Untitled Document
Sign Up | Login    
Dynamic website and Portals
  

Related News

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ

ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ನಡುವೆ ಸತತ 4 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಮೂರು ವರ್ಷದ ಮಗು ಪವಾಡ ಸದೃಶವಾಗಿ ಬದುಕುಳಿದಿದ್ದಾಳೆ. ಈಜೀಪುರದಲ್ಲಿ ಇಂದು ಬೆಳಿಗ್ಗೆ ಅಡುಗೆಮನೆಯಲ್ಲಿ...

ನೆಲಬಾಂಬ್ ಸ್ಪೋಟ: 10 ಸಿಆರ್​ಪಿಎಫ್ ಕಮಾಂಡೋಗಳು ಸಾವು

ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್​ಪಿಎಫ್ ಕಮಾಂಡೋಗಳು ಸಾವನ್ನಪ್ಪಿದ್ದು, 5 ಯೋಧರು ಗಾಯಗೊಂಡಿರುವ ಘಟನೆ ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳ ಗಡಿಯಲ್ಲಿ ನಡೆದಿದೆ. ಇಲ್ಲಿನ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡು ಈ ಘಟನೆ ನಡೆದಿದೆ....

ಇಸ್ತಾಂಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 38 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಟರ್ಕಿ ರಾಜಧಾನಿ ಇಸ್ತಾಂಬುಲ್ ನಲ್ಲಿ ಸಂಭವಿಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 38 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವಿಶ್ವದ ಅತಿ ಹೆಚ್ಚು ಜನದಟ್ಟಣೆ ಇರುವ ಟರ್ಕಿಯ ಇಸ್ತಾಂ​ಬುಲ್ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಸ್ತಾಂಬುಲ್ ಆತಾತುರ್ಕ್ ವಿಮಾನ...

ದೆಹಲಿಯಲ್ಲಿ ಬಾಂಬ್ ಸ್ಫೊಟಕ್ಕೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಂಚು

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಣಿ ಬಾಂಬ್‌ ಸ್ಫೋಟದ ಮೂಲಕ ಭೀಕರ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 257 ಜನರ ಸಾವಿಗೆ ಕಾರಣವಾದ 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ...

ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಕ್ಕೆ ಉಗ್ರರ ಸಂಚು

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಕಟ್ಟೆಚ್ಚರ ನೀಡಿವೆ. ಹರ್ಯಾಣಾದ ಬಸ್​ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದಾಗ ಈ ವಿಷಯ...

ಸಂಜೋತಾ ಎಕ್ಸ್‌ಪ್ರೆಸ್‌ ಪ್ರಕರಣ: ಅಮೆರಿಕ ಗುಪ್ತಚರ ವರದಿ ಕೋರ್ಟ್ ಗೆ ಸಲ್ಲಿಸಲು ಮುಂದಾದ ಎನ್‌ಐಎ

ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣದಲ್ಲಿ ಪಾಕಿಸ್ಥಾನದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಕೈವಾಡವಿತ್ತು ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಮೆರಿಕ ಗುಪ್ತಚರ ವರದಿಯನ್ನು ಉಲ್ಲೇಖೀಸಲಿದೆ ಎಂದು ತಿಳಿದುಬಂದಿದೆ. 2007ರ ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟದಲ್ಲಿ ಪಾಕ್‌ ಮೂಲದ...

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಬಾಂಬ್ ಸ್ಫೋಟ: ನಾಲ್ವರು ಸಾವು

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಜೌನ್​ಪುರದ ಮನೆಯೊಂದರಲ್ಲಿ ಕಚ್ಚಾಬಾಂಬ್ ತಯಾರಿಸುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡು ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರು ನಾಲ್ವರೂ ಟಿಎಂಸಿ ಕಾರ್ಯಕರ್ತರು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಮಾಲ್ಡಾ ಮೆಡಿಕಲ್ ಕಾಲೇಜ್ ​ನ ಆಸ್ಪತ್ರೆಗೆ ದಾಖಲಿಸಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ...

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ: ಎಲ್ಲಾ ಅರೋಪಿಗಳೂ ದೋಷಮುಕ್ತ

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ 9 ಮಂದಿ ಆರೋಪಿಗಳನ್ನೂ ಮುಂಬೈ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಜಸ್ಟೀಸ್ ವಿ.ವಿ.ಪಾಟೀಲ್ ಪೀಠ, 2006ರ ಮಾಲೇಗಾಂವ್ ಸ್ಫೋಟ ಪ್ರಕರಣದ ಎಲ್ಲಾ 9 ಮಂದಿ ಯುವಕರನ್ನು ದೋಷಾರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿದೆ. ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ, ಪ್ರಕರಣವನ್ನು...

ಪಶ್ಚಿಮ ಬಂಗಾಳ ಚುನಾವಣೆ: ಕಚ್ಚಾ ಬಾಂಬ್ ಸ್ಫೋಟಗೊಂಡು ವ್ಯಕ್ತಿ ಸಾವು

ಪಶ್ಚಿಮ ಬಂಗಾಳದ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಬಾಂಬ್ ಸ್ಫೋಟಗೊಂಡಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮುರ್ಷಿದಾಬಾದ್ ನಲ್ಲಿ ಮತದಾನ ನಡೆಯುತ್ತಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು ಸಿಪಿಐ-ಎಂ ಕಾರ್ಯಕರ್ತ ಮತದಾನದ ಏಜೆಂಟ್ 30 ವರ್ಷದ ತಹಿದುಲ್...

ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ನಲ್ಲಿ ಸರಣಿ ಬಾಂಬ್ ಸ್ಪೋಟ

ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ನಲ್ಲಿ ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣದಲ್ಲಿ ಮಂಗಳವಾರ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಈವರೆಗೆ 28 ಮಂದಿ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಟರ್ಮಿನಲ್‌ನಿಂದ ಸ್ಫೋಟದ ಭಾರೀ ಶಬ್ಧ ಕೇಳುತ್ತಿದ್ದಂತೆ ದಟ್ಟ ಹೊಗೆ...

ಇಂಡೋನೇಷ್ಯಾದಲ್ಲಿ ಉಗ್ರರಿಂದ ಸರಣಿ ಬಾಂಬ್ ಸ್ಪೋಟ

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಮಧ್ಯಭಾಗದಲ್ಲಿ ಗುರುವಾರ ಬೆಳಗ್ಗೆ ಉಗ್ರರು ಸರಣಿ ಬಾಂಬ್‌ ಸ್ಫೋಟ ನಡೆಸಿದ್ದಾರೆ. ದಾಳಿಯಲ್ಲಿ ಕನಿಷ್ಟ 6 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಪೊಲೀಸರು ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ಮುಂದುವರಿದೆದೆ. ನಗರದ ವಿಶ್ವ ಸಂಸ್ಥೆ ಕಚೇರಿಯ ಹತ್ತಿರದ...

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲ್ ಬೆದರಿಕೆ

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲೆ ಬಂದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇ-ಮೇಲ್ ಅನ್ನು ಪರೀಕ್ಷಿಸಿ, ಕಳುಹಿಸಿದವರ ಮೂಲವನ್ನು ಇನ್ನೂ ಕಂಡು ಹಿಡಿಯಬೇಕಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ಸುತ್ತಮುತ್ತ ಕಟ್ಟೆಚ್ಚರ...

ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಯಾಕುಬ್ ಮೆಮೂನ್​ಗೆ ಗಲ್ಲು ಶಿಕ್ಷೆ

1993ರ ಮುಂಬೈ ಸರಣಿ ಸ್ಪೋಟದ ರೋವಾರಿ ಯಾಕುಬ್ ಮೆಮೂನ್ ​ಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ವಿಫಲವಾದ ಕಾರಣ ಗುರುವಾರ ಆತನನ್ನು...

ಯಾಕೂಬ್ ಮೆಮೂನ್ ಗಲ್ಲು ಶಿಕ್ಷೆ ಬಹುತೇಕ ಖಚಿತ

ಗಲ್ಲು ಶಿಕ್ಷೆಗೆ ತಡೆ ಕೋರಿ 1993 ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಯಾಕೂಬ್ ಮೆಮೂನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಬುಧವಾರ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿದೆ. ಗಲ್ಲು ಶಿಕ್ಷೆ ಖಾಯಂಗೊಳಿಸಿ...

ಮುಂಬೈ ಬ್ಲಾಸ್ಟ್ ಕೇಸ್: ಗಲ್ಲು ಶಿಕ್ಷೆ ತಡೆಯಾಜ್ಞೆಗೆ ಮೆಮೋನ್ ಸುಪ್ರೀಂ ಮೊರೆ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಜು 30 ರಂದು ನಿಗದಿಯಾದ ತನ್ನ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾನೆ. ಯಾಕೂಬ್ ಮೆಮೋನ್ ವಕೀಲರು ಗುರುವಾರ ಸುಪ್ರೀಂ ಕೋರ್ಟ್ ಗೆ ಮನವಿ...

ಮುಂಬೈ ಬ್ಲಾಸ್ಟ್ ಕೇಸ್:ಮೆಮೋನ್ ಮರುಪರಿಶೀಲನಾ ಅರ್ಜಿ ವಜಾ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಮರುಪರಿಶೀಲನಾ (ಕ್ಯೂರೇಟಿವ್) ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಮಂಗಳವಾರ...

ಇಂಡೊನೇಶ್ಯಾದ ವಾಯು ಪಡೆಗೆ ಸೇರಿದ ವಿಮಾನ ಪತನ: 38 ಜನ ಬಲಿ

ಇಂಡೋನೇಶ್ಯದ ವಾಯು ಪಡೆಗೆ ಸೇರಿದ ವಿಮಾನವೊಂದು ಆಗಸಕ್ಕೆ ಟೇಕಾಫ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಮೇದಾನ್‌ ನಗರದ ಮೇಲೆ ಪತನಗೊಂಡ ಪರಿಣಾಮ 38 ಮಂದಿ ಮೃತಪಟ್ಟಿದ್ದಾರೆ. ಹರ್ಕ್ಯುಲಿಸ್ ಸಿ-130 ಸಂಖ್ಯೆಯ ವಾಯುಪಡೆ ವಿಮಾನ ಸುಮಾತ್ರ ದ್ವೀಪದಲ್ಲಿನ ಮೇದಾನ್‌ ನಗರದ ಮೇಲೆ ಪತನಗೊಂಡಾಗ ಹಲವಾರು...

ಪಾರ್ಸೆಲ್ ನಲ್ಲಿ ಬಂದ ಬಾಂಬ್ ಸ್ಫೋಟ: ಓರ್ವ ಬಲಿ

ಬಿಹಾರದ ಗಯಾದ ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷರ ಮನೆಗೆ ಪಾರ್ಸೆಲ್‌ ನಲ್ಲಿ ಕಳುಹಿಸಲಾದ ಬಾಂಬ್‌ ಸಿಡಿದು ಮನೆ ಕೆಲಸದಾಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಡಿಯು ಜಿಲ್ಲಾಧ್ಯಕ್ಷ ಅಭಯ್‌ ಕುಶ್ವಾಹ ಅವರ ಮನೆಗೆ ಪಾರ್ಸೆಲ್‌ ಬಂದಿದ್ದು, ಅದನ್ನು ಬೆಳಗ್ಗೆ ಕೆಲಸದಾಳು...

ಟಿಎಂಸಿ ಶಾಸಕನ ಮನೆಯಲ್ಲಿ ಬಾಂಬ್ ಸ್ಫೋಟ: ಶಾಸಕನ ಪತ್ನಿ ಸಾವು

ರಕ್ತರಂಜಿತ ರಾಜಕೀಯಕ್ಕೆ ಕುಖ್ಯಾತಿ ಪಡೆದಿರುವ ಪಶ್ಚಿಮ ಬಂಗಾಳದ ಬೀರ್‌ಭೂಂ ನಲ್ಲಿ ಸ್ಥಳೀಯ ಶಾಸಕರ ಮನೆಯಲ್ಲಿ ನಾಡಬಾಂಬ್‌ ಸ್ಪೋಟಗೊಂಡಿರುವುದು ಜನತೆಯಲ್ಲಿ ಭೀತಿ ಮೂಡಿಸಿದೆ. ಶಾಸಕ ಬರೋ ಹನ್‌ ಸಡಾ ಅವರ ಮನೆಯಲ್ಲಿ ಭಾನುವಾರ ಬೆಳಗ್ಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ ಗಳು ಸ್ಪೋಟಗೊಂಡ ಪರಿಣಾಮವಾಗಿ...

ಕಾಬೂಲ್ ನಲ್ಲಿ ಆತ್ಮಾಹುತಿ ದಾಳಿ: ಮೂವರ ದುರ್ಮರಣ

ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಾಬೂಲ್ ನ ವಿಮಾನ ನಿಲ್ದಾಣದ ಬಳಿ ಭಯೋತ್ಪಾದಕರು ಆತ್ಮಾಹುತಿ ಕಾರ್ ಬಾಂಬ್ ಸ್ಫೋಟ ನಡೆಸಿದ್ದಾರೆ. ಈ ಭೀಕರ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಓರ್ವ ವಿದೇಶಿ ಪ್ರಜೆ ಹಾಗೂ...

ಕೋಲ್ಕತ್ತ ಪ್ರಾದೇಶಿಕ ರೈಲಿನಲ್ಲಿ ಸ್ಪೋಟ: 17 ಜನರಿಗೆ ಗಾಯ

ಕೋಲ್ಕತ್ತಾದ ಪ್ರಾದೇಶಿಕ ರೈಲಿನಲ್ಲಿ ಸ್ಪೋಟ ಸಂಭವಿಸಿದೆ. ಸೀಲ್ಧಾಹ್ ಮತ್ತು ಕೃಷ್ಣನಗರ ನಡೆವೆ ಚಲಿಸುತ್ತಿದ್ದ ಪ್ರಾದೇಶಿಕ ರೈಲಿನಲ್ಲಿ ಸುಮಾರು ಬೆಳಗ್ಗೆ 3:55 ಕ್ಕೆ ಸ್ಪೋಟ ಸಂಭವಿಸಿದ್ದು 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿಯನ್ನು ಅವಲೋಕಿಸಿದ ಪೊಲೀಸರು ಇದು ಲಘು ತೀವ್ರತೆಯ ಸ್ಪೋಟ ಎಂದು...

ಛತ್ತೀಸ್ ಗಢಕ್ಕೆ ಪ್ರಧಾನಿ:ನಕ್ಸಲ್ ರಿಂದ ಗ್ರಾಮಸ್ಥರ ಒತ್ತೆ, ರೈಲ್ವೆ ಮಾರ್ಗ ಸ್ಫೋಟ

ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶ ದಾಂತೇವಾಡಾ ಜಿಲ್ಲೆಗೆ ಭೇಟಿ ನೀಡಿರುವ ಬೆನ್ನಲ್ಲೇ ನಕ್ಸಲರ ಗುಂಪೊಂದು ಸುಕ್ಮಾ ಜಿಲ್ಲೆಯ ಮರೆಂಗಾ ಗ್ರಾಮದ ಸುಮಾರು 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಘಟನೆ ನಡೆದಿದೆ. ದಾಂತೇವಾಡಾದಲ್ಲಿ ನಾನಾ ಕಾರ್ಯಕ್ರಮಗಳಿಗೆ...

ಪಶ್ಚಿಮ ಬಂಗಾಳ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 11 ಮಂದಿ ಬಲಿ

ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಸುಮಾರು 11 ಮಂದಿ ಸಾವನ್ನಪ್ಪಿದ್ದು, ಏಳು ಕಾರ್ಮಿಕರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಪಿಂಗ್ಲಾ ಎಂಬಲ್ಲಿ ಈ ಸ್ಫೋಟ ದುರಂತ ಸಂಭವಿಸಿದೆ. ಪಟಾಕಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 11...

ಅಸ್ಸಾಂನಲ್ಲಿ ಗ್ರೆನೇಡ್ ಸ್ಫೋಟ: ಓರ್ವ ಸಾವು

ಗ್ರೆನೇಡ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ರೌಟಾ ಮಾರ್ಕೆಟ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ರಾಮಚಂದ್ರ ಬರ್ಮನ್ ಎಂದು ಗುರಿತಿಸಲಾಗಿದ್ದು,...

ಮುಂಬೈ ಸರಣಿ ಸ್ಫೋಟ ಪ್ರಕರಣ: ಯಾಕೂಬ್‌ ಮೆಮೋನ್‌ ಗೆ ಗಲ್ಲು ಶಿಕ್ಷೆ

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ತನಗೆ ನೀಡಲಾಗಿರುವ ಮರಣ ದಂಡನೆಯ ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಯಾಕೂಬ್‌ ಅಬ್ದುಲ್‌ ರಝಾಕ್‌ ಮೆಮೋನ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ನಿಟ್ಟಿನಲ್ಲಿ ಮೆಮೋಮ್ ಗೆ ಯಾವುದೇ ಹೊತ್ತಿನಲ್ಲಿ...

ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ 5 ಐ.ಎಸ್.ಐ ಏಜೆಂಟರ ಎನ್ ಕೌಂಟರ್

'ಹೈದ್ರಾಬಾದ್' ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿ ವಿಕಾರುದ್ದೀನನ್ನೂ ಸೇರಿ ಐದು ಜನ ಪಾಕಿಸ್ತಾನದ ಐ.ಎಸ್.ಐ ಏಜೆಂಟರನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಏ.7ರಂದು ಪ್ರಕರಣದ ವಿಚಾರಣೆಗಾಗಿ ಹಾಜರು ಪಡಿಸಲು 5 ಐ.ಎಸ್.ಐ ಏಜೆಂಟರನ್ನು ತೆಲಂಗಾಣದ...

ಬಿಹಾರದಲ್ಲಿ ಕಡಿಮೆ ತೀವ್ರತೆ ಬಾಂಬ್ ಸ್ಫೋಟ

'ಬಿಹಾರ'ದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ರಾಜ್ಯದ ಬಹದೂರ್ ಪುರದಲ್ಲಿ ಕಡಿಮೆ ತೀವ್ರತೆಯ ಕ್ರೇನ್ ಬಾಂಬ್ ಸ್ಫೋಟಗೊಂಡಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ. ಫ್ಲಾಟ್ ಒಂದರಲ್ಲಿ ಬಾಂಬ್ ತಯಾರಿಸುತ್ತಿರುವಾಗಲೇ ಸ್ಫೋಟಗೊಂಡಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ...

ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟಕ್ಕೂ ಪಾಟ್ನಾ ಸ್ಫೋಟಕ್ಕೂ ಸಾಮ್ಯತೆ

ಚರ್ಚ್‌ ಸ್ಟ್ರೀಟ್‌ ಬಾಂಬ್‌ ಸ್ಫೋಟ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯವು ತನ್ನ ವರದಿಯನ್ನು ನಗರ ಪೊಲೀಸರಿಗೆ ಸಲ್ಲಿಸಿದ್ದು, ಈ ವರದಿಯಲ್ಲಿ ಪಾಟ್ನಾ ಸ್ಫೋಟದಲ್ಲಿ ಸಿಕ್ಕ ಅವಶೇಷಗಳಿಗೂ, ಚರ್ಚ್‌ಸ್ಟ್ರೀಟ್‌ನಲ್ಲಿ ಸಿಕ್ಕ ವಸ್ತುಗಳಿಗೂ ಸಾಮ್ಯತೆ ಕಂಡುಬಂದಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ...

ಭಾರತದ ಮುಸ್ಲಿಮರಿಗೆ ವಿಶೇಷ ಸ್ಥಾನಮಾನ ಬೇಕಾದರೆ ಪಾಕಿಸ್ತಾನಕ್ಕೆ ತೆರಳಲಿ: ಶಿವಸೇನೆ

ಭಾರತದಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ ವಿಶೇಷ ಸ್ಥಾನಮಾನ ಬೇಕಾದರೆ ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಶಿವಸೇನೆ ಹೇಳಿದೆ. ಭಾರತದಿಂದ ಮುಸ್ಲಿಮರಿಗೇನಾದರೂ ಬೇಕಾದರೆ ಅವರು ಮೊದಲು ಭಾರತವನ್ನು ತಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳಲಿ ಅಂತೆಯೇ ವಂದೇ ಮಾತರಂ ನ ಒಪ್ಪಿಕೊಳ್ಳಲಿ, ಅವರು ತಮ್ಮ...

ಪಾಕ್‌ ಬೋಟ್‌ ಸ್ಫೋಟ ಪ್ರಕರಣ: ಡಿಐಜಿ ಲೋಶಾಲಿ ವರ್ಗಾವಣೆ

ಪಾಕಿಸ್ತಾನ ಮೂಲದ ಶಂಕಿತ ಉಗ್ರರ ಬೋಟ್‌ ಅನ್ನು ಸ್ಫೋಟಿಸಲು ತಾನೇ ಆದೇಶ ನೀಡಿದ್ದಾಗಿ ಹೇಳಿಕೆ ನೀಡಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದ ಕರಾವಳಿ ಪಡೆ ಡಿಐಜಿ ಬಿ.ಕೆ.ಲೋಶಾಲಿ ಅವರನ್ನು ವಾಯವ್ಯ ಕರಾವಳಿ ವಲಯ ಮುಖ್ಯಸ್ಥ ಹುದ್ದೆಯಿಂದ ಕಿತ್ತುಹಾಕಲಾದ್ದು, ಬೇರೊಂದು ವಲಯಕ್ಕೆ ವರ್ಗಾವಣೆ...

ಪಾಕ್ ಬೋಟು ಸ್ಫೋಟಿಸಿದ್ದು ನಾವಲ್ಲ: ಡಿಐಜಿ ಬಿ.ಕೆ.ಲೋಶಾಲಿ

ಕಳೆದ ವರ್ಷ ಡಿಸೆಂಬರ್ 31ರಂದು ಗುಜರಾತ್‌ ನ ಪೋರಬಂದರ್ ಕರಾವಳಿ ತೀರದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಪಾಕ್‌ ಉಗ್ರರ ಬೋಟನ್ನು ನಾವು ಸುಟ್ಟಿಲ್ಲ, ಅವರೇ ಸ್ಫೋಟಿಸಿಕೊಂಡಿದ್ದು ಎಂದು ಕೋಸ್ಟ್‌ಗಾರ್ಡ್‌ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಬಿ.ಕೆ.ಲೋಶಾಲಿ ಸ್ಪಷ್ಟನೆ ನೀಡಿದ್ದಾರೆ. ದೋಣಿಯನ್ನು ಸ್ಪೋಟಿಸಿಬಿಡಿ. ನಾವು ಅವರಿಗೆ ಬಿರಿಯಾನಿ...

ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ: ಮಹತ್ವದ ಮಾಹಿತಿ ಲಭ್ಯ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಚ್‌ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಕುರಿತು ವಿಶೇಷ ತನಿಖಾ ತಂಡಕ್ಕೆ...

ಬಿಹಾರದಲ್ಲಿ ಬಾಂಬ್ ಸ್ಫೋಟ: ಇಬ್ಬರು ಬಲಿ

ಬಿಹಾರದ ನ್ಯಾಯಾಲಯವೊಂದರ ಬಳಿ ಬಾಂಬ್ ಸ್ಫೋಟ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿನ ಅರಾ ನಗರದಲ್ಲಿನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಓರ್ವ ಮಹಿಳೆ ಹಾಗೂ ಓರ್ವ ಪೊಲೀಸ್ ಪೇದೆ ಸಾವು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ...

ಏರ್ ಏಷ್ಯಾ ವಿಮಾನ ಪತನ: ವಾಯು ಒತ್ತಡದಿಂದ ಸ್ಫೋಟ

ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ವಿಮಾನವು ಸಮುದ್ರದಲ್ಲಿ ಬೀಳುವುದಕ್ಕೂ ಮೊದಲೇ ಆಗಸದಲ್ಲೇ ಸ್ಫೋಟಗೊಂಡಿದೆ. ವಿಮಾನದಲ್ಲಿ ವಾಯು ಒತ್ತಡ ತೀವ್ರ ಪ್ರಮಾಣದಲ್ಲಿ ಏರುಪೇರಾಗಿದ್ದರಿಂದ ವಿಮಾನ ಸ್ಫೋಟಗೊಂಡಿರಬಹುದು ಎಂದು ಹಿರಿಯ ತನಿಖಾಧಿಕಾರಿ ಸುಪ್ರಿಯದಿ ಹೇಳಿದ್ದಾರೆ. ರಾಷ್ಟ್ರೀಯ ಶೋಧನಾ...

ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ: ನಾಲ್ವರು ಉಗ್ರರ ಬಂಧನ-ಸಿಎಂ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಬಂಧಿತ ಉಗ್ರರ ತೀವ್ರ ವಿಚಾರಣೆ ನಡೆಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು. ಉಗ್ರರ ಬಗ್ಗೆ ಮೃದುಧೋರಣೆ ತಲೆಯುವ ಪ್ರಶ್ನೆಯೇ ಇಲ್ಲ...

ಪ್ಯಾರಿಸ್ ನ ಲಿಯಾನ್ ಬಳಿ ಸ್ಫೋಟ

ಫ್ರಾನ್ಸ್ ನ ಪ್ಯಾರಿಸ್ ನಗರದ ಲಿಯಾನ್ ಬಳಿ ಸ್ಫೋಟ ಸಂಭವಿಸಿದ್ದು, ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ಸಮಯದ ಹಿಂದಷ್ಟೇ ದಕ್ಷಿಣ ಪ್ಯಾರಿಸ್ ನಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆದ ಬೆನ್ನಲ್ಲೇ ಪ್ಯಾರಿಸ್ ನ ಮಸೀದಿ ಪಕ್ಕದಲ್ಲಿರುವ ಕಟ್ಟದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ...

ಹಡಗು ಸ್ಫೋಟದ ಹಿಂದೆ ಲಷ್ಕರ್ ಕೈವಾಡ: ಗುಪ್ತಚರ ಇಲಾಖೆ ಶಂಕೆ

ಪೋರಬಂದರ್ ಕರಾವಳಿಯಲ್ಲಿ ಪಾಕಿಸ್ತಾನದ ಬೋಟ್ ಸ್ಫೋಟಗೊಂಡಿರುವುದರ ಹಿಂದೆ ಲಷ್ಕರ್-ಇ-ತೋಯ್ಬಾ ಕೈವಾಡವಿರಬಹುದು ಎಂದು ಗುಪ್ತಚರ ಇಲಾಖೆ ಶಂಕಿಸಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 31ರಂದು ತಡರಾತ್ರಿ ಗುಜರಾತ್‌ನ ಪೋರಬಂದರ್‌ನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡಿದ್ದ ಪಾಕಿಸ್ತಾನದ ಹಡಗು ಸ್ಫೋಟಗೊಂಡಿತ್ತು. ಇದನ್ನು ಪಾಕ್ ಮೂಲದ ಉಗ್ರರು ಸ್ಫೋಟಿಸಿದ್ದಾರೆ ಎಂದು...

ಕಾಂಗ್ರೆಸ್ಸಿಗರು ಚುನಾವಣೆ ಎದುರಿಸುವುದು ಭಾರತದಲ್ಲೋ ಪಾಕಿಸ್ತಾನದಲ್ಲೋ?: ಅಮಿತ್ ಶಾ

ಗುಜರಾತ್ ನ ಕರಾವಳಿ ಪ್ರದೇಶದಲ್ಲಿ ಸ್ಫೋಟಗೊಂಡಿರುವ ಹಡಗಿನ ಬಗ್ಗೆ ತಮ್ಮದೇ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಚುನಾವಣೆ ಎದುರಿಸುತ್ತಿರುವುದು ಭಾರತದಲ್ಲೋ ಅಥವಾ ಪಾಕಿಸ್ತಾನದಲ್ಲೋ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಒಡಿಶಾಗೆ...

ಪಾಕ್ ಬೋಟ್ ಪತ್ತೆ ಹಿನ್ನಲೆ: ಸಮುದ್ರ ತೀರದಲ್ಲಿ ಕಟ್ಟೆಚ್ಚರ

ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಗಳು ಪತ್ತೆ ಪ್ರಕರಣ ಹಿನ್ನಲೆಯಲ್ಲಿ ಸಮುದ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಕರಾವಳಿ ಕಾವಲು ಪಡೆಗೆ ಕೇಂದ್ರ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಗುಜರಾತ್ ಸಮುದ್ರ ತೀರದಲ್ಲಿ 173 ಮೆರಿನ್ ಕಮಾಂಡೋಗಳನ್ನು ನೌಕಾಪಡೆ ನಿಯೋಜಿಸಿದೆ . ಸಮುದ್ರದಲ್ಲಿ ಸಂಚರಿಸುವ ಬೋಟ್...

ಬೋಟ್ ಸ್ಫೋಟ ಪ್ರಕರಣ:ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ

ಪೋರಬಂದರ್ ಕರಾವಳಿಯಲ್ಲಿ ಪಾಕಿಸ್ತಾನ ಬೋಟ್ ಸ್ಫೋಟ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಕಾಂಗ್ರೆಸ್ ಹೊಸ ವಿವಾದ ಸೃಷ್ಟಸಿದೆ. ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ. ಈ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿನಾಕಾರಣ ವೈಭವೀಕರಿಸುತ್ತಿದೆ. ಈ ಮೂಲಕ ರಾಜಕೀಯ ಲಾಭ...

ಸಮುದ್ರದಲ್ಲಿ ಪತ್ತೆಯಾದ ಬೋಟ್ ಗಳು ಪಾಕ್ ನದ್ದು: ಪರಿಕ್ಕರ್ ಸ್ಪಷ್ಟನೆ

ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಪತ್ತೆ ಪ್ರಕರಣ ಸಮುದ್ರದಲ್ಲಿ ಪತ್ತೆಯಾದ ಬೋಟ್ ಗಳು ಪಾಕಿಸ್ತಾನದ್ದು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಜ.1ರಂದುಪಾಕ್ ನ 2ಬೋಟ್ ಗಳು ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿತ್ತು. ಅಂತರಾಷ್ಟ್ರೀಯ ಜಲಮಾರ್ಗದಲ್ಲಿ...

ಕಾಂಗ್ರೆಸ್ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಿದ್ದೇವೆ: ಅಮಿತ್ ಶಾ

ಕಾಂಗ್ರೆಸ್ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸುತ್ತಿದ್ದೇವೆ. ಇದಕ್ಕೆ ರೂಪುರೇಷೆ ಸಿದ್ಧಪಡಿಸಲೆಂದು ಆಗಮಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಿಹೆಪಿ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ....

ಸ್ಫೋಟವಾದ ಹಡಗು ನಮ್ಮದಲ್ಲ: ಪಾಕಿಸ್ತಾನ

ಅರಬ್ಬಿ ಸಮುದ್ರದಲ್ಲಿ ಪತ್ತೆಯಾದ ಹಡಗುಗಳು ಪಾಕಿಸ್ತಾನದ ಹಡಗುಗಳಲ್ಲ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಮಾಹಿತಿ ರವಾನಿಸಿದೆ. ಕರಾಚಿಯಿಂದ ಯಾವುದೇ ಹಡಗು ಭಾರತದತ್ತ ಬಂದಿಲ್ಲ. ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಹಡಗುಗಳಲ್ಲ. ಕೇಟಿ ಬಂದರಿನಿಂದ...

ಪಶ್ಚಿಮ ಬಂಗಾಳದಲ್ಲಿ ಕಚ್ಛಾ ಬಾಂಬ್ ಸ್ಫೋಟ

ಕಚ್ಛಾ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಸಂಭವಿಸಿದೆ. ದುರ್ಗಾಪುರದ ಪ್ರದೇಶವೊಂದರಲ್ಲಿ ಬೆಳಿಗ್ಗೆ ಕಚ್ಛಾ ಬಾಂಬ್ ತಯಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಂಬ್ ಸ್ಫೋಟವಾಗಿದೆ. ಈ ಸಂದರ್ಭದಲ್ಲಿ ಬಾಂಬ್ ತಯಾಕೆಯಲ್ಲಿ ತೊಡಗಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದೆ. ಗಾಯಾಳುಗಳನ್ನು...

ಬೆಂಗಳೂರು ಬಾಂಬ್ ಬ್ಲಾಸ್ಟ್‌ಗೆ ಕಾಂಗ್ರೆಸ್ ಕಾರಣ: ಆರ್. ಅಶೋಕ್

ಇತ್ತೀಚೆಗೆ ಚರ್ಚ್ ರಸ್ತೆಯ ಕೋಕನಟ್ ಗ್ರೋವ್ ಹೊಟೇಲ್ ಸಮೀಪ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ...

ಪಾಕ್ ನಿಂದ ದೆಹಲಿಗೆ 10 ಉಗ್ರರು ನುಸುಳಿರುವ ಶಂಕೆ: ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ

'ಹೊಸ ವರ್ಷಾಚರಣೆ' ವೇಳೆ ಉಗ್ರರು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಪಾಕಿಸ್ತಾನದಿಂದ ದೆಹಲಿಗೆ 10 ಉಗ್ರರು ನುಸುಳಿದ್ದು ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ....

ಮೆಹ್ದಿ ಬಿಡುಗಡೆ ಮಾಡದಿದ್ದರೆ ಮತ್ತೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ

ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಬಿಡದಿದ್ದರೆ ಇನ್ನೆರಡು ದಿನದಲ್ಲಿ ಮತ್ತೆ ಬಾಂಬ್ ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಬೆದರಿಕೆ ಹಾಕಿದ್ದಾನೆ. ಅಬ್ದುಲ್ ಖಾನ್ ಎಂಬಾತ ತನ್ನ ಟ್ವಿಟರ್ ಖಾತೆಯಿಂದ ಈ ಬೆದರಿಕೆ ನೀಡಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕಾನೂನು ಸಚಿವ ಡಿವಿ ಸದಾನಂದಗೌಡ ಅವರ...

ಮುಂಬೈನಲ್ಲಿ ಸಿಮಿ ಉಗ್ರರ ದಾಳಿ ಸಂಭವ

ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ಬಳಿಕ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮುಂಬೈ, ಪುಣೆ, ದೆಹಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್‌ ಸೇರಿದಂತೆ ದೇಶದಾದ್ಯಂತ ಹೈ ಆಲರ್ಟ್‌ ಘೋಷಿಸಲಾಗಿದೆ. ಬೆಂಗಳೂರು ದಾಳಿಯ ನಂತರ ಮುಂಬೈ ಅನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದಾರೆ. ಸಿಮಿ ಉಗ್ರ ಸಂಘಟನೆ ಮುಂಬೈ...

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ: ಮಹಿಳೆ ಬಲಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬೆಂಗಳೂರಿನ ಎಂ.ಜಿ.ರಸ್ತೆ ಬಳಿಯ ಜನನಿಭಿಡ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟವಾಗಿದ್ದು, ಐಇಡಿ ಬಾಂಬ್ ಬಳಸಿ ಸ್ಫೋಟಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದು, ಇಬ್ಬರಿಗೆ...

ಬೆಂಗಳೂರಿನಲ್ಲಿ ಸ್ಫೋಟ: ಉನ್ನತ ಅಧಿಕಾರಿಗಳ ಸಭೆ ಕರೆದ ರಾಜನಾಥ್ ಸಿಂಗ್

ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಇಂಟಲಿಜನ್ಸ್ ಬ್ಯೂರೋ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬಾಂಬ್ ಸ್ಫೋಟ...

ನೂತನ ವರ್ಷಾಚರಣೆ ಸಂಭ್ರಮಾಚರಣೆ ಅವಧಿ ಕಡಿತ

ನಗರದಲ್ಲಿ ನಡೆದಿರುವ ಬಾಂಬ್‌ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ನೂತನ ವರ್ಷಾಚರಣೆಯ ಸಂಭ್ರಮಕ್ಕೆ ಕಡಿವಾಣ ಹಾಕಲಾಗಿದೆ. ಚರ್ಚ್‌ಸ್ಟ್ರೀಟ್‌ನಲ್ಲಿ ರಾತ್ರಿ ಬಾಂಬ್‌ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಹಾಗೂ ಬ್ರಿಗೆಡ್ ರಸ್ತೆಗಳಲ್ಲಿ ನೂತನ ವರ್ಷ ಸಂಭ್ರಮಾಚರಣೆಗೆ ಈ ಹಿಂದೆ ನೀಡಿದ್ದ ಎರಡು ಗಂಟೆವರೆಗಿನ ಅವಧಿಯಲ್ಲಿ ಒಂದು...

ಬೆಂಗಳೂರು ಸ್ಫೋಟದ ಹಿಂದೆ ಅಲ್-ಉಮಾ ಸಂಘಟನೆ ಕೈವಾಡದ ಶಂಕೆ

ಬೆಂಗಳೂರು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ನಿಷೇಧಿತ ಉಗ್ರ ಸಂಘಟನೆ ಅಲ್-ಉಮಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಜಿಲ್ಲೆಗೆ ಭೇಟಿ ನೀಡಿದ್ದು ತನಿಖೆ ಮುಂದುವರೆಸಿದ್ದಾರೆ....

ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ: ಸಿಎಂ

ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ಅಂತ್ಯಗೊಂಡಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನಸಂದಣಿ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಭದ್ರತೆ ಇನಷ್ಟು ಹೆಚ್ಚಿಸಲು ಕ್ರಮ...

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ ರದ್ದು

ಬೆಂಗಳೂರಿನಲ್ಲಿ ಜ.19ರಂದು ನಡೆಯಬೇಕಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ ರದ್ದುಗೊಂಡಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದಿರುವ ಕಾರಣ ಸಭೆಯನ್ನು ರದ್ದುಗೊಳಿಸಲಾಗಿದೆ. ಜ.19,20ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ...

ದಾವೂದ್ ನನ್ನು ಭಾರತಕ್ಕೆ ಒಪ್ಪಿಸಿ: ಪಾಕ್ ಗೆ ಕಿರಣ್ ರಿಜಿಜು ಆಗ್ರಹ

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡಲೇ ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಪಾಕಿಸ್ತಾನಕ್ಕೆ ಆಗ್ರಹಿಸಿದ್ದಾರೆ. ಭೂಗತ ಪಾತಕಿ, 1993 ಮುಂಬೈ ಸರಣಿ ಸ್ಫೋಟ ರೂವಾರಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ಕುರಿತು ಬಲವಾದ ಸಾಕ್ಷ್ಯಾಧಾರ ದೊರೆತ ಹಿನ್ನಲೆಯಲ್ಲಿ ಲಖನೌನಲ್ಲಿ...

ಕರಾಚಿಯಲ್ಲಿಯೇ ಇರುವ ದಾವೂದ್ ಇಬ್ರಾಹಿಂ: ದೂರವಾಣಿ ಸಂಭಾಷಣೆ ಲಭ್ಯ

ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಸ್ಪಷ್ಟಪಡಿಸಿದೆ. ಖಾಸಗಿ ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ ಈಗಲೂ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಪ್ರಬಲ ಸಾಕ್ಷ್ಯಾಧಾರ ದೊರೆತಿದ್ದು,...

ಮಣಿಪುರದ ರಾಜಧಾನಿ ಇಂಫಾಲ್ ನಲ್ಲಿ ಐಇಡಿ ಸ್ಫೋಟ: 3 ಸಾವು

'ಮಣಿಪುರ'ದ ರಾಜಧಾನಿ ಇಂಫಾಲ್ ನಲ್ಲಿ ಐಇಡಿ ಸ್ಫೋಟಗೊಂಡಿರುವ ಪರಿಣಾಮ 3 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಐಇಡಿ ಇಟ್ಟು ಸ್ಫೋಟಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿ.21ರ ಬೆಳಿಗ್ಗೆ ನಡೆದ ಘಟನೆಯಲ್ಲಿ 4 ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು...

ಪಾಕಿಸ್ತಾನದ ಶಾಲೆ ಮೇಲೆ ಉಗ್ರರ ದಾಳಿ: ಬಾಂಬ್ ಸ್ಫೋಟಕ್ಕೆ 12 ವಿದ್ಯಾರ್ಥಿಗಳು ಬಲಿ

'ಪಾಕಿಸ್ತಾನ'ದ ಪೇಷಾವರ್ ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು 12 ಜನ ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಡಿ.16ರಂದು ಮಧ್ಯಾಹ್ನದ ವೇಳೆಯಲ್ಲಿ ಪೇಷಾವರ್ ನಲ್ಲಿರುವ ಶಾಲೆಗೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿದ್ದು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಆರು ಜನ ಉಗ್ರರು ಶಾಲಾ...

ಪಶ್ಚಿಮ ಬಂಗಾಳ ಸ್ಫೋಟ ಪ್ರಕರಣ: ಮತ್ತೋರ್ವ ಶಂಕಿತ ಆರೋಪಿ ಸೆರೆ

ಪಶ್ಚಿಮ ಬಂಗಾಳದ ಬದ್ವಾರ್ನ್ ನಲ್ಲಿ ಅ.2ರಂದು ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಮತ್ತೋರ್ವ ಶಂಕಿತ ಆರೋಪಿಯನ್ನು ಬಂಧಿಸಿದೆ. ಪ್ರಕರಣದ ನಾಲ್ಕನೆಯ ಆರೋಪಿ ಎಂದು ಶಂಕಿಸಲಾಗುತ್ತಿರುವ ಶಹನೂರ್ ಆಲಂ ಎಂಬಾತನನ್ನು ಅಸ್ಸಾಂನಲ್ಲಿ ಬಂಧಿಸಿದೆ. ಶಹನೂರ್ ಆಲಂ, ಜಮಾತ್ ಉಲ್ ಮುಜಾಹಿದ್ದೀನ್...

ಅಸ್ಸಾಂ ನ ಮಾರುಕಟ್ಟೆಯಲ್ಲಿ ಸ್ಫೋಟ :ಓರ್ವನ ಸಾವು, 27 ಮಂದಿಗೆ ತೀವ್ರ ಗಾಯ

'ಅಸ್ಸಾಂ' ನ ಡಿಬ್ರೂಗರ್ ಜಿಲ್ಲೆಯ ರಾಜ್ ಗರ್ ನಲ್ಲಿ ನ.23ರ ರಾತ್ರಿ ಸಂಭವಿಸಿದ್ದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, 27 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ರಾಜ್ ಗರ್ ನ ಮಾರುಕಟ್ಟೆಯಲ್ಲಿ ಭಾನುವಾರ ರಾತ್ರಿ ಸ್ಫೋಟ ಸಂಭವಿಸಿತ್ತು. ಕಚ್ಚಾ ಬಾಂಬ್ ಅಥವಾ ಐಇಡಿಯಿಂದ ಸ್ಫೋಟ ಸಂಭವಿಸಿದರ...

ಬುರ್ದ್ವಾನ್ ಸ್ಫೋಟ ಪ್ರಕರಣ: ನಾಲ್ವರ ಬಂಧನ

ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ನಡೆದ ಸ್ಫೋಟದ ಪ್ರಮುಖ ರೂವಾರಿ ಸಾಜೀದ್‌ನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಾಂಗ್ಲಾದೇಶದಲ್ಲಿ ಮುಂಜಾನೆ ಬಂಧಿಸಿದ್ದಾರೆ. ಬಾಂಗ್ಲಾದೇಶದ ನಿಷೇಧಿತ ಇಸ್ಲಾಮಿ ಉಗ್ರ ಸಂಘಟನೆಯಾದ ಜಮಾಲ್-ಉಲ್-ಮುಜಾಹಿದೀನ್ (ಜೆಎಂಬಿ) ಸಂಘಟನೆಯ ಸದಸ್ಯರಾಗಿರುವ ಸಾಜೀದ್‌ನ ಪತ್ನಿ ಫಾತೀಮಾ ಬೇಗಂ, ಮೊಹ್ಮದ್ ಇಷ್ರಾತ್...

ಬರ್ದ್ವಾನ್ ಸ್ಫೋಟ ಪ್ರಕರಣ: ಮ್ಯಾನ್‌ಮಾರ್ ಪ್ರಜೆ ಬಂಧನ

ಪಶ್ಚಿಮ ಬಂಗಾಳದ ಬರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಹೈದ್ರಾಬಾದ್‌ನಲ್ಲಿ ಮ್ಯಾನ್‌ಮಾರ್ ಪ್ರಜೆಯೊಬ್ಬನನ್ನು ಬಂಧಿಸಿದೆ. ಬಂಧಿತ ವ್ಯಕ್ತಿಯನ್ನು 21ರ ಹರೆಯದ ಖಾಲಿದ್ ಮಹಮ್ಮದ್ ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ರಾಜಧಾನಿಯಲ್ಲಿ ನಕಲಿ ದಾಖಲೆ ಹೊಂದಿ ವಾಸವಾಗಿದ್ದ ಎನ್ನಲಾಗಿದೆ. ಖಾಲಿದ್, ತೆಹರೀಕ್-ಇ-ತಾಲೀಬಾನ್...

ಗಡಿ ರಾಜ್ಯಗಳ ಮದರಸಾಗಳಲ್ಲಿ ವಿದೇಶಿ ಶಿಕ್ಷಕರು: ಸಮೀಕ್ಷೆ ನಡೆಸಲು ಕೇಂದ್ರದ ನಿರ್ಧಾರ

ನೆರೆ ರಾಷ್ಟ್ರಗಳೊಂದಿಗೆ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ರಾಜ್ಯಗಳ ಮದರಸಾಗಳಲ್ಲಿ ವಿದೇಶಿಗರು ಬೋಧನೆ ಮಾಡುತ್ತಿರುವುದರ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ನ ಮದರಸಾದಲ್ಲಿ ಸ್ಫೋಟ ಪ್ರಕರಣ ನಡೆದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ....

ಬುರ್ದ್ವಾನ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್‌ ಪೊಲೀಸರ ವಶಕ್ಕೆ

ಬುರ್ದ್ವಾನ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್‌ನನ್ನು ಕೊರಿಯರ್ ಒಂದು ಹುಡುಕಿಕೊಟ್ಟಿದ್ದು, ಪಶ್ಚಿಮ ಬಂಗಾಳ ಪೊಲೀಸರು ಸಾಜಿದ್ ಆಕಾ ಶೇಖ್ ರೆಹಮತ್ ಉಲ್ಲಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಾಂಗ್ಲಾದೇಶದಲ್ಲಿ ನಿಷೇಧಿತ ಉಗ್ರ ಸಂಘಟನೆಯಾಗಿರುವ ಇಂಡಿಯಾ ಮಾಡ್ಯುಲ್ ಆಫ್ ಜಮಾತ್ ಸಂಘಟನೆ ಮುಖ್ಯಸ್ಥ ಸಾಜಿದ್ ಖಾನ್‌ನನ್ನು...

ತಾಲೀಬಾನ್ ಉಗ್ರರ ಗುಂಪಿನಿಂದ ಪ್ರಧಾನಿ ಮೋದಿಗೆ ಜೀವ ಬೆದರಿಕೆ

ಪಾಕಿಸ್ತಾನದ ತಾಲೀಬಾನ್ ಸಂಘಟನೆಯಿಂದ ಪ್ರತ್ಯೇಕಗೊಂಡಿರುವ ಜಮತ್ ಉಲ್ ಅಹ್ರಾರ್ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ವಾಘಾ ಗಡಿ ಭಾಗದಲ್ಲಿ ನಡೆದ ಸ್ಫೋಟದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಟ್ವಿಟರ್...

ವಾಘಾ ಗಡಿಯಲ್ಲಿ ಸ್ಫೋಟ: ಪಾಕ್-ಭಾರತ ನಡುವಿನ ಭೂಮಾರ್ಗ ವ್ಯಾಪಾರ ಚಟುವಟಿಕೆ ಸ್ಥಗಿತ

'ವಾಘಾ ಗಡಿ'ಯಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ನಡುವಿನ ವ್ಯಾಪಾರ ವಹಿವಾಟುಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರತಿನಿತ್ಯ ಪಾಕಿಸ್ತಾನ-ಭಾರತ ಗಡಿ ಪ್ರದೇಶದಲ್ಲಿ ಟ್ರಕ್ ಗಳ ಮೂಲಕ ತರಕಾರಿ, ಹಣ್ಣು ಸೇರಿದಂತೆ ವಿವಿಧ ಉತ್ಪನ್ನಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ವಾಘಾ ಗಡಿಯಲ್ಲಿ...

ಲವ್ ಜಿಹಾದ್ ಮೂಲಕ ಬಂಗಾಳದಲ್ಲಿ ಉಗ್ರ ಚಟುವಟಿಕೆ ವರ್ಧನೆ: ಸ್ಪೋಟಕ ಮಾಹಿತಿ

'ಪಶ್ಚಿಮ ಬಂಗಾಳ'ದ ಬುರ್ದ್ವಾನ್ ಸ್ಫೋಟದ ತನಿಖೆ ನಡೆಸುತ್ತಿರುವ ಎನ್.ಐ.ಎ ಲವ್ ಜಿಹಾದ್ ಮುಖವಾಡ ಕಳಚಿದ್ದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಮಾಲ್ಡ ಮತ್ತು ನಾಡಿಯಾ ಪ್ರದೇಶಗಳಲ್ಲಿ ಉಗ್ರರ ಸೇನೆ ಕಟ್ಟಲು 12 ಉಗ್ರ ಜೋಡಿಗಳು ಸನ್ನದ್ಧರಾಗಿದ್ದಾರೆ ಎಂಬ ಅಘಾತಕಾರಿ ಅಂಶ ಬಯಲು ಮಾಡಿದೆ....

ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ

ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಹಟಿಚಪ ಗ್ರಾಮದಲ್ಲಿನ ಮನೆಯೊಂದರಲ್ಲಿ ಕಚ್ಚಾ ಬಾಂಬ್ ತಯಾರು ಮಾಡುತ್ತಿದ್ದ ವೇಳೆ ಸ್ಫೋಟ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ...

ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: ಉಗ್ರರು ಬಲಿ

ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡು ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬರ್ದ್ವಾನ್ ನಲ್ಲಿ ನಡೆದಿದೆ. ಇಲ್ಲಿನ ಖಗ್ರಗರ್ ನ ಮನೆಯೊಂದರಲ್ಲಿ ಶಂಕಿತ ಉಗ್ರರು ಬಾಂಬ್ ತಯಾರಿಸುತ್ತಿದ್ದರು. ಈ ವೇಳೆ ಘಟನೆ ಸಂಬಂವಿಸಿದೆ. ಈ ಮನೆ ತೃಣಮೂಲ...

ಇನ್ಫೋಸಿಸ್ ಹಾಗೂ ಗೋವಾ ದಾಳಿಗೆ ಸಿಮಿ ಸಂಘಟನೆ ಸಂಚು

ಮಂಗಳೂರು ಇನ್ಫೋಸಿಸ್ ಕಛೇರಿ ಸ್ಫೋಟಿಸಿ ವಿಧ್ವಂಸಕ ಕೃತ್ಯ ನಡೆಸಲು ಸಿಮಿ ಭಯೋತ್ಪಾದಕ ಸಂಘಟನೆ ಸಂಚು ರೂಪಿಸಿತ್ತು. ಅಲ್ಲದೇ ಗೋವಾದ ಪ್ರಮುಖ ಬೀಚ್ ಗಳಲ್ಲಿ ಬಾಂಬ್ ಸ್ಪೋಟಿಸಿ, ವಿದೇಶಿಯರನ್ನು ಅದರಲ್ಲೂ ವಿಶೇಷವಾಗಿ ಇಸ್ರೇಲ್ ಪ್ರಜೆಗಳನ್ನು ಹತ್ಯೆ ಮಾಡಲು ಯೋಜಿಸಿತ್ತು ಎಂಬ ಆಘಾತಕಾರಿ ಸಂಗತಿ ಬಯಲಿಗೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited