಲ್ವಾ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಇದೇ...

ಕೆಪಿಎಸ್ ಸಿ ಹಗರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

1998, 1999, 2004ರ ಕೆಪಿಎಸ್ ಸಿ ನೇಮಕಾತಿ ಹಗರಣದ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾ.ವಘೇಲಾ ಹಿಂದೆ ಸರಿದಿದ್ದಾರೆ. 1998, 1999, 2004ರ ಕೆಪಿಎಸ್ ಸಿ ನೇಮಕಾತಿ ಹಗರಣದ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿತ್ತು. ಆದರೆ ಹೈಕೋರ್ಟ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited